Mangaluru: ಬಸ್‌ನಲ್ಲೇ ವಿದ್ಯಾರ್ಥಿನಿಗೆ ಕಾಡಿದ ಎದೆನೋವು, ಹೃದಯಾಘಾತದ ಮುನ್ಸೂಚನೆ; ಬಸ್‌ ನೇರ ಆಸ್ಪತ್ರೆಗೆ

Share the Article

Mangaluru: ಸಿಟಿಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಏಕಾಏಕಿ ತೀವ್ರ ಎದೆನೋವಾಗಿ ಹೃದಯಾಘಾತದ ಮುನ್ಸೂಚನೆ ದೊರಕಿದ್ದು, ಕೂಡಲೇ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ನೆರವಾಗುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದು, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

13 ಎಫ್‌ ರೂಟ್‌ ನಂಬರ್‌ ಕೃಷ್ಣಪ್ರಸಾದ್‌ ಚಾಲಕ ಅವರು ಕೂಳೂರು ಮಾರ್ಗವಾಗಿ ಬಸ್‌ ಪ್ರಯಾಣ ಮಾಡುತ್ತಿದ್ದಾಗ, ಅದರಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಬಸ್‌ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್‌, ಮಹೇಶ್‌ ಪೂಜಾರಿ ಮತ್ತು ಸುರೇಶ್‌ ಅವರು ಕೂಡಲೇ ಎಲ್ಲಾ ಪ್ರಯಾಣಿಕರ ಸಮೇತವಾಗಿ ಆಂಬುಲೆನ್ಸ್‌ ರೀತಿಯಲ್ಲಿ ಕಂಕನಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಕೂಡಲೇ ವಿದ್ಯಾರ್ಥಿನಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ.

ತುರ್ತು ಸಂದರ್ಭದಲ್ಲಿ ಚಾಲಕ, ನಿರ್ವಾಹಕರ ಈ ತುರ್ತು ಕಾಳಜಿಗೆ ಜನರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದು, ಮೆಚ್ಚುಗೆಗೆ ಕಾರಣವಾಗಿದೆ.

 

Leave A Reply