Viral News: ಇದು ಮದರಸಾ ಅಲ್ಲ, ಕಾಲೇಜು’ – ಗಡ್ಡ ಬಿಟ್ಟ ವಿದ್ಯಾರ್ಥಿಯನ್ನು ಹೊರಹಾಕಿದ ಪ್ರಾಂಶುಪಾಲ

Share the Article

Viral News: ಉತ್ತರಪ್ರದೇಶ: ವಿದ್ಯಾರ್ಥಿಯೊಬ್ಬ ಗಡ್ಡ ಇಳಿಬಿಟ್ಟುಕೊಂಡು ಕಾಲೇಜಿಗೆ ಬಂದಿದ್ದಕ್ಕೆ ಆತನನ್ನು ಕಾಲೇಜಿನಿಂದ ಪ್ರಾಂಶುಪಾಲರು ಹೊರಹಾಕಿರುವ ಘಟನೆ ನಡೆದಿದೆ. ಇದಲ್ಲದೇ ವಿದ್ಯಾರ್ಥಿಯನ್ನು ಜಾತಿ ಆಧಾರದ ಮೇಲೆ ಅಂದರೆ ‘ಇದು ಮದರಸಾ ಅಲ್ಲ, ಕಾಲೇಜು’ ಎಂದು ನಿಂದಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉತ್ತರಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು ಇದೀಗ ವಿದ್ಯಾರ್ಥಿಯ ಹಿರಿಯ ಸಹೋದರ ಪ್ರಾಂಶುಪಾಲರ ವಿರುದ್ಧ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯಮಂತ್ರಿ ಪೋರ್ಟಲ್‌ ನಲ್ಲಿ ದೂರು ಸಲ್ಲಿಸಿದ್ದಾರೆ.

ಆಜಾದ್ ನೌರಂಗ್ ಇಂಟರ್ ಕಾಲೇಜ್ ಸೈಂಥಲ್ ನಲ್ಲಿ ವಿದ್ಯಾರ್ಥಿ ಫರ್ಮಾನ್ ಅಲಿ ಓದುತ್ತಿದ್ದ. ಈಗ್ಗೆ ಕೆಲದಿನಗಳ ಹಿಂದೆ ಫರ್ಮಾನ್ ಅಲಿಗೆ ಗಡ್ಡ ಬೋಳಿಸಿಕೊಂಡು ಬರುವಂತೆ ಪ್ರಾಂಶುಪಾಲರು ಸೂಚಿಸಿದ್ದಾರೆ. ಆದರೆ ಆತ ಗಡ್ಡ ತೆರವು ಮಾಡಿರಲಿಲ್ಲ. ಗಡ್ಡ ಶೇವ್ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಫರ್ಮಾನ್ ಅಲಿಗೆ ಶಾಲೆಗೆ ಬರದಂತೆ ಪ್ರಾಂಶುಪಾಲರು ಹೇಳಿದ್ದಾರೆ ಎನ್ನಲಾಗಿದೆ.

“ಇದು ಮದರಸಾ ಅಲ್ಲ, ಕಾಲೇಜು. ಯಾವುದೇ ಜಾತಿ ಪಂಗಡದ ಮಗುವಾಗಿದ್ದರೂ ಗಡ್ಡ ಬೆಳೆಸಿ ಶಾಲೆಗೆ ಬರಬಾರದು ಎಂಬ ಸರ್ಕಾರಿ ಆದೇಶವಿದೆ” ಎಂದು ಪ್ರಾಂಶುಪಾಲರು ಹೇಳಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿಯ ಸಹೋದರ “ಇಂಟರ್ ಕಾಲೇಜಿನ ಪ್ರಾಂಶುಪಾಲ ರಾಮ್ ಅಚಲ್ ಖಾರ್ವಾರ್ ಅವರ ನಡವಳಿಕೆ ತಾರತಮ್ಯಡಿಂದ ಕೂಡಿದ್ದು ಜತೆಗೆ ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುತ್ತದೆ” ಎಂದು ಮುಖ್ಯಮಂತ್ರಿ ಪೋರ್ಟಲ್‌ನಲ್ಲಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸರ್ಕಾರದ ನಿರ್ಧಾರ ಏನು ಎಂಬುದು ಇನ್ನೂ ವರದಿಯಾಗಿಲ್ಲ.

Leave A Reply