Bengaluru: ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್​!

Bengaluru: ಬೆಂಗಳೂರಿನಲ್ಲಿ ಸದ್ಯ ನಮ್ಮ ಮೆಟ್ರೋ ಬಿಎಂಆರ್​ಸಿಎಲ್​ ಕಾಮಗಾರಿಗಳು ವೇಗದ ಗತಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆ ಇದರಿಂದ ಬೆಂಗಳೂರು (Bengaluru) ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.  ಮುಖ್ಯವಾಗಿ ಹೊರ ವರ್ತುಲ ರಸ್ತೆಯ (Outer Ring Road) ಐಬಿಐಎಸ್​ ಹೊಟೇಟಲ್​ನಿಂದ ದೇವರಬೀಸನಹಳ್ಳಿ ಜಂಕ್ಷನ್​ವರೆಗಿನ ಸರ್ವಿಸ್​ ರಸ್ತೆಯಲ್ಲಿ ಒಂದು ವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸದ್ಯ ಸರ್ವಿಸ್​ ರಸ್ತೆಯಲ್ಲಿ ಬಿಎಂಆರ್​ಸಿಎಲ್ (BMRCL)​ ಮತ್ತು ಬೆಸ್ಕಾಂ (BSCOM) ವತಿಯಿಂದ ಕೇಬಲ್​​ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಆಗಸ್ಟ್​​ 13ರವರೆಗೆ ಈ ರಸ್ತೆಯಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿ ಎಂದು ಬೆಂಗಳೂರು ಸಂಚಾರ ಪೊಲೀಸ್​​ ಮಾಧ್ಯಮ ಪ್ರಕಟಣೆ ಹೊರಡಸಿದೆ.

ಜೊತೆಗೆ ಬದಲಿ ಮಾರ್ಗ ಸೂಚಿಸಲಾಗಿದೆ. ಪರ್ಯಾಯ ಮಾರ್ಗ ಕಾಮಗಾರಿ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ ದೇವರಬಿಸನಹಳ್ಳಿ ಮೇಲು ಸೇತುವೆ ಮೂಲಕ ಸಂಚರಿಸಬಹುದಾಗಿದೆ.

Leave A Reply

Your email address will not be published.