Kangana Ranaut: ‘ಆತನಿಗೆ ಮೊದ್ಲು ಡ್ರಗ್ಸ್ ಟೆಸ್ಟ್ ಮಾಡಿ, ಯಾವಾಗಲೂ ಮತ್ತಲ್ಲೇ ಇರುತ್ತಾನೆ’ – ರಾಹುಲ್ ಗಾಂಧಿ ವಿರುದ್ಧ ಕಂಗನಾ ಸ್ಟೇಟ್ಮೆಂಟ್ !!

Share the Article

Kangana Ranauþ: ರಾಹುಲ್ ಗಾಂಧಿ ಭಾಷಣದ ಬಗ್ಗೆ ಮಾತಾಡಿದ ನಟಿ ಕಂಗನಾ ರಣಾವತ್, ‘ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಅರ್ಥವಿಲ್ಲದ ವಿಚಾರಗಳನ್ನೇ ಮಾತಾನಾಡುತ್ತಿದ್ದು, ಯಾವಾಗಲೂ ಕುಡಿತ ಮತ್ತಿನಲ್ಲೇ ಇರ್ತಾರೆ ಮೊದಲು ಅವರಿಗೆ ಡ್ರಗ್ಸ್ ಪರೀಕ್ಷೆ ನಡೆಸಬೇಕು ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹಚ್ಚಿಸಿದ್ದಾರೆ.

ಲೋಕಸಭೆಯಲ್ಲಿ(Lokasabhe) ಇತ್ತೀಚೆಗೆ ರಾಹುಲ್ ಗಾಂಧಿ(Rahul Gandhi) ಅವರು ‘ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿ ಮಾಡಿದ್ದ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ಕಂಗನಾ, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಅರ್ಥವಿಲ್ಲದ್ದು ಮಾತನಾಡುತ್ತಿದ್ದು, ಮೊದಲು ಅವರಿಗೆ ಡ್ರಗ್ಸ್ ಪರೀಕ್ಷೆ ನಡೆಸಬೇಕು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮದ್ಯ ಅಥವಾ ಮಾದಕವಸ್ತು ಸೇವಿಸಿ ಸಂಸತ್ತಿಗೆ ಬರುತ್ತಾರೆ. ಹೀಗಾಗಿ ಅವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ ಪ್ರಧಾನಿಯವರು(PM Modi) ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದಾರೆ. ಇಡೀ ದೇಶ ಪ್ರಧಾನಿ ಅವರನ್ನು ಆಯ್ಕೆ ಮಾಡಿದೆ. ಹಾಗಿದ್ದಾಗ, ರಾಹುಲ್‌ ಗಾಂಧಿಯವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲವೇ? ಪ್ರಧಾನ ಮಂತ್ರಿಯನ್ನು ಲಿಂಗ, ವಯಸ್ಸು, ಸಾಮಾಜಿಕ ಸ್ಥಾನಮಾನ ಅಥವಾ ಜಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆಯೇ? ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು (ರಾಹುಲ್ ಗಾಂಧಿ) ಸಂವಿಧಾನವನ್ನು ನಿರಂತರವಾಗಿ ಅವಮಾನಿಸಿದ್ದಾರೆ. ಮುಂದೊಂದು ದಿನ ಅವರು ಪ್ರಧಾನಿಯನ್ನು ಚರ್ಮದ ಬಣ್ಣದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದೂ ಹೇಳಬಹುದು’ ಎಂದು ಕಿಡಿಕಾರಿದ್ದಾರೆ.

ಇನ್ನು ಕಂಗನಾ ಅವರ ಹೇಳಿಕೆಗೆ ಬಹಳಷ್ಟು ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಕಂಗನಾ ಹಿಂದೆ ತಾನೊಬ್ಬ ಮಾದಕ ದ್ರವ್ಯಗಳ ವ್ಯಸನಿ ಎಂದು ನೀಡಿದ್ದ ಹೇಳಿಕೆಯನ್ನು ಪೋಸ್ಟ್ ಮಾಡಿ ರಾಹುಲ್ ಗಾಂಧಿ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಅವರು ಈ ಹಿಂದೆ ಪಾರ್ಟಿಗಳಲ್ಲಿ ನೃತ್ಯ ಮಾಡುತ್ತಿದ್ದ ವಿಡಿಯೋ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ವಿಚಾರವಾಗಿ ಕಂಗನಾ ಮತ್ತು ರಾಹುಲ್ ಗಾಂಧಿ ಮುಖಾಮುಖಿ ಚರ್ಚೆ ಮಾಡಲಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Leave A Reply

Your email address will not be published.