Marriage Class: ಇನ್ಮೇಲೆ ಕಾಲೇಜಿನಲ್ಲಿ ಮದುವೆ ಬಗ್ಗೆ ಪಾಠ; ಇನ್ನು ಫುಲ್ ಅಟೆಂಡೆನ್ಸ್ ! ಅಷ್ಟಕ್ಕೂ ರೂಲ್ಸ್ ತಂದ ರಸಿಕ ಯಾರು ಗೊತ್ತಾ?
Marriage Class: ಕಾಲೇಜ್ ಹೋಗೋ ಹುಡುಗ ಹುಡುಗಿಯರನ್ನು ಪ್ರೀತಿ ಪ್ರೇಮದಿಂದ ದೂರ ಇಡಲು ಸಾಧ್ಯವಿಲ್ಲ. ಆದರೆ ಇದನ್ನು ಬೆಂಬಲಿಸುವ ಪೋಷಕರು, ಅಥವಾ ಸಮಾಜ ತುಂಬಾ ಕಡಿಮೆ. ಆದರೆ ಇಲ್ಲೊಂದು ದೇಶದಲ್ಲಿ ಕಾಲೇಜ್ ಹುಡುಗ ಹುಡುಗಿಯರು ಪ್ರೀತಿ ಮಾಡಲಿ ಅಂತ ಸರ್ಕಾರವೇ ರಜೆಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಮೂಲಕ ನಿಮಗೆ ಬೇಕಾದ ಸಂಗಾತಿಯನ್ನು ಅರಿಸಿಕೊಳ್ಳಿ ಎಂದು ಅನುಮತಿ ನೀಡಿತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕಾಲೇಜಿನಲ್ಲಿ ಮದುವೆ ಆಗೋದು ಹೇಗೆ ಅನ್ನುವ ಬಗ್ಗೆ ಹಾಠ ಪ್ರವಚನ ಇಟ್ಟಿದೆಯಂತೆ. ಇದರ ಹಿಂದಿನ ಕಾರಣ ಜನನ ಪ್ರಮಾಣವನ್ನು ಜಾಸ್ತಿ ಮಾಡೋದು.
ಹೌದು ನಮ್ಮ ಪಕ್ಕದ ದೇಶ ಚೀನಾ ಒಂದು ಕಾಲದಲ್ಲಿ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿತು. ಈಗ ಭಾರತ ಅದನ್ನು ಹಿಂದಿಕ್ಕಿದೆ. ಅದರೆ ಅಲ್ಲಿ ಯುವಕರ ಸಂಖ್ಯೆ ಕ್ಷೀಣಿಸುತ್ತಿದೆ. ಇದು ದೇಶದ ಆರ್ಥಿಕತೆಗೆ ಬಹು ದೊಡ್ಡ ಹೊಡೆತ ನೀಡುತ್ತಿದೆ. ಹೀಗಾಗಿ ಒಂದೇ ಮಗು ಸಾಕು ಎಂದು ಇದ್ದ ನೀತಿಯನ್ನು ಸಡಿಲಗೊಳಿಸಿ, ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಿದೆ. ಹಾಗಿದ್ದರೂ ದಿನದಿಂದ ದಿನಕ್ಕೆ ಜನಸಂಖ್ಯೆ ಕುಸಿತ ಕಾಣುತ್ತಿದೆ. ಇದೀಗ ಜನಸoಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜಕೀಯ ಸಲಹೆಗಾರರು ಸರ್ಕಾರಕ್ಕೆ ಬಗೆ ಬಗೆಯ ಐಡಿಯಾಗಳನ್ನು ಶಿಫಾರಸು ಮಾಡುತ್ತಿದ್ದಾರೆ. ಇದರ ಭಾಗವಾಗಿ ಚೀನಾ ಕಾಲೇಜು ಹಂತದಲ್ಲೇ ಮದುವೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಹೊಸ ಐಡಿಯಾ ಮಾಡಿದೆ.
ಸಕಾರಾತ್ಮಕ ಮದುವೆ ಮತ್ತು ಕುಟುಂಬ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಚೀನಾದ ಕೇಂದ್ರೀಯ ವಿಶ್ವವಿದ್ಯಾನಿಲಯವು ಈ ಹೊಸ ಪದವಿ ಪೂರ್ವ ಕಾರ್ಯಕ್ರಮವನ್ನು ಪರಿಚಯಿಸಿದೆ. ‘ಮದುವೆ ಸೇವೆಗಳು ಮತ್ತು ನಿರ್ವಹಣೆ’ ಹೆಸರಿನ ಯೋಜನೆ ಆರಂಭಿಸಿದೆ. ಚೀನಾದ ಯುವಜನತೆ ಮದುವೆ ಬಗ್ಗೆ ಕಡಿಮೆ ಅಸಕ್ತಿ ಹೊಂದಿದ್ದಾರೆ. ಹಾಗಾಗಿ ಅವರಿಗೆ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಕಾಲೇಜು ಹಂತದಲ್ಲೇ ಮದುವೆ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ.
ಚೀನಾ ಸರ್ಕಾರ ತಡ ಮಾಡದೆ ಬರುವ ಸೆಪ್ಟೆಂಬರ್‌ನಿಂದಲ್ಲೇ ಬೀಜಿಂಗ್ ಸಂಸ್ಥೆಯಲ್ಲಿ ಈ ಪದವಿ ಪೂರ್ವ ಕೋಸ್‌ನ್ನು ಆರಂಭಿಸಲು ನಿರ್ಧರಿಸಿದೆ. ಈ ಕೋರ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವುದಾಗಿ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಝಾವೊ ಹಾಂಗ್‌ಗಾಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಕೋರ್ಸ್‌ನಲ್ಲಿ ಮದುವೆ ಸಂಬಂಧಿತ ಮ್ಯಾಟ್ರಿಮೋನಿ ಆರಂಭಿಸಲು ಮತ್ತು ಕೌಟುಂಬಿಕ ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಕೌಟುಂಬಿಕ ಸಮಾಲೋಚನೆ, ಉನ್ನತ ಮಟ್ಟದ ವಿವಾಹ ಯೋಜನೆ ಮತ್ತು ಮ್ಯಾಚ್‌ಮೇಕಿಂಗ್ ಮಾಡುವ ಕುರಿತ ವಿಷಯಗಳು ಇರುತ್ತವೆ. ಹಾಗೂ ಮ್ಯಾಚ್‌ಮೇಕಿಂಗ್ ಏಜೆನ್ಸಿಗಳು, ವಿವಾಹ ಸೇವಾ ಕಂಪನಿಗಳು ಮತ್ತು ಮದುವೆ, ಕುಟುಂಬ ಸಮಾಲೋಚನೆ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಪಡೆಯಲು ಸಹಾಯವಾಗಲಿದೆ.