Waqf Board: ವಕ್ಫ್‌ ಬೋರ್ಡ್ ಅಧಿಕಾರಕ್ಕೆ ಬ್ರೇಕ್ ಹಾಕಲು ಕೇಂದ್ರದಿಂದ ಸಿದ್ಧತೆ !! ಸದ್ದಿಲ್ಲದೆ ಮೋದಿ ಸರ್ಕಾರ ಮಾಡಿದ್ದೇನು ?

Waqf Board: 3ನೇ ಸಲ ಅಧಿಕಾರಕ್ಕೆ ಏರಿದ ಬಳಿಕ ಕೆಲವೇ ತಿಂಗಳಲ್ಲಿ ಮಹತ್ವದ ಕಾನೂನುಗಳನ್ನು ಜಾರಿಗೊಳಿಸುತ್ತಿರುವ ಮೋದಿ ಸರ್ಕಾರ ಇದೀಗ ವಕ್ಫ್ ಮಂಡಳಿಯ (Waqf Board) ಅಧಿಕಾರ ಮತ್ತು ಅದರ ಕಾರ್ಯಚಟುವಟಿಕೆಗೆ ತಿದ್ದುಪಡಿ ಮಾಡುವ ಸಂಬಂಧ ಈ ವಾರ ಸಂಸತ್ತಿನಲ್ಲಿ ಮಸೂದೆಯನ್ನು ತರುವ ಸಾಧ್ಯತೆ ಇದೆ.

 

ಹೌದು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಯಾವುದೇ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಮಾಡುವ ವಕ್ಫ್ ಮಂಡಳಿಯ ಅಧಿಕಾರಕ್ಕೆ ಕಡಿವಾಣ ಹಾಕಲು ಬಯಸಿದೆ ಎನ್ನಲಾಗಿದ್ದು, ಹೀಗಾಗಿ ಶುಕ್ರವಾರ ಸಂಜೆ ಸಚಿವ ಸಂಪುಟವು ವಕ್ಫ್ ಕಾಯಿದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ಅಂಗೀಕರಿಸಿದೆ ಎಂದು ಮೂಲಗಳು ಹೇಳಿವೆ. ಈ ಮೂಲಕ ವಕ್ಫ್ ಅಧಿಕಾರ ಮತ್ತು ದೇಶಾದ್ಯಂತ ಇರುವ ಲಕ್ಷಾಂತರ ಕೋಟಿ ಮೌಲ್ಯದ ಅದರ ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸಲು ಹೊರಟಿದೆ.

ತಿದ್ದುಪಡಿ ಮಸೂದೆಯಲ್ಲಿ ಏನಿದೆ?
ಈ ಹಿಂದೆ ಪ್ರಶ್ನಾತೀತ ಆಗಿದ್ದ ವಕ್ಫ್ ನ ಪ್ರತಿಯೊಂದು ಆಸ್ತಿಯನ್ನೂ ಪರಿಶೀಲನೆ ನಡೆಸುವ ಬಗ್ಗೆ ಪ್ರಸ್ತಾಪಿತ ತಿದ್ದುಪಡಿಯಲ್ಲಿ ಉಲ್ಲೇಖವಿದೆ. ಅದೇ ರೀತಿ ಆಸ್ತಿ ಮಾಲೀಕರು ಮತ್ತು ವಕ್ಫ್ ಗೂ ಇರುವ ವ್ಯಾಜ್ಯಗಳನ್ನೂ ಕಡ್ಡಾಯ ಪರಿಶೀಲನೆ ಮಾಡುವ ಅಗತ್ಯ ಇದೆ ಎಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.

ಈಗಿರುವ ಕಾಯ್ದೆಗೆ ವಿರೋಧವೇಕೆ?
ಈಗಿರುವ ಕಾಯಿದೆಗೆ ತಿದ್ದುಪಡಿ ತರಬೇಕು ಎಂದು ದೇಶದಲ್ಲಿ ಬಹಳಷ್ಟು ಬುದ್ಧಿಜೀವಿಗಳು, ಮಹಿಳೆಯರು ಮತ್ತು ಶಿಯಾ, ಬೋಹ್ರಾ ಸೇರಿದಂತೆ ವಿವಿಧ ಮುಸ್ಲಿಂ ಪಂಗಡಗಳ ಅನುಯಾಯಿಗಳು ಒತ್ತಾಯಿಸುತ್ತಲೇ ಬಂದಿದ್ದಾರೆ. ಹೀಗಾಗಿ 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಈ ತಿದ್ದುಪಡಿಗೆ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಒಮಾನ್, ಸೌದಿ ಅರೇಬಿಯಾ ಸೇರಿದಂತೆ ಯಾವುದೇ ಇಸ್ಲಾಮಿಕ್ ದೇಶದ ಕಾನೂನು ಸಹ ಯಾವದೇ ಒಂದು ಘಟಕಕ್ಕೆ ಇಷ್ಟು ಪರಮಾಧಿಕಾರ ನೀಡಿಲ್ಲ ಎಂಬುದು ಸಚಿವ ಸಂಪುಟದ ವಾದವಾಗಿದೆ.

ತಿದ್ದುಪಡಿಯ ಪರಿಣಾಮವೇನು?
ವಕ್ಫ್ ಬೋರ್ಡ್ ಹೆಚ್ಚು ಕ್ರಿಯಾಶೀಲವಾಗಿರುವ ಮತ್ತು ಸಾಕಷ್ಟು ಭೂಮಿ ಹೊಂದಿರುವ ಉತ್ತರ ಪ್ರದೇಶದಂತಹ ಪ್ರದೇಶಗಳಲ್ಲಿ ಈ ತಿದ್ದುಪಡಿ ನೇರ ಪರಿಣಾಮ ಬೀರುತ್ತದೆ ಎಂದು ತಜ್ಞರು ನಂಬಿದ್ದಾರೆ. 2013ರಲ್ಲಿ ಯುಪಿಎ ಸರಕಾರ ಮೂಲ ಕಾಯಿದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಿತ್ತು. ವಕ್ಫ್ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ, ಇದರ ಒಟ್ಟು ವಿಸ್ತೀರ್ಣ ಸುಮಾರು 9.4 ಲಕ್ಷ ಎಕರೆಗಳು ಆಗಿದೆ. ವಕ್ಫ್ ಕಾಯಿದೆ, 1995 ‘ಔಕಾಫ್’ (ಆಸ್ತಿಯನ್ನು ದೇಣಿಗೆ ನೀಡಿ ವಕ್ಫ್ ಎಂದು ಸೂಚಿಸಲಾಗುತ್ತದೆ) ನಿಯಂತ್ರಿಸಲು ಜಾರಿಗೊಳಿಸಲಾಗಿದ್ದು, ಮುಸ್ಲಿಂ ಕಾನೂನಿನಿಂದ ಪವಿತ್ರ, ಧಾರ್ಮಿಕ ಅಥವಾ ದತ್ತಿ ಎಂದು ಗುರುತಿಸಲ್ಪಟ್ಟ ಯಾವುದೇ ಉದ್ದೇಶಕ್ಕಾಗಿ ಆಸ್ತಿಯನ್ನು ಅರ್ಪಿಸಬಹುದು.

Leave A Reply

Your email address will not be published.