Israel Iran War: ಅಮೆರಿಕದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ : ಆರ್ಥಿಕ ಕುಸಿತ ಭೀತಿ : ಪಾತಾಳಕ್ಕಿಳಿದ ಹೂಡಿಕೆದಾರರ ಸಂಪತ್ತು
Israel Iran War: ಇಸ್ರೇಲ್- ಇರಾನ್ ಮಧ್ಯೆ ಯುದ್ಧ (Israel Iran War) ಭೀತಿ ಎದುರಾದ ಹಿನ್ನೆಲೆ ಇದು ಅಮೆರಿಕದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಎದುರಾಗಿದೆ. ಇದರಿಂದ ಆರ್ಥಿಕ ಹಿಂಜರಿತ (USA Recession) ಉಂಟಾಗುವ ಲಕ್ಷಣ ಕಾಣಿಸುತ್ತಿದೆ. ಅಲ್ಲದೆ ಹಲವಾರು ಕಾರಣಗಳಿಂದ ಷೇರು ಮಾರುಕಟ್ಟೆಯಲ್ಲೂ (Share Market) ಭಾರಿ ಕುಸಿತ ಉಂಟಾದ ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 17 ಲಕ್ಷ ಕೋಟಿ ರೂ. ಕರಗಿದೆ.
ಇಂದು ಬೆಳಗ್ಗೆಯೇ ಗಿಫ್ಟ್ ನಿಫ್ಟಿ 300 ಅಂಕ ಇಳಿಕೆ ಕಂಡಿತ್ತು. ಈ ಕಾರಣದಿಂದ ಬಾಂಬೆ ಷೇರು ಮಾರುಕಟ್ಟೆಯಲ್ಲೂ (BSE) ಕೂಡ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಇಳಿಕೆಯಾಗಬಹುದು ಎಂದು ಊಹಿಸಲಾಗಿತ್ತು. ಸಂಜೆ ವೇಳೆಗೆ ನಿರೀಕ್ಷೆಯಂತೆ ಸೆನ್ಸೆಕ್ಸ್ 2,500 ಅಂಕ ಕೆಳಗಿಳಿದರೆ, ನಿಫ್ಟಿ 760 ಅಂಕ ಪತನಗೊಂಡಿತು.
ಅಮೇರಿಕದಲ್ಲಿ ಷೇರು ಮಾರುಕಟ್ಟೆ ಪತನವಾಗಲು ಕಾರಣ ಏನು? ಹಾಗೆ ಅಮೆರಿಕದಲ್ಲಿ ಯಾಕೆ ಆರ್ಥಿಕ ಹಿಂಜರಿತ ಭೀತಿ ಎದುರಾಗಿದೆ ಅನ್ನೋದನ್ನು ನೋಡೋದಾದರೆ, ಅಮೆರಿಕದಲ್ಲಿ ಉದ್ಯೋಗ ಅವಕಾಶಗಳ ಬೆಳವಣಿಗೆಗೆ (Job Growth) ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ. ಕಾರ್ಮಿಕ ಇಲಾಖೆಯು ಕಳೆದ ತಿಂಗಳು ಕೇವಲ 1,14,000 ಉದ್ಯೋಗಿಳ ನೇಮಕ ಮಾಡಿ ಕೊಂಡಿದೆ. ಆದರೆ 1,75,000 ಉದ್ಯೋಗಿಗಳ ನೇಮಕವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಅಮೆರಿಕದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೋಲಿಸಿದರೆ ಪ್ರತಿ ತಿಂಗಳು 2 ಲಕ್ಷ ಉದ್ಯೋಗ ಸೃಷ್ಟಿಯಾಗಬೇಕು. ಅಮೆರಿಕದಲ್ಲಿ ಇದೀಗ ನಿರುದ್ಯೋಗ (Unemployment) ದರವು 4.3%ಕ್ಕೆ ಏರಿಕೆಯಾಗಿದೆ. ಇದು ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ ಎನ್ನಲಾಗುತ್ತಿದೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳಿಂದ ಇಸ್ರೇಲ್‌ನ ಮೇಲೆ ಸಂಭಾವ್ಯ ದಾಳಿಗಳು ಹೆಚ್ಚಾದ ಕಾರಣ ಮಾರುಕಟ್ಟೆಯ ಮೇಲೆ ಇದು ಪರಿಣಾಮ ಬೀರಿದೆ. ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ದಾಳಿ ನಡೆಸಬಹುದು ಎಂದು ಅಮೆರಿಕ ಹೇಳಿಕೆ ನೀಡಿರುವುದು ಕೂಡ ಪರಿಣಾಮ ಬೀರಿದೆ.