3rd World War: ಇನ್ನು 48 ಗಂಟೆಗಳಲ್ಲಿ 3ನೇ ಮಹಾಯುದ್ಧ ಶುರು, ಖ್ಯಾತ ಜ್ಯೋತಿಷಿಯಿಂದ ಸ್ಪೋಟಕ ಭವಿಷ್ಯ !!

3rd World War: ಇಡೀ ಪ್ರಪಂಚವು ಈಗಾಗಲೇ ಎರಡು ಮಹಾ ಯುದ್ಧಗಳನ್ನು ಕಂಡು ನಲುಗಿದೆ. ಹೀಗಾಗಿ ಮುಂದೆಂದೂ ಈ ರೀತಿಯ ಯುದ್ಧಗಳು ಸಂಭವಿಸದಿರಲಿ ಎಂದು ಎಲ್ಲರೂ ಬೇಡುವಾಗಲೇ ಅಘಾತಕಾರಿ ವಿಚಾರವೊಂದು ಮುನ್ನಲೆಗೆ ಬಂದಿದೆ. ಖ್ಯಾತ ಜ್ಯೋತಿಷಿಯೊಬ್ಬರು ಇನ್ನು 48 ಗಂಟೆಗಳಲ್ಲಿ 3ನೇ ಮಹಾಯುದ್ಧ(3rd World War)ಆರಂಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

 

ಹೌದು, ಸದ್ಯ ಇಸ್ರೇಲ್(Israel) ಮತ್ತು ಇರಾನ್(Iran) ನಡುವೆ ಯಾವುದೇ ಸಮಯದಲ್ಲಿ ಯುದ್ಧದ ರಣಕಹಳೆ ಮೊಳಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಭಾರತದ ನಾಸ್ಟ್ರಡಾಮ್ ಎಂಬ ಖ್ಯಾತಿಯ ಪ್ರಸಿದ್ಧ ಜ್ಯೋತಿಷಿ ಕುಶಾಲ್ ಕುಮಾರ್(Kushal Kumar) ಮುಂದಿನ ಎರಡು ದಿನಗಳಲ್ಲಿ ಮೂರನೇ ವಿಶ್ವ ಯುದ್ಧ ಆರಂಭವಾಗಲಿದೆ ಎಂದು ಭಯಾನಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ವಿಶ್ವದ ಹಲವು ದೇಶಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಹತ್ಯೆ ಬಳಿಕ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದೆ. ಇಸ್ಮಾಯಿಲ್ ಹಾನಿಯಾ ಸಾವಿನ ಬಳಿಕ ಇಸ್ರೇಲ್ ಮೇಲೆ ಹಮಾಸ್ ಯಾವುದೇ ಕ್ಷಣದಲ್ಲಿ ಯುದ್ಧ ಸಾರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಜ್ಯೋತಿಷಿ ಹೇಳಿದ ಭವಿಷ್ಯ ಏನು?
ಯುನೈಟೆಡ್ ಸ್ಟೇಟ್‌ನ ಅಲಾಸ್ಕಾ ಬಳಿ ರಷ್ಯಾ ಮತ್ತು ಚೀನಾ ಬಾಂಬ್‌ಗಳು ಸಿದ್ಧವಾಗಿವೆ. ಇತ್ತ ಕ್ಯೂಬಾದಲ್ಲಿ ಮಿಲಟರಿ ಸನ್ನದ್ಧವಾಗಿದೆ. ಅತ್ತ ರೊಮೇನಿಯಾದಲ್ಲಿ ಆತಂಕಕಾರಿ ಪರಿಸ್ಥಿತಿಯನ್ನು ಗಮನಿಸಿದ್ರೆ ಯುರೋಪ್ ಮತ್ತು ಏಷ್ಯಾದ ಹಲವು ದೇಶಗಳ ನಡುವೆ ಶೀಘ್ರದಲ್ಲೇ ಸಂಘರ್ಷ ಪ್ರಾರಂಭವಾಗಲಿದೆ ಎಂದು ಕಾಣಿಸುತ್ತಿದೆ. ಹೀಗಾಗಿ ಮುಂದಿನ 48 ಗಂಟೆಯಲ್ಲಿ ವಿಶ್ವಯುದ್ಧ ಶುರುವಾಗಬಹುದು. ಆಗಸ್ಟ್ 5ರ ವೇಳೆಗೆ ಹಲವು ದೇಶಗಳ ನಡುವೆ ಸಂಘರ್ಷ ಉಂಟಾಗಬಹುದು ಎಂಬ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

Leave A Reply

Your email address will not be published.