Taj Mahal: ತಾಜ್ಮಹಲ್ ನ್ನು ಶಿವ ದೇವಾಲಯವೆಂದು ಕರೆದು ಗಂಗಾಜಲ ಸಿಂಪಡಿಸಲು ಮುಂದಾದ ಮಹಿಳೆ?
Taj Mahal: ವಿಶ್ವದ ಏಳು ಅದ್ಭುತಗಳಲ್ಲಿ ಹೆಸರಾಗಿರುವ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದ ಯಮುನಾ ನದಿಯ ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿಯಾಗಿದೆ. ಕ್ರಿ.ಶ. 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ಸಮಾಧಿಯನ್ನು ಇರಿಸಲು ಐಕಾನಿಕ್ ಸ್ಮಾರಕವನ್ನು ಕಟ್ಟಿಸಿದ್ದ ಎಂದು ಇತಿಹಾಸ ಹೇಳುತ್ತದೆ.
ಆದ್ರೆ ಮಹಿಳೆಯೊಬ್ಬರು ತಾಜ್ಮಹಲ್ನ್ನು (Taj Mahal) ಶಿವನ ದೇವಾಲಯವೆಂದು ಹೇಳಿಕೊಂಡು, ಗಂಗಾಜಲವನ್ನು ಸಿಂಪಡಿಸಲು ಹೋಗಿ ವಿವಾದ ಹುಟ್ಟುಹಾಕಿದ್ದಾರೆ. ಈ ಮಹಿಳೆ ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ನಂತರ ಗಂಗಾ ನದಿಯ ಪವಿತ್ರ ಜಲವನ್ನು ತೆಗೆದುಕೊಂಡು ಬಂದು ತಾಜ್ಮಹಲ್ಗೆ ಸಿಂಪಡಿಸಲು ಮುಂದಾಗಿದ್ದರು.
ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮೀನು ರಾಥೋಡ್ ಎಂಬ ಮಹಿಳೆ ತಾಜ್ಮಹಲ್ನ್ನು ಶಿವನಿಗೆ ಸಮರ್ಪಿತವಾದ ದೇವಾಲಯ ಎಂದು ಕರೆದು ಅದಕ್ಕೆ ಸಿಂಪಡಿಸಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ಭದ್ರತೆಗೆಂದು ನಿಯೋಜಿಸಲಾಗಿದ್ದ ತಾಜ್ ಸುರಕ್ಷಾ ಪೊಲೀಸರು ಅವರನ್ನು ತಡೆದಿದ್ದಾರೆ. ಸ್ವಲ್ಪ ಸಮಯದ ನಂತರ, ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಅರ್ಪಿಸಿದ್ದಾರೆ ಎಂದು ಎಸಿಪಿ ಸೈಯದ್ ಅರೀಬ್ ಅಹ್ಮದ್ ತಿಳಿಸಿದ್ದಾರೆ.
ತಾಜ್ಮಹಲ್ ಅನ್ನು ತೇಜೋ ಮಹಾಲಯ ಎಂದು ಅವರು ಉದ್ಘರಿಸಿದ್ದು, ಇದು ಶಿವನಿಗೆ ಸಮರ್ಪಿತವಾಗಿ ದೇವಾಯಲವಾಗಿದ್ದು, ಗಂಗಾಜಲ ಸಿಂಪಡಿಸಬೇಕಿದೆ ಎಂದು ಹೇಳಿದ್ದಾರೆ.