Hubballi: ನೇಹಾ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ‘ನಮ್ಮ ಕಾಂಗ್ರೆಸ್ ಪಕ್ಷದ ನಾಯಕರೇ ನನ್ನ ಮಗಳನ್ನು ಹತ್ಯೆ ಮಾಡಿಸಿದ್ದಾರೆ’ ಎಂದ ನೇಹಾ ತಂದೆ !!
Hubballi: ಕೆಲವು ತಿಂಗಳುಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ(Neha Murder Case) ಕ್ಕೀಗ ರೋಚಕ ಟ್ವಿಸ್ಟ್ ಸಿಕ್ಕಿದ್ದು, ನೇಹಾ ತಂದೆಯೇ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಹಲವು ವಿದ್ಯಾಮಾನಗಳಿಂದಾಗಿ ನೇಹಾ ಹತ್ಯೆ ಪ್ರಕರಣದ ಕುರಿತಿದ್ದ ಆಕ್ರೋಶ ತಣ್ಣಗಾಗಿತ್ತು. ಆದರೆ ತನಿಖೆ ಮಾತ್ರ ನಡೆಯುತ್ತಿತ್ತು. ಈ ನಡುವೆ ಇದೀಗ ಈ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನನ್ನ ಮಗಳನ್ನು ನಮ್ಮ ಪಕ್ಷದ ಮುಖಂಡರೇ ಹತ್ಯೆ ಮಾಡಿಸಿದ್ದು ಎಂದು ನೇಹಾ ತಂದೆ ನಿರಂಜನಯ್ಯ(Niranjanayya) ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು, ಹುಬ್ಬಳ್ಳಿಯಲ್ಲಿ(Hubballi) ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರದಿಂದ ನನ್ನ ಮಗಳ ಕೊಲೆಯಾಗಿದೆ. ನೂರಕ್ಕೆ ನೂರರಷ್ಟು ನಮ್ಮ ಪಕ್ಷದ ಮುಖಂಡರೇ ಈ ಹತ್ಯೆ ಮಾಡಿಸಿದ್ದಾರೆ. ಈ ಘಟನೆಯಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ನನ್ನ ಮಗಳನ್ನು ಕೊಲೆ ಮಾಡಿಸುವುದಕ್ಕಿಂತ ಆರೋಪಿಗೆ ಮೊದಲು ಹೊರಗೆ ತರುತ್ತೇನೆಂದು ಮಾತು ಕೊಟ್ಟಿರುತ್ತಾರೆ. ಹೀಗಾಗಿ ಯಾರೂ ಮಾಡಿಸಿದ್ದು ಎಂದು ಹೇಳಿ ಬಿಟ್ಟರೆ ಎಂಬ ಭಯದಿಂದ ಆರೋಪಿಗೆ ಸಹಾಯ ಮಾಡುತ್ತಿದ್ದಾರೆ. ಕೊಲೆ ಆರೋಪಿಗೆ ಜಾಮೀನು ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಮಗಳು ನೇಹಾ ಕೊಲೆ ಪ್ರಕರಣದ ಚಾರ್ಜ್ಶೀಟ್ ಇನ್ನೂ ಸಿಕ್ಕಿಲ್ಲ. ಒಂದು ಕಾಪಿ ಕೊಡಿ ಅಂದ್ರೂ ಸಿಐಡಿ ಅಧಿಕಾರಿಗಳು ನನಗೆ ಕೊಟ್ಟೇ ಇಲ್ಲ. ಮೇಲ್ನೋಟಕ್ಕೆ ಚಾರ್ಜ್ಶೀಟ್ನಲ್ಲಿ ಕೈಯಾಡಿಸಿರುವ ಅನುಮಾನವಿದೆ. ಕಾರ್ಯಕರ್ತರ ಬೆಳಿಬಾರದು, ಬೆಳೆದರೆ ನಮಗೆ ಸಮಸ್ಯೆ ಎಂಬ ಭೀತಿ ಎದುರಾಗಿದೆ. ಇವರು ತಪ್ಪು ಮಾಡಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಯ್ತು. ನಾನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ಏನಿದು ಪ್ರಕರಣ?
ಏಪ್ರಿಲ್ 17 ರಂದು ಹುಬ್ಬಳ್ಳಿಯ ಕಾಲೇಜುವೊಂದರಲ್ಲಿ ನಡೆದಿದ್ದ ‘ಕೈ’ ಕಾರ್ಪೊರೇಟರ್ ಮಗಳ ಹತ್ಯೆ ಪ್ರಕರಣವನ್ನು ಇಡೀ ದೇಶ ಖಂಡಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹತ್ಯೆಯಾದ ನೇಹಾ ಹಿರೇಮಠ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದರು. ಶೀಘ್ರ ನ್ಯಾಯಕ್ಕಾಗಿ ಫಾಸ್ಟ್‌ಟ್ರ್ಯಾಕ್ ಕೋರ್ಟ್ ಮಾಡುವುದಾಗಿ ಸಿಎಂ ಮಾತು ಕೊಟ್ಟಿದ್ದರು.