International Beer Day: ಬಿಯರ್ ಚಿಯರ್ಸ್ ಗೆ 8 ಸ್ಟ್ರಾಂಗ್‌ ಬಿಯರ್‌ ಒಪ್ಶನ್ ಇಲ್ಲಿದೆ ನೋಡಿ!

International Beer Day: ನೀವು ಬಿಯರ್ ಪ್ರೇಮಿಗಳಾಗಿದ್ದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಹೌದು, ಆಗಸ್ಟ್‌ ತಿಂಗಳ ಮೊದಲ ಶುಕ್ರವಾರವನ್ನು 2007ರಿಂದ ಅಂತಾರಾಷ್ಟ್ರೀಯ ಬಿಯರ್‌ ದಿನವನ್ನಾಗಿ (International Beer Day)  ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಬಿಯರ್‌ ಪ್ರೇಮಿಗಳು ಒಟ್ಟಿಗೆ ಸೇರಿ, ಅವರ ಫೇವರಿಟ್‌ ಬ್ರ್ಯಾಂಡ್‌ ಬಿಯರ್‌ ಚಿಯರ್ಸ್ ಮಾಡಿ ಸೇವನೆ ಮಾಡುತ್ತಾರೆ. ಅದರಲ್ಲೂ ತುಂಬಾ ಸ್ಟ್ರಾಂಗ್ ಬಿಯರ್ ಗಳಲ್ಲಿ ನಿಮ್ಮ ಫೇವರೇಟ್ ಬ್ರಾಂಡ್ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.

ಕಿಂಗ್‌ಫಿಶರ್‌ ಸ್ಟ್ರಾಂಗ್‌ ( Kingfisher strong):

ಭಾರತದ ಅತ್ಯಂತ ಪ್ರೀತಿಪಾತ್ರವಾದ ಬಿಯರ್‌ ಇದು. 650 ಎಂಎಲ್‌ನ ಫುಲ್‌ ಬಾಟಲ್‌ಗೆ 185 ರೂಪಾಯಿ. ಕ್ರಿಸ್ಪ್‌ ಹಾಗೂ ರಿಫ್ರೆಶಿಂಗ್‌ ಫ್ಲೇವರ್‌ ಹೊಂದಿದೆ. ಸಾಮಾನ್ಯ ಕಿಂಗ್‌ಫಿಶರ್‌ ಬಿಯರ್‌ಗಿಂತ ಇದರಲ್ಲಿ ಆಲ್ಕೋಹಾಲ್‌ ಪ್ರಮಾಣ ಹೆಚ್ಚಿರುತ್ತದೆ. ಕಿಂಗ್‌ಫಿಶರ್ ಸ್ಟ್ರಾಂಗ್ ಅನ್ನು ನೀರು, ಮಾಲ್ಟೆಡ್ ಬಾರ್ಲಿ, ಹಾಪ್ಸ್ ಮತ್ತು ಯೀಸ್ಟ್‌ನ ಮಿಶ್ರಣದಿಂದ ರಚಿಸಲಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಗಾಡ್‌ಫಾದರ್‌ ಲೆಜೆಂಡರಿ (Godfather Legendary):

ಹೌಸ್‌ ಆಫ್‌ ದೇವಾನ್ಸ್‌ನಿಂದ ಪರಿಚಯಿಸಲ್ಪಟ್ಟ 30 ವರ್ಷಗಳ ಹಿಂದಿನ ಮೊಟ್ಟಮೊದಲ ಬಿಯರ್‌ ಗಾಡ್‌ಫಾದರ್‌ ಇದು 7.2% ಆಲ್ಕೋಹಾಲ್ ಹೊಂದಿದೆ. ಇದನ್ನು ಅತ್ಯುತ್ತಮ ಭಾರತೀಯ ಮಾಲ್ಟ್‌ಗಳೊಂದಿಗೆ ತಯಾರಿಸಲಾಗುತ್ತದೆ, 650 ಎಂಎಲ್‌ನ ಫುಲ್‌ ಬಾಟಲ್‌ಗೆ ಬೆಂಗಳೂರಿನಲ್ಲಿ 160 ರೂಪಾಯಿ ಬೆಲೆ ಇದೆ. ಆದ್ರೆ ಇದು ಬಿಗಿನರ್‌ಗಳಿಗಲ್ಲ.

ಗಾಡ್‌ಫಾದರ್‌ ಸೂಪರ್ 8 (Godfather Super 8): ಗಾಡ್‌ಫಾದರ್ ವಿಭಾಗದಲ್ಲಿ ಪರಿಚಯಿಸಲಾದ ಹೊಸ ಬಿಯರ್‌. ಇದು ಭಾರತದಲ್ಲಿ ಗರಿಷ್ಠ ಆಲ್ಕೋಹಾಲ್‌ ಪ್ರಮಾಣವಾಗಿರುವ ಶೇ. 8 ಎಬಿವಿ ಹೊಂದಿದೆ. ಇದು ದೀರ್ಘಕಾಲದವರೆಗೆ ಒಂದು ಉಲ್ಲಾಸಕರ ರುಚಿಯನ್ನು ಹೊಂದಿದೆ.  650 ಎಂಎಲ್‌ನ ಫುಲ್‌ ಬಾಟಲ್‌ಗೆ ಬೆಂಗಳೂರಿನಲ್ಲಿ 140 ರೂಪಾಯಿ ಬೆಲೆ ಇದೆ.

ಸಿಕ್ಸ್‌ ಫೀಲ್ಡ್ಸ್‌ ಬ್ಲಾಂಚೆ (Six Fields Blanche):

ಇದು 6 ಪ್ರಮುಖ ಪದಾರ್ಥಗಳನ್ನು ಹೊಂದಿದೆ, ಅವುಗಳೆಂದರೆ- ಓಟ್ಸ್, ಗೋಧಿ, ಮಾಲ್ಟೆಡ್ ಬಾರ್ಲಿ, ಕೊತ್ತಂಬರಿ ಬೀಜಗಳು, ಕಿತ್ತಳೆ ಸಿಪ್ಪೆಗಳು ಮತ್ತು ಜರ್ಮನ್ ಹಾಪ್ಸ್. ಇದು ತಿಳಿ ಬಣ್ಣವನ್ನು ಹೊಂದಿರುತ್ತದೆ.  ಇದರಲ್ಲಿ ಶೇ. 4.5ರಷ್ಟು ಆಲ್ಕೋಹಾಲ್‌ ಪ್ರಮಾಣ ಇರುತ್ತದೆ. 650 ಎಂಎಲ್‌ನ ಫುಲ್‌ ಬಾಟಲ್‌ಗೆ ಬೆಂಗಳೂರಿನಲ್ಲಿ 170 ರೂಪಾಯಿ ಬೆಲೆ ಇದೆ.

ಸಿಕ್ಸ್‌ ಫೀಲ್ಡ್ಸ್‌ ಕಲ್ಟ್‌ ( Six Fields Cult):

ಈ ಗೋಧಿ ಬಿಯರ್‌ನಲ್ಲಿ ಶೇ. 5.9ರಷ್ಟು ಆಲ್ಕೋಹಾಲ್‌ ಇರುತ್ತದೆ. ಇದರಲ್ಲಿರುವ ಕಿತ್ತಳೆ ಸಿಪ್ಪೆಗಳ ಸ್ವಾದ ಅಮೇಜಿಂಗ್. ಇದು ಕ್ಯಾನ್‌ಗಳಲ್ಲಿ ಮತ್ತು 5 ಲೀಟರ್ ಕೆಗ್‌ಗಳಲ್ಲಿ ಲಭ್ಯವಿದೆ. 90 ದಿನಗಳ ಕಾಲ ನಿರಾಯಾಸವಾಗಿ ಇದನ್ನು ಇಡಬಹುದು. ಡಬ್ಬಲ್‌ವಿಟ್ ವಿಭಾಗದಲ್ಲಿ ಬ್ರಸೆಲ್ಸ್ ಬೀ ಚಾಲೆಂಜ್‌ನಲ್ಲಿ ಬಿಯರ್ ಬೆಳ್ಳಿ ಪದಕವನ್ನೂ ಇದು ಗೆದ್ದಿದೆ. ಬೆಂಗಳೂರಿನಲ್ಲಿ 650 ಎಂಎಲ್‌ನ ಸ್ಟ್ರಾಂಗ್‌ ಬಿಯರ್‌ಗೆ 265 ರೂಪಾಯಿ ಇದೆ.

ಕೋಟ್ಸ್‌ಬರ್ಗ್ ಪ್ರೀಮಿಯಂ ಪಿಲ್ಸ್ ( Kotsberg Premium Pils):

4.5% ಅಲ್ಕಹೋಲ್ ಇರುವ ಇದು ಬಾರ್ಲಿ, ಜರ್ಮನ್ ಹಾಪ್ಸ್ ಮತ್ತು ಅಕ್ಕಿಯನ್ನು ಸೇರಿಸಿದ ಪರಿಮಳವನ್ನು ರಚಿಸುತ್ತದೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಇದು ಲಭ್ಯವಿಲ್ಲ. ಇದರ ಬೆಲೆ 650 ಎಂಎಲ್‌ಗೆ 180 ರೂಪಾಯಿ.

ಬಿರಾ 91 (Bira 91):

ಇದನ್ನು ನೈಜ ಕಿತ್ತಳೆ ಸಿಪ್ಪೆ, ರಾಸ್ಪ್ಬೆರಿ ಮತ್ತು ಮಾವಿನಹಣ್ಣಿನೊಂದಿಗೆ ತಯಾರು ಮಾಡಲಾಗಿದೆ. ರಾಜ್ಯದಲ್ಲಿ 650 ಎಂಎಲ್‌ನ ಬಾಟಲ್‌ಗೆ 180 ರೂಪಾಯಿ. ರಿಫ್ರೆಶಿಂಗ್ ಸ್ವಾದವನ್ನು ನೀಡುವ ಬಿಯರ್ ಬ್ರ್ಯಾಂಡ್ ಎಂದೆನಿಸಿದೆ.  ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹೇವರ್ಡ್ಸ್ 5000 (Haywards 5000):

ಹೇವರ್ಡ್ಸ್ 5000 ಭಾರತದಲ್ಲಿ ಪ್ರಸಿದ್ಧವಾದ ಸ್ಟ್ರಾಂಗ್‌ ಬಿಯರ್ ಬ್ರ್ಯಾಂಡ್ ಆಗಿದೆ. ಇದರ ಆಲ್ಕೋಹಾಲ್‌ ಪ್ರಮಾಣ ಶೇ. 7 ರಷ್ಟಿದೆ. 650 ಎಂಎಲ್‌ನ ಬಾಟಲ್‌ಗೆ 120 ರೂಪಾಯಿ.

Leave A Reply

Your email address will not be published.