Moon Moving : ಭೂಮಿಯಿಂದ ದೂರ ದೂರ ಹೋಗ್ತಿದ್ದಾನೆ ಚಂದ್ರ, ಇನ್ನು ದಿನಕ್ಕೆ 24 ಅಲ್ಲ, 25 ಗಂಟೆ !!

Moon Moving : ಭೂಮಿಯ ಅವಿಭಾಜ್ಯ ಅಂಗವಾಗಿರು ಚಂದ್ರನು ಪ್ರತೀ ವರ್ಷವೂ ಭೂಮಿಯಿಂದ ದೂರ(Moon Moving) ಹೋಗುತ್ತಿದ್ದು, ಭೂಮಿ ಮೇಲಿನ 1 ದಿನದ 24 ಗಂಟೆ ಮುಂದೆ 25 ಗಂಟೆಯಾಗಿ ಬದಲಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 

ಬಾಹ್ಯಾಕಾಶವು ರಹಸ್ಯಗಳಿಂದ ತುಂಬಿರುವ ಜಗತ್ತು. ಪ್ರಪಂಚದಾದ್ಯಂತ ಜನರು ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಇಂದು, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಭಾರತೀಯ ಸಂಸ್ಥೆ ಇಸ್ರೋ ಮತ್ತು ಇತರ ಹಲವು ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ಚಂದ್ರನನ್ನು ತಲುಪಿದ್ದಾರೆ. ಆದರೆ ಚಂದ್ರನು ಪ್ರತಿ ವರ್ಷ ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂಬ ಅಂಶವನ್ನು ವಿಜ್ಞಾನಿಗಳೇ ಬಹಿರಂಗಪಡಿಸಿದ್ದಾರೆ. ಅಲ್ಲದೆ ಮುಂದೆ ನಮಗೆ ದಿನದಲ್ಲಿ 24 ಗಂಟೆ ಬದಲು 25 ಗಂಟೆ ಇರಲಿವೆ ಎಂದು ಅಧ್ಯಯನವೊಂದು ಭೀಕರ ಮಾಹಿತಿಯನ್ನು ಬಿಚ್ಚಿಟ್ಟಿದೆ.

ಹೌದು, ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಮಾಡಿರುವ ಅಧ್ಯಯನದಿಂದ ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರ ಸಾಗುತ್ತಲೇ ಹೋಗುವ ಅಪಾಯವಿದೆ ಎಂದು ಹೇಳಿದೆ. ಸುಮಾರು 90 ದಶಲಕ್ಷ ವರ್ಷದಷ್ಟು ಹಳೆಯದಾದ ಶಿಲೆಯ ಮೇಲೆ ಗಮನ ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದ್ದು, ಭೂಮಿಯಿಂದ ಚಂದ್ರನು ಬೇರ್ಪಡುವುದರಿಂದ ಆಗುವ ಪರಿಣಾಮಗಳ ಕುರಿತು ಕೂಡ ಅವರು ಬೆಳಕು ಚೆಲ್ಲಿದ್ದಾರೆ. ಈ ಅಧ್ಯಯನ ವರದಿ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ.

ಅಂದಹಾಗೆ ಹಿಂದೆ, ಚಂದ್ರನು ಸಮಯವನ್ನು ಅಳೆಯುವ ಪ್ರಮುಖ ಭಾಗವಾಗಿತ್ತು, ಏಕೆಂದರೆ ಇದನ್ನು ಪ್ರಾಚೀನ ಮಾನವ ನಾಗರಿಕತೆಗಳಿಂದ ಕ್ಯಾಲೆಂಡರ್ ಆಗಿ ಬಳಸಲಾಗುತ್ತಿತ್ತು. ಈ ವೇಗದಲ್ಲಿ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದರೆ, ಅದು ಬಹುಶಃ 1.5 ಶತಕೋಟಿ ವರ್ಷಗಳ ಹಿಂದೆ ಭೂಮಿಗೆ ಡಿಕ್ಕಿ ಹೊಡೆದಿರಬಹುದು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಅಲ್ಲದೆ ಈಗ ವರ್ಷಕ್ಕೆ ಸರಿಸುಮಾರು 3.8 ಸೆಂಟಿಮೀಟರ್‌ಗಳಷ್ಟು ದರದಲ್ಲಿ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಅಧ್ಯಯನ ಹೇಳಿದೆ.

ಇದರಿಂದ ಆಗುವ ಪರಿಣಾಮ ಏನೆಂದರೆ, ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ ಎಂದು ಅಧ್ಯಯನವು ಹೇಳಿದೆ. 1.4 ಶತಕೋಟಿ ವರ್ಷಗಳ ಹಿಂದೆ, ಚಂದ್ರನು ಭೂಮಿಗೆ 60,000 ಕಿಮೀ ಹತ್ತಿರದಲ್ಲಿತ್ತು. ಇದು ಪ್ರಸ್ತುತ ದೂರಕ್ಕಿಂತ ಕಡಿಮೆಯಾಗಿದೆ. ಆಗ ಭೂಮಿಯ ಮೇಲೆ ಒಂದು ದಿನ ಕೇವಲ 18 ಗಂಟೆಗಳ ಕಾಲ ಇತ್ತು . ಕಾಲಕಾಲಕ್ಕೆ ಅದು ಹೆಚ್ಚಾಗುತ್ತ 24 ಗಂಟೆಗೆ ಏರಿಕೆಯಾಗಿದೆ.

Leave A Reply

Your email address will not be published.