Akash samadhi: ಈ ದೇಶದಲ್ಲಿ ಹೆಣ ಸುಡಲ್ಲ ಹಾಗೂ ಹೂಳಲ್ಲ: ಹಾಗಾದ್ರೆ ಶವಗಳನ್ನು ಇಲ್ಲಿ ಏನು ಮಾಡ್ತಾರೆ ?

Akash samadhi: ನಮ್ಮ ದೇಶ ಭಾರತದಲ್ಲಿ ಧಾರ್ಮಿಕವಾಗಿ ಸತ್ತ ವ್ಯಕ್ತಿಗೆ ವಿಧಿ ವಿಧಾನಗಳನ್ನು ಮಾಡಿ ಗೌರವದಿಂದ ಶವ ಸಂಸ್ಕಾರ ಮಾಡಿ ಇಹಲೋಕದಿಂದ ಕಳುಹಿಸಿ ಕೊಡಲಾಗುತ್ತದೆ. ಭಾರತದಲ್ಲಿ ಶವಗಳನ್ನು ಸುಡುವ ಅಥವಾ ಹೂಳುವ ಈ ಎರಡೂ ಕ್ರಮ ಇದೆ. ಆದರೆ ಸತ್ತವರನ್ನು ಕಳುಹಿಸಿಕೊಡುವ ರೀತಿ ಬೇರೆ ಬೇರೆ ಧರ್ಮದಲ್ಲಿ ಬೇರೆ ಬೇರೆ ರೀತಿ ಇದೆ. ಆದರೆ ಇಲ್ಲೊಂದು ದೇಶದಲ್ಲಿ ಸತ್ತವರ ಹೆಣವನ್ನು ಹೂಳೋದೂ ಇಲ್ಲ, ಅತ್ತ ಸುಡೋದೂ ಇಲ್ಲ. ಹಾಗಾದ್ರೆ ಇವರು ಶವಗಳನ್ನು ಏನ್ ಮಾಡುತ್ತಾರೆ?

ವಿಶ್ವದಾದ್ಯಂತ ಅಂತ್ಯಕ್ರಿಯೆಗಳನ್ನು ವಿವಿಧ ಕ್ರಮಗಳಲ್ಲಿ ಮಾಡಲಾಗುತ್ತದೆ. ಕೆಲವು ಧರ್ಮದಲ್ಲಿ ಮೃತ ದೇಹವನ್ನು ಸುಟ್ಟರೆ, ಇನ್ನು ಕೆಲವರು ಅದನ್ನು ಹೂಳುತ್ತಾರೆ. ಕೆಲವರಲ್ಲಿ ನದಿಗೆ ಎಸೆಯುವ ಪದ್ಧತಿಯೂ ಇದೆಯಂತೆ. ಆದರೆ ಈ ದೇಶದ ಪದ್ಧತಿ ವಿಶೇಷವಾಗಿದೆ. ಈ ದೇಶದಲ್ಲಿ ಶವಸಂಸ್ಕಾರ ಮಾಡಲು ಪುರಾತನ ಸಂಪ್ರದಾಯವನ್ನು ಅನುಸರಿಸುತ್ತಾರೆ. ಇದನ್ನು ಆಕಾಶ ಸಮಾಧಿ ಅಥವಾ ಜಾತರ್ ಎಂದು ಕರೆಯುತ್ತಾರೆ. ಆದರೆ ಈ ವಿಧಾನ ಅತ್ಯಂತ ಕ್ರೂರ ಎಂದು ಕೆಲವರು ಭಾವಿಸುತ್ತಾರೆ.

ಈ ದೇಶ ಯಾವುದೆಂದರೆ ಟಿಬೆಟ್. ಇಲ್ಲಿಯ ಧಾರ್ಮಿಕ ಆಚರಣೆಗಳೆ ವಿಶೇಷವಾಗಿರುತ್ತವೆ. ಇವರ ಶವ ಸಂಸ್ಕಾರದ ವಿಧಾನವನ್ನು ಸ್ಕೈ ಬರಿಯಲ್ ಅಥವಾ ಝಟೋರ್ ಎಂದು ಕರೆಯುತ್ತಾರೆ. ಇಲ್ಲಿ ಸತ್ತವರ ಶವಗಳನ್ನು ತೆಗೆದುಕೊಂಡು ಹೋಗಿ ರಣಹದ್ದು, ಗಿಡುಗ, ಕಾಗೆಗಳಿಗೆ ತಿನ್ನಲು ಅತೀ ಎತ್ತರದ ಸ್ಥಳದಲ್ಲಿ ಇಡಲಾಗುತ್ತದೆ. ಕಳೆದ 1100 ವರ್ಷಗಳಿಂದ ಟಿಬೆಟ್‌ನಲ್ಲಿ ಈ ಆಕಾಶ ಸಮಾಧಿ ಸಂಪ್ರದಾಯ ಆಚರಣೆಯಲ್ಲಿದೆ. ಹಿಂದೂ ಧರ್ಮದಲ್ಲಿ ಇರುವಂತೆ ಬೌದ್ಧ ಧರ್ಮದಲ್ಲೂ ಕೂಡ ಪುನರ್ಜನ್ಮವನ್ನು ನಂಬುತ್ತಾರೆ. ಶವಗಳನ್ನು ಎತ್ತರದಲ್ಲಿ ಇಟ್ಟು ಶವಸಂಸ್ಕಾರ ಮಾಡಿದರೆ ಸತ್ತವರು ಸ್ವರ್ಗಕ್ಕೆ ಹೋಗಲು ದಾರಿ ಸಿಗುತ್ತದೆ ಎಂಬ ನಂಬಿಕೆ.

ಟಿಬೆಟ್‌ ಟ್ರಾವೆಲ್ ಪ್ರಕಾರ ಟಿಬೆಟಿಯನ್ನ ಬೌದ್ಧ ಅನುಯಾಯಿಗಳು ಸತ್ತಾಗ, ದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿಡಲಾಗುತ್ತದೆ. ಅದನ್ನು 3-5 ದಿನಗಳವರೆಗೆ ಮನೆಯ ಒಂದು ಮೂಲೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭದಲ್ಲಿ ಬೌದ್ಧ ಸನ್ಯಾಸಿಗಳು ಮತ್ತು ಲಾಮಾಗಳು ಆತ್ಮದ ಶುದ್ಧೀಕರಣಕ್ಕಾಗಿ ಧಾರ್ಮಿಕ ಪಠಣಗಳನ್ನು ಪಠಿಸುತ್ತಾರೆ. ಇದರ ನಂತರ ಅವರನ್ನು ಸಮಾಧಿ ಮಾಡುವ ಅದೃಷ್ಟದ ದಿನವನ್ನು ನಿರ್ಧರಿಸುತ್ತಾರೆ. ಶವವನ್ನು ಎತ್ತರದ ಸ್ಥಳಗಳಾದ ಗುಡ್ಡಗಾಡು ಪ್ರದೇಶಗಳಲ್ಲಿ ಇಡಲಾಗುತ್ತದೆ. ಅದು ಅಲ್ಲೇ ಕೊಳೆತು ವಾಸನೆ ಬರಲಾರಂಭಿಸುತ್ತದೆ.

ಈ ವಾಸನೆಗೆ ರಣಹದ್ದುಗಳು, ಗಿಡುಗಗಳು ಮತ್ತು ಕಾಗೆಗಳನ್ನು ಆಕರ್ಷಿತವಾಗಿ ಆಸೆಯಿಂದ ಹಾರಿ ಬರುತ್ತವೆ. ಆ ಸನ್ನಿವೇಶದಲ್ಲಿ ಒಬ್ಬ ಸಮಾಧಿ ಯಜಮಾನ ಅನ್ನುವವನು ಬಂದು ಶವವನ್ನು ಸಣ್ಣದಾಗಿ ತುಂಡರಿಸುತ್ತಾನೆ. ಹಾಗೆ ಮಾಡಿದರೆ ಪಕ್ಷಿಗಳಿಗೆ ಶವವನ್ನು ಸುಲಭವಾಗಿ ತಿನ್ನಲು ಸಹಾಯವಾಗುತ್ತದೆ.

ಆಕಾಶ ಸಮಾಧಿ ಎಂದರೆ ರಣಹದ್ದುಗಳ ಮೂಲಕ ಶವವನ್ನು ವಿಲೇವಾರಿ ಮಾಡೋದು. ಇಲ್ಲಿ ಕೆಲವರು ಆಕಾಶ ಸಮಾಧಿಯನ್ನು ಅತ್ಯಂತ ಕ್ರೂರವೆಂದು ಪರಿಗಣಿಸಿದ್ದಾರೆ. ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಈರೀತಿಯ ಅಂತ್ಯಸಂಸ್ಕಾರದ ಪದ್ಧತಿಯನ್ನು ನಿಷೇಧಿಸಲಾಗಿದೆ. ಟಿಬೆಟ್ ವಿಸ್ಟಾ ಪ್ರಕಾರ, ಟಿಬೆಟಿಯನ್ ಬೌದ್ಧರು ಒಂದು ವೇಳೆ ಅಮೆರಿಕಾದಲ್ಲಿ ಮರ ಣಹೊಂದಿ ಅವರು ಆಕಾಶ್ ಸಮಾಧಿಯ ಇಚ್ಚೆ ವ್ಯಕ್ತಪಡಿಸಿದರೆ, ಅವರ ದೇಹವನ್ನು ಅನುಮತಿ ಮೂಲಕ ಟಿಬೆಟ್‌ಗೆ ರವಾನಿಸಲಾಗುತ್ತದೆ. ಟಿಬೆಟ್‌ನಲ್ಲಿ ಅವರ ವಿಧಿ ವಿಧಾನದ ಪ್ರಕಾರ ಆಕಾಶ ಸಮಾಧಿಯನ್ನು ಮಾಡಲಾಗುತ್ತದೆ.

1 Comment
  1. vlyuxoadbp says

    Muchas gracias. ?Como puedo iniciar sesion?

Leave A Reply

Your email address will not be published.