Wayanad Landslide: ವಯನಾಡು ದುರಂತದಲ್ಲಿ ಅನಾಥವಾದ ಸಾಕು ಪ್ರಾಣಿಗಳು : ಮನುಷ್ಯರು ಮಾತ್ರವಲ್ಲ ಪ್ರಾಣಿಗಳ ರಕ್ಷಣೆಗೆ ನಿಂತ ಕೇರಳ

Wayanad Landslide: ವಯನಾಡು ದುರಂತಕ್ಕೆ ಇಂದಿಗೆ ಆರನೇ ದಿನ. ರಕ್ಷಣಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ಬದುಕುಳಿದ ಮನುಷ್ಯರನ್ನು ಅಲ್ಲದೆ ಹೆಣಗಳನ್ನು ಹುಡುಕಿ ತೆಗೆಯೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಭೂಕುಸಿತದ ಪ್ರವಾಹಕ್ಕೆ ಕೇವಲ ಮನುಷ್ಯರು ಮಾತ್ರವಲ್ಲ, ಆ ಗ್ರಾಮದಲ್ಲಿದ್ದ ಸಾವಿರಾರು ಜಾನುವಾರುಗಳು, ನಾಯಿಗಳು ಸಿಲುಕಿಕೊಂಡಿವೆ. ಇದೀಗ ಕೇರಳ ಸರ್ಕಾರ ಸಾಕುಪ್ರಾಣಿಗಳಿಗಾಗಿ ಚೂರಲ್ಮಲಾದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಭೂಕುಸಿತದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗೆ ಕಂಟ್ರೋಲ್‌ ರೂಮ್‌ ತೆರೆದಿದೆ. ಇನ್ನು ಮುಂದೆ ಪ್ರವಾಹಕ್ಕೆ ಸಿಕ್ಕಿ ತಮ್ಮ ಮನೆಯವರನ್ನು ಕಳೆದುಕೊಂಡ ಪ್ರಾಣಿಗಳು ಅನಾಥವಾಗುವುದಿಲ್ಲ. ಅವುಗಳನ್ನು ಕಾಪಾಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

 

ಗಾಯಗೊಂಡಿರುವ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ತದನಂತರ, ಅವುಗಳನ್ನು ದತ್ತು ತೆಗೆದುಕೊಳ್ಳಲು ಸಿದ್ಧರಿರುವ ಸುತ್ತ ಮುತ್ತಲ ಗ್ರಾಮಗಳ ಹೈನುಗಾರರಿಗೆ ಪ್ರಾಣಿ ಕಲ್ಯಾಣ ಇಲಾಖೆ ಮುಖಾಂತರ ದತ್ತು ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 24 ಗಂಟೆಯೂ ಚೂರಲ್‌ಮಲಾ ನಿಯಂತ್ರಣ ಕೊಠಡಿ ಕಾರ್ಯಾಚರಣೆ ಕೈಗೊಳ್ಳಲಿದೆ. ಅನಾಥ ಪ್ರಾಣಿಗಳನ್ನು ದತ್ತು ಪಡೆಯುವ ಹೈನುಗಾರರ ಹೆಸರುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಪ್ರಸ್ತುತ, ಎನ್‌ಜಿಒಗಳು ಮತ್ತು ಸ್ವಯಂಸೇವಕರ ಮುಖಾತರ ಕಾರ್ಯಚರಣೆಯಲ್ಲಿ ಸಿಕ್ಕ ಅನಾಥ ಪ್ರಾಣಿಗಳಿಗೆ ಆಹಾರ-ನೀರನ್ನು ಒದಗಿಸು ಕಾರ್ಯ ಮಾಡಲಾಗುತ್ತದೆ.

ಚೂರಲ್ಮಲಾ ದುರಂತದ ಸ್ಥಳದಿಂದ ಚೇತರಿಸಿಕೊಂಡ ಎರಡು ಸಣ್ಣ ನಾಯಿಗಳನ್ನು ಮಿಲಿಟರಿ ಮತ್ತು ಪೊಲೀಸ್ ವಿಶೇಷ ರಕ್ಷಣಾ ತಂಡಕ್ಕೆ ಹಸ್ತಾಂತರಿಸಲಾಯಿತು. ಚೂರಲ್ಮಳ, ಮುಂಡಕೈ ಸೇರಿದಂತೆ ವಿಕೋಪ ಪೀಡಿತ ಸ್ಥಳಗಳಲ್ಲಿ ಜೀವಂತವಾಗಿ ಹಾಗೂ ಸತ್ತಿರುವ ಸಾಕುಪ್ರಾಣಿ-ಪಕ್ಷಿಗಳನ್ನು ನಿಯಂತ್ರಣ ಕೊಠಡಿಗೆ ಕರೆತಂದು ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಪಶು ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರಾಧಿಕಾರಿಗಳನ್ನು ಒಳಗೊಂಡ ತಂಡ ಎರಡು ಬ್ಯಾಚ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೇಪಾಡಿಯಲ್ಲಿ ದುರಂತದಲ್ಲಿ ಸಾವನ್ನಪ್ಪಿದ ಪ್ರಾಣಿಗಳ ದೇಹವನ್ನು ನಾಶಪಡಿಸುವ ವ್ಯವಸ್ಥೆ ಮಾಡಲಾಗಿದೆ.

Leave A Reply

Your email address will not be published.