Veg Food: ಸಸ್ಯಾಹಾರ ಅತೀ ಹೆಚ್ಚು ಯಾವ ನಗರದವರು ತಿನ್ನುತ್ತಾರೆ ಗೊತ್ತಾ..? ಹಾಗಾದರೆ ದೇಶದ ವೆಜ್ ಸಿಟಿ ಯಾವುದು..?
Veg Food: ಎಲ್ಲಿ ಜಾಸ್ತಿ ಪುಣ್ಯ ಕ್ಷೇತ್ರಗಳು ಇರುತ್ತಾವೂ ಅಲ್ಲಿನ ಜನ ಹೆಚ್ಚು ಸಸ್ಯಾಹಾರ ತಿನ್ನಬಹುದು ಅನ್ನೋದು ಸಾಮಾನ್ಯ ಜನರ ಊಹೆ. ಅಯೋಧ್ಯೆ, ಕಾಶಿ, ಮಥುರಾ, ವಾರಾಣಸಿಗಳಂತ ನಗರದಲ್ಲಿ ಜನ ಮಾಂಸ ಉಪಯೋಗ ಕಮ್ಮಿ ಮಾಡಬಹದು. ಯಾಕೆಂದರೆ ಸದಾ ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು, ಹಾಗೂ ಪುಣ್ಯ ಕ್ಷೇತ್ರಕ್ಕೆ ಬರುವ ಯಥೇಚ್ಛಾ ಭಕ್ತರು ಮಾಂಸ ತಿನ್ನುವುದು ಕಮ್ಮಿ. ಹಾಗಾಗಿ ಈ ನಗರಗಳು ಹೆಚ್ಚು ಸಸ್ಯಾಹಾರವನ್ನೇ ತಿನ್ನಬಹುದೆಂದು ನೀವು ಊಹಿಸಬಹುದಲ್ವಾ..? ಆದರೆ ನಿಮ್ಮ ಊಹೆ ತಪ್ಪು. ಅತೀ ಹೆಚ್ಚು ಸಸ್ಯಾಹಾರ ತಿನ್ನುವ ಜನ ಅಂದ್ರೆ ಅದು ನಮ್ಮ ಬೆಂಗಳೂರು ಜನ .
ಟಾಪ್ 3 ಸಸ್ಯಾಹಾರ ಸೇವಿಸುವ ನಗರಗಳ ಪೈಕಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇನ್ನು ಹೈದರಾಬಾದ್ ಸಿಟಿ ಮೂರನೇ ಸ್ಥಾನದಲ್ಲಿದ್ರೆ ವಾಣಿಜ್ಯ ನಗರಿ ಮುಂಬೈ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಈ ವರದಿಯನ್ನು ಬಿಡುಗಡೆ ಮಾಡಿರುವುದು ಆನ್‌ಲೈನ್ ಆಹಾರ ಸರಬರಾಜು ಮಾಡುವ ಸ್ವಿಗ್ಗಿ(SWIGGY) ಕಂಪನಿ. ಪ್ರತಿನಿತ್ಯ ಸ್ವಿಗ್ಗಿ ಮೂಲಕ ಆಹಾರ ತರಿಸಿಕೊಂಡು ದೇಶದಾದ್ಯಂತ ಸಾವಿರಾರು ಗ್ರಾಕರು ಸೇವಿಸುತ್ತಾರೆ. ಇದನ್ನೇ ಮೂಲ ಇಟ್ಟುಕೊಂಡು ದೇಶದಾದ್ಯಂತ ಯಾವ ನಗರದಲ್ಲಿ ಹೆಚ್ಚು ಸಸ್ಯಾಹಾರ ಆರ್ಡರ್ ಮಾಡುತ್ತಾರೆ ಅನ್ನುವ ಬಗ್ಗೆ ಸರ್ವೆ ಮಾಡಿ ವರದಿ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಾಯಿ ಮಾಂಸದ ಬಿರಿಯಾನಿ ಬಗ್ಗೆ ಭಾರಿ ಸದ್ದಾಗಿತ್ತು. ಮೇಲ್ನೋಟಕ್ಕೆ ಬೆಂಗಳೂರಿನಲ್ಲಿ ಸಸ್ಯಾಹಾರಾಕ್ಕಿಂತ ಮಾಂಸಹಾರ ಪ್ರಿಯರೇ ಹೆಚ್ಚು ಎಂಬ ಬಾವನೆ ಮೂಡುತ್ತದೆ. ಆದರೆ ಈ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ಮೂರು ಸಸ್ಯಾಹಾರಿ ಆರ್ಡರ್‌ಗಳಲ್ಲಿ ಒಂದು ಮಸಾಲಾ ದೋಸೆ, ಪನ್ನೀರ್ ಬಿರಿಯಾನಿ ಮತ್ತು ಪನ್ನೀರ್ ಬಟರ್ ಮಸಾಲಾ ಇರುತ್ತದೆ ಎಂದು ಸ್ವಿಗ್ಗಿ ಹೇಳಿದೆ. ಅದರಲ್ಲೂ ಈ ಫೇಮಸ್ ಫುಡ್‌ನ್ನು ಬೆಂಗಳೂರಿಗರೇ ಹೆಚ್ಚು ಆರ್ಡರ್ ಮಾಡ್ತಾರಂತೆ. ಇನ್ನು ಮುಂಬೈನಲ್ಲಿ ಹೆಚ್ಚು ಬೇಡಿಕೆ ಇರೋದು ದಾಲ್ ಖಿಚಡಿ, ಮಾರ್ಗರಿಟಾ ಪಿಜ್ಜಾ ಮತ್ತು ಪಾವ್ ಭಾಜಿಗೆ. ಇನ್ನೂ 3ನೇ ಸ್ಥಾನದಲ್ಲಿರುವ ಹೈದರಾಬಾದ್ ಜನತೆ ಹೆಚ್ಚು ಆರ್ಡರ್ ಮಾಡೋದು ಮಸಾಲಾ ದೋಸೆ ಮತ್ತು ಇಡ್ಲಿ ಎಂದು ಸ್ವಿಗ್ಗಿ ಹೇಳಿಕೊಂಡಿದೆ.
ಮಾಂಸಹಾರ ಖಾದ್ಯ ಹೈದರಬಾದ್ ಬಿರಿಯಾನಿ ದೇಶ-ವಿದೇಶಗಳಲ್ಲೂ ಭಾರಿ ಫೇಮಸ್. ಅತೀ ಹೆಚ್ಚು ಜನ ಇದನ್ನು ಸೇವಿಸುತ್ತಾರೆ. ಆದರೂ ಹೈದರಾಬಾದ್‌ನಲ್ಲಿ ಸಸ್ಯಾಹಾರಕ್ಕೆ ಹೆಚ್ಚು ಬೇಡಿಕೆ ಇದೆ. ಇನ್ನು ತೆಲಂಗಾಣ ನಗರದ ಬೀದಿ ಬೀದಯಲ್ಲಿ ಮಾಂಸಾಹಾರದ ಅಂಗಡಿಗಳು ಜಾಸ್ತಿ. ಆದರೂ ಜನ ಸಸ್ಯಾಹಾರವನ್ನು ತರಿಸಿ ತಿನ್ನುತ್ತಾರೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಸಸ್ಯಾಹಾರವನ್ನು ಗೌರವಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸ್ವಿಗ್ಗಿ ಕಂಪನಿಯು ‘ಗ್ರೀನ್ ಡಾಟ್ ಅವಾರ್ಡ್’ ಘೋಷಿಸಿತ್ತು. ಈ ಯೋಜನೆಯ ಅಡಿಯಲ್ಲಿ ಈ ವರದಿಯನ್ನು ತಯಾರು ಮಾಡಲಾಗಿದೆ. 90% ರಷ್ಟು ಉಪಾಹಾರ ಆರ್ಡರ್‌ಗಳು ಸಸ್ಯಾಹಾರವೇ ಆಗಿರುತ್ತದೆ ಎಂದು Swiggy ಹೇಳಿಕೊಂಡಿದೆ. ಹೆಚ್ಚಿನ ಮಂದಿ ಉಪಾಹಾರವನ್ನು ಸಸ್ಯಾಹಾರದಲ್ಲೇ ಆಯ್ಕೆ ಮಾಡಿಕೊಳ್ಳುತ್ತಾರೆ.
ದೇಶದಲ್ಲಿ ಬರೋಬ್ಬರಿ 60,000ಕ್ಕೂ ಹೆಚ್ಚು ಸಸ್ಯಾಹಾರಿ ಸಲಾಡ್ಗಳಿಗೆ ಬೇಡಿಕೆ ಬರುತ್ತವೆ. ಈ ಮೂಲಕ ಜನರು ಇತ್ತೀಚೆಗೆ ಆರೋಗ್ಯಯುತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಸ್ವಿಗ್ಗಿಗೆ ಬರುವ ಪ್ರತೀ ಹತ್ತು ಆರ್ಡರ್‌ನಲ್ಲಿ ಆರು ಖಾದ್ಯಗಳು ವೆಜ್ ಆಗಿರುತ್ತವೆ ಎಂದು ಸ್ವಿಗ್ಗಿ ಬಿಡುಗಡೆ ಮಾಡಿದ ಅಂಕಿ ಅಂಶ ಹೇಳುತ್ತದೆ.