King Cobra: ವಿಚಿತ್ರ ಘಟನೆ! ವ್ಯಕ್ತಿಯನ್ನು ಕಚ್ಚಿದ ಮರುಕ್ಷಣವೇ ಕಾಳಿಂಗಸರ್ಪ ಸಾವು!

King Cobra: ಹಾವು ಎಷ್ಟು ವಿಷಕಾರಿ ಎಂದರೆ ವ್ಯಕ್ತಿಯನ್ನು ಕಚ್ಚಿದ ಮರು ಕ್ಷಣವೇ ಅರೆ ತಾಸಿನಲ್ಲೇ ಅತ ಸಾಯುತ್ತಾನೆ. ಅದರಲ್ಲೂ ಕಾಳಿಂಗಸರ್ಪ  ಕಚ್ಚಿದರೆ ವ್ಯಕ್ತಿ ನೀರು ಕೇಳುವಷ್ಟರೊಳಗೆ ವಿಷವು ದೇಹದೊಳಗೆ ಏರುತ್ತದೆ. ಆದ್ರೆ ಇಲ್ಲೊಂದು ಘಟನೆ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತಾ.

 

ಹೌದು, ಭಾರತದ ಅತ್ಯಂತ ಅಪಾಯಕಾರಿ ಹಾವುಗಳ ಪೈಕಿ ಕಾಳಿಂಗಸರ್ಪ ವು ಒಂದು. ಆದರೆ ಈ ಹಾವಿಗಿಂತ ಮನುಷ್ಯನೇ ಹೆಚ್ಚು ವಿಷಯಕಾರಿಯೇ ಎನ್ನುವ ಪ್ರಶ್ನೆ ಇಲ್ಲಿ ಕಾಡಲಾರಂಭಿಸಿದೆ. ಯಾಕೆಂದರೆ ವ್ಯಕ್ತಿಯನ್ನು ಕಚ್ಚಿದ ಮರುಕ್ಷಣವೇ ಕಾಳಿಂಗಸರ್ಪ (King Cobra) ಹಾವೊಂದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಹಾವು ಕಚ್ಚಿದ ತಕ್ಷಣ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ಹಾವು ಕಚ್ಚಿದ ಬಳಿಕ ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದಾರೆ ಆದರೆ ಹಾವು ಮೃತಪಟ್ಟಿದೆ. ಈ ವಿಚಿತ್ರ ಪ್ರಕರಣವು ಸಾಗರದ ನಾರಾಯಾವಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಸಾಗರ-ಖುರೈ ರಸ್ತೆಯ ನಾರಾಯಣಾವಳಿಯ ಮುಖ್ಯ ರಸ್ತೆಯ ತಡೆಗೋಡೆಯ ಬಳಿ ಕಾಳಿಂಗಸರ್ಪ  ಕಾಣಿಸಿಕೊಂಡಾಗ, ಜನರು ಹಾವು ಹಿಡಿಯುವವ ಚಂದ್ರಕುಮಾರ್ ಅಹಿರ್ವಾರ್ಗೆ ಕರೆ ಮಾಡಿದರು. ಚಂದ್ರಕುಮಾರ್ ಅವರು ಸ್ಥಳಕ್ಕಾಗಮಿಸಿ ಹಾವನ್ನು ಹಿಡಿದರು, ಆದರೆ ರಕ್ಷಣೆಯ ಸಂದರ್ಭದಲ್ಲಿ ಕಾಳಿಂಗಸರ್ಪ ಅವರ ಮೇಲೆ ದಾಳಿ ಮಾಡಿತು ಮತ್ತು ಅವರ ಕೈಗಳ ಹೆಬ್ಬರಳನ್ನು ಕಚ್ಚಿದೆ.

ಹಾವು ಕಚ್ಚಿದ ನಂತರ ಮನೆಯವರು ಚಂದ್ರಕುಮಾರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡ ನಂತರ ಚಂದ್ರಕುಮಾರ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಹಾವು ಸತ್ತಿರುವುದರ ನಿಜ ಅಂಶ ಇನ್ನೂ ಯಾರಿಗೂ ತಿಳಿದಿಲ್ಲ. ಇದೀಗ ವ್ಯಕ್ತಿಯನ್ನು ಕಚ್ಚಿ ಹಾವೇ ಸತ್ತಿರುವುದು ಆಚ್ಚರಿಯನ್ನುಂಟು ಮಾಡಿದೆ.

Leave A Reply

Your email address will not be published.