Pavel Durov: ಮದುವೆಯಾಗದೆ 100 ಮಕ್ಕಳ ತಂದೆ ಆದ ಟೆಲಿಗ್ರಾಂ CEO !!

Pavel Durov: ಆಧುನಿಕ ಕಾಲಘಟದಲ್ಲಿ ಬದಲಾದ ಜೀವನ ಶೈಲಿಗಳಿಂದ, ಆಹಾರ ಪದ್ಧತಿಯಿಂದಾಗಿ ಮದುವೆಯಾದರೂ ಮಕ್ಕಳಾಗದೆ ನೋವನ್ನು ಅಭವಿಸುವವರು ಆನೇಕರಿದ್ದಾರೆ. ಆದರೆ ಇಲ್ಲೊಬ್ಬರು ದೊಡ್ಡ ವ್ಯಕ್ತಿ ತಾನು ಮದುವೆಯಾಗದೆಯೇ ಬರೋಬ್ಬರಿ 100 ಮಕ್ಕಳಿಗೆ ತಂದೆಯಾಗಿದ್ದಾರೆ.

ಇದನ್ನು ಕೇಳಿದಾಗ ನಿಮಗೆ ನಂಬಲು ಅಸಾಧ್ಯ ಎನಿಸಬಹುದು. ಆದರೆ ಇದು ಸತ್ಯ. ಇನ್ನೂ ಆಶ್ಚರ್ಯವೆಂದರೆ 100 ಮಕ್ಕಳ ತಂದೆಯಾಗಿರೋರು ಬೇರೆ ಯಾರು ಅಲ್ಲ, ಈ ದೊಡ್ಡವ್ಯಕ್ತಿಯೇ ಟೆಲಿಗ್ರಾಂ CEO ಪಾವೆಲ್‌ ದುರೋವ್‌ (Pavel Durov) ಅವರು. ಹೌದು, “ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಅವರು ಟೆಲಿಗ್ರಾಂ ಆ್ಯಪ್‌ನಲ್ಲಿಯೇ (Telegram App) ಹಂಚಿಕೊಂಡಿದ್ದಾರೆ.

ಟೆಲಿಗ್ರಾಂ ಪೋಸ್ಟ್ ನಲ್ಲಿ ಏನಿದೆ?
ನಾನು 100 ಮಕ್ಕಳ ತಂದೆ ಎಂಬುದಾಗಿ ತಿಳಿಸಿರೋ ಪಾವೆಲ್‌ ದುರೋವ್‌, ನಾನು ಒಮ್ಮೆಯೂ ಮದುವೆಯಾಗದ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ” ಎಂದು ಅವರೇ ಪ್ರಶ್ನೆ ಹಾಕಿದ್ದಾರೆ. ಬಳಿಕ ಇದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿರುವ ಅವರು “15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು” ಎಂದ. “ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ” ಎಂಬುದಾಗಿ ಪಾವೆಲ್‌ ದುರೋವ್‌ ತಿಳಿಸಿದ್ದಾರೆ

ಅಲ್ಲದೆ ನಿಯಮಿತವಾಗಿ ನಾನು ವೀರ್ಯವನ್ನು ದಾನ ಮಾಡುತ್ತಲೇ ಬಂದೆ. ಸುಮಾರು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ನನ್ನಿಂದಾಗಿ ಜನಿಸಿದ್ದಾರೆ ಎಂಬ ಸಂಗತಿ ಗೊತ್ತಾಯಿತು. ಕೆಲ ವರ್ಷಗಳ ಹಿಂದೆ ನಾನು ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದೆ. ಆದರೆ, ಐವಿಎಫ್‌ ಕ್ಲಿನಿಕ್‌ಗಳಲ್ಲಿ ಈಗಲೂ ನನ್ನ ವೀರ್ಯವನ್ನು ಸಂಗ್ರಹಿಸಿ ಇಟ್ಟಿದ್ದಾರೆ. ನನ್ನ ವೀರ್ಯದಿಂದ ಮಕ್ಕಳು ಜನಿಸುವ ಚಟುವಟಿಕೆಯು ನಡೆಯುತ್ತಲೇ ಇದೆ. ನಾನು ಮಾಡಿದ ಕೆಲಸಕ್ಕೆ ನನಗೆ ಹೆಮ್ಮೆ ಇದೆ. ಬೇರೆಯವರು ಕೂಡ ಇದನ್ನು ಮಾಡಬೇಕು ಎಂಬುದಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

Wayanad Landslide: ವಯನಾಡು ದುರಂತ : ಬೇರೆಯವರ ಮಗು ಕಾಪಾಡಲು ಹೋಗಿ ತನ್ನ ಮಗಳನ್ನು ಕಳೆದುಕೊಂಡ ಮಹಿಳೆ : ಮುಂದೇನಾಯ್ತು ಆ ಕುಟುಂಬಕ್ಕೆ..?

Leave A Reply

Your email address will not be published.