Maharaja movie: ‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಫ್ರೀ ನಟನೆ: ಅರೆ! ಫ್ರೀ ಕಾಲ್‌ಶೀಟ್ ಕೊಡಲು ಕಾರಣವಾದ್ರು ಏನು?
Maharaja movie: ತಮಿಳು ನಟ ವಿಜಯ್ ಸೇತುಪತಿ ಅಭಿನಯದ 50ನೇ ಸಿನಿಮಾ ‘ಮಹಾರಾಜ’ ವನ್ನು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಈಗಾಗಲೇ ಜೂನ್ 14ರಂದು ತೆರೆಕಂಡ ಮಹಾರಾಜ ಸಿನಿಮಾವು ಭರ್ಜರಿ ಬೇಟೆ ಮಾಡಿದೆ. ಹೌದು, ‘ಮಹಾರಾಜ’ (Maharaja movie) ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡು ಇದೀಗ ಓಟಿಟಿಯಲ್ಲೂ ವೀಕ್ಷಕರನ್ನು ಸೆಳೆಯುತ್ತಿದೆ. ಸದ್ಯ ಈ ಸಿನಿಮಾ ಕುರಿತಂತೆ ಇದೀಗ ಒಂದೊಂದೇ ವಿಚಾರಗಳು ಹೊರಗೆ ಬರುತ್ತಿವೆ. ಈಗ ಸಿಕ್ಕಿರುವ ಇಂಟರೆಸ್ಟಿಂಗ್ ಮಾಹಿತಿ ಏನಪ್ಪಾ ಅಂದ್ರೆ, ‘ಮಹಾರಾಜ’ ಸಿನಿಮಾದಲ್ಲಿ ನಟಿಸುವುದಕ್ಕಾಗಿ ವಿಜಯ್ ಸೇತುಪತಿ ಅವರು ಸಂಭಾವನೆಯನ್ನೇ ಪಡೆದಿರಲಿಲ್ಲವಂತೆ!
ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ‘ಮಹಾರಾಜ’ ಸಿನಿಮಾವು 20 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿತ್ತು. ತಾನು ಕೂಡ ಸಂಭಾವನೆ ಪಡೆದರೆ, ಬಜೆಟ್ ಇನ್ನಷ್ಟು ಹೆಚ್ಚಾಗಿ ಬಿಡುತ್ತೆ ಎಂಬುದನ್ನು ಅರಿತ ನಟ ವಿಜಯ್ ಸೇತುಪತಿ ಫ್ರೀ ಕಾಲ್‌ಶೀಟ್ ನೀಡಿದ್ದರು. ಯಾಕೆಂದರೆ, ಇದು ಅವರ 50ನೇ ಸಿನಿಮಾ. ತಮ್ಮ ಮೈಲಿಗಲ್ಲಿನ ಸಿನಿಮಾದಲ್ಲಿ ಇಂತಹ ಕಥೆಯೇ ಇರಬೇಕು ಎಂಬುದು ವಿಜಯ್ ಸೇತುಪತಿ ಆಸೆ ಆಗಿತ್ತು. ಈ ಕಥೆಯನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಫ್ರೀ ಆಗಿ ನಟಿಸಿದ್ದಾರೆ ಎನ್ನಲಾಗಿದೆ.
ಹಾಗಂತ, ವಿಜಯ್ ಸೇತುಪತಿಗೆ ಈ ಸಿನಿಮಾದಿಂದ ದುಡ್ಡೇ ಸಿಕ್ಕಿಲ್ಲ ಎನ್ನುವಂತಿಲ್ಲ. ಇದೀಗ ‘ಮಹಾರಾಜ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿದೆ. ಹಾಗಾಗಿ, ಚಿತ್ರದಿಂದ ಬಂದ ಲಾಭದಲ್ಲಿ ಒಂದು ಭಾಗವನ್ನು ವಿಜಯ್ ಸೇತುಪತಿಗೆ ಕೊಡಲಾಗುತ್ತಿದೆ. 20 ಕೋಟಿ ರೂ. ಬಜೆಟ್‌ನ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿದೆ.
ಇನ್ನು ‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಎದುರು ಖಳನಾಗಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಕಾಣಿಸಿಕೊಂಡಿದ್ದರು. ಇನ್ನು ಮಮತಾ ಮೋಹನ್‌ದಾಸ್, ನಟರಾಜ್ ಸುಬ್ರಮಣ್ಯಂ, ದಿವ್ಯಾ ಭಾರತಿ, ಮುನಿಷ್ಕಾಂತ್, ಅರುಳ್ ದಾಸ್, ಸರವಣ ಸುಬ್ಬಯ್ಯ, ಸಿಂಗಂಪುಲಿ, ಅಭಿರಾಮಿ, ವಿನೋದ್ ಸಾಗರ್ ಈ ಸಿನಿಮಾದಲ್ಲಿ ಮುಂತಾದವರು ನಟಿಸಿದ್ದಾರೆ.
ಸದ್ಯ ಈ ಚಿತ್ರ ಸಕ್ಸಸ್ ಕಂಡ ಬೆನ್ನಲ್ಲೇ ಮಹಾರಾಜ ಸಿನಿಮಾದ ಹಿಂದಿ ರಿಮೇಕ್ ಹಕ್ಕುಗಳನ್ನು ಆಮಿರ್ ಖಾನ್ ಪ್ರೊಡಕ್ಷನ್ಸ್ ಸಂಸ್ಥೆಯು ಖರೀದಿ ಮಾಡಿದೆ ಎನ್ನಲಾಗಿದೆ.