Sakaleshpura: ಭರದಿಂದ ಸಾಗುತ್ತಿದೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಹಳಿ ದುರಸ್ಥಿ : ಯಾವಾಗ ಆರಂಭಗೊಳ್ಳಲಿದೆ ಮಂಗಳೂರು-ಬೆಂಗಳೂರು ರೈಲು ಓಡಾಟ..?
Sakaleshapura: ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ಘಾಟ್ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಭಾರಿ ಕುಸಿತಗೊಂಡ ಪರಿಣಾಮ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು(Bengaluru-Mangalore) ರೈಲು ಸಂಚಾರ ಯಾವಾಗ ಆರಂಭಗೊಳ್ಳಲಿದೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ. ಅತ್ತ ಶಿರಾಡಿ ಘಾಟ್ ರಸ್ತೆಯೂ ಬಂದ್ ಆಗಿರುವ ಹಿನ್ನೆಲೆ ಮಂಗಳೂರು- ಬೆಂಗಳುರು ಓಡಾಟ ಬಹಳ ತ್ರಾಸದಾಯಕವಾಗಿದೆ. ಭೂ ಕುಸಿತಗೊಂಡ ಹಿನ್ನೆಲೆ ೧೨ ರೈಲುಗಳ ಓಡಾಟ ಸ್ಥಗಿತಗೊಂಡಿದೆ. ಇಂದಿನವರೆಗೆ ಇದ್ದ ರದ್ದು ಆದೇಶವನ್ನು ನೈಋತ್ಯ ರೈಲ್ವೆ ವಲಯವು ಆಗಸ್ಟ್ 6 ರವರೆಗೆ ಮತ್ತೆ ಎಲ್ಲಾ 12 ರೈಲುಗಳ ಓಡಾಟವನ್ನು ಮತ್ತೆ ಮುಂದೂಡಿದೆ. ಆಗಸ್ಟ್ 7ರಿಂದ ಆದರೂ ರೈಲುಗಳು ಓಡಾಟ ನಡೆಸಬಹುದೇ ಎಂದು ನಿರೀಕ್ಷಿಸಲಾಗಿದೆ.
ಕಳೆದ ಒಂದು ವಾರದಿಂದ ಬರೋಬ್ಬರಿ 400 ಜನರ ತಂಡ ಯಡಕುಮೇರಿ ಮತ್ತು ಕಡಗರವಳ್ಳಿ ಮಧ್ಯೆ ನಡೆದ ಗುಡ್ಡಕುಸಿತದ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೇವಲ ೧೦ ದಿನಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸುವ ಮೂಲಕ ರೈಲು ಹಳಿಗಳನ್ನು ದುರಸ್ಥಿಗೊಳಿಸಿದ್ದಾರೆ. ರಿಪೇರಿ ಮಾಡಲಾದ ಹಳಿಗಳ ಮೇಲೆ ರೈಲು ಓಡಿಸುವ ಮೂಲಕ ಪರೀಕ್ಷೆಯನ್ನು ಮಾಡಲಾಗಿದೆ. ಹಾಗಾಗಿ ಆದಷ್ಟು ಬೇಗ ಈ ಮಾರ್ಗದಲ್ಲಿ ಓಡಾಡುತ್ತಿದ್ದ 12 ರೈಲುಗಳು ಮತ್ತೆ ಆಗಸ್ಟ್ 7ರ ನಂತರ ಸಂಚಾರ ಆರಂಭ ಮಾಡಲಿವೆ ಎಂಬ ನಿರೀಕ್ಷೆಯಿದೆ.
ರೈಲು ಬುಕ್ಕಿಂಗ್ ಮಾಡಿದವರ ಟಿಕೆಟನ್ನು ಆಗಸ್ಟ್ 7ರಿಂದ ಕಾಯ್ದಿರಿಸಲಾಗಿದೆ. ಈ ರೈಲು ಮಾರ್ಗ ದುರಸ್ತಿಯನ್ನು ರಾತ್ರಿ- ಹಗಲು ಲೆಕ್ಕಿಸದೆ ರೈಲ್ವೆ ವಲಯದ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. ಹಗಲಿನಲ್ಲಿ 200 ಮಂದಿ ಕಾರ್ಮಿಕರು ಹಾಗೂ ರಾತ್ರಿ ಪಾಳಿಯಲ್ಲಿ 120 ಮಂದಿ ಕಾರ್ಯಚರಿಸಿದ್ದಾರೆ. ಇದರೊಂದಿಗೆ 110 ಮಂದಿ ಘಟನಾ ಜಾಗದಲ್ಲಿದ್ದು ಕಾರ್ಯಾಚರಣೆಗೆ ಅಗತ್ಯ ನೆರವು ನೀಡಿದ್ದಾರೆ. ಕಾರ್ಯ ಸ್ಥಳದಲ್ಲೇ ಸೇಪ್ಪಿ ಶೂ, ಪೋರ್ಟೇಬಲ್ ಟಾಯ್ಲೆಟ್ಸ್, ಟೆಂಟ್, ರೈನ್‌ರೋಟ್ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗುತಿತ್ತು.
ಇಷ್ಟೆ ಅಲ್ಲದೆಡ ವೈದ್ಯರ ತಂಡ, ನರ್ಸಿಂಗ್ ಸಿಬ್ಬಂದಿ ಜೊತೆಗೆ ಅಗತ್ಯ ಮೆಡಿಕಲ್ ಸಾಮಗ್ರಿಗಳನ್ನು ಪೂರೈಸಲಾಗಿದೆ. ಇದರ ಜೊತೆಗೆ 6 ಹಿಟಾಚಿ, 5 ಫೋನ್ ಮೆಷಿನ್, 3870 ಕಲ್ಲುಗಳು, 1 ಲಕ್ಷ ಮರಳು ಚೀಲಗಳು, ಪ್ರತಿದಿನ 200 ಲೀಟರ್‌ನಷ್ಟು ಡೀಸೆಲ್, 8 ಪೋರ್ಟೇಬಲ್ ಜನರೇಟರ್, 60 ಪ್ಲಡ್ ಲೈಟ್ಸ್, 8 ಟಾರ್ಚ್‌ಗಳು, 10 ಎಕ್ಸ್‌ಟೆನ್ಸನ್ ಬೋರ್ಡ್, 140 ಲೀಟರ್ ಪೆಟ್ರೋಲ್, ಗ್ಯಾಸ್ ಕಟ್ಟರ್‌ಗಳನ್ನು ಕಾರ್ಯಾಚರಣೆಗೆ ಉಪಯೋಗಿಸಿಕೊಳ್ಳಲಾಗಿತ್ತು. ಇನ್ನು ಯಡಕುಮೇರಿ, ದೋಣಿಗಲ್, ಕಡಗರವಳ್ಳಿ ಮುಂತಾದ ಈ ದುರ್ಗಮ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಂಪೂರ್ಣ ಇಲ್ಲವಾಗಿದೆ. ಹಾಗಾಗಿ ಸಂವಹನಕ್ಕಾಗಿ ಸ್ಯಾಟಲೈಟ್ ಫೋನ್, ವೈಫೈ, ಅಟೋ ಫೋನ್, ಕಂಟ್ರೋಲ್ ಫೋನ್, ಹಾಗೂ ವಿಎಸ್‌ಟಿ ಕಮ್ಯುನಿಕೇಶನ್ ಬಳಸಿಕೊಳ್ಳಲಾಗಿದೆ. ನಂತರ ಈವುಗಳ ಮುಖಾಂತರ ಹುಬ್ಬಳ್ಳಿಯಲ್ಲಿ ಇರುವ ವಾರ್ ರೂಂ ಜೊತೆ ನಿರಂತರ ಸಂಪರ್ಕ ಸಾಧಿಸಿಕೊಂಡು ಕಾರ್ಯಾಚರಣೆ ಕೆಲಸವನ್ನು ಮಾಡಲಾಗಿತ್ತು.