Heatwave In Kashmir: ಇಲ್ಲಿ ಮಳೆಗೆ ಶಾಲೆಗೆ ರಜೆ, ಕಾಶ್ಮೀರದಲ್ಲಿ ಬಿಸಿಲಿಗೆ ಶಾಲೆಗಳಿಗೆ ರಜೆ ಘೋಷಣೆ -ತಣ್ಣನೆಯ ಕಾಶ್ಮೀರದಲ್ಲಿ ಅಷ್ಟೊಂದು ಬಿಸಿಲೇ ?
Heatwave In Kashmir: ಇಲ್ಲಿ ಮಳೆಗೆ ಶಾಲೆಗೆ ರಜೆ, ಕಾಶ್ಮೀರದಲ್ಲಿ ಬಿಸಿಲಿಗೆ ಶಾಲೆಗಳಿಗೆ ರಜೆ ಘೋಷಣೆ -ತಣ್ಣನೆಯ ಕಾಶ್ಮೀರದಲ್ಲಿ ಅಷ್ಟೊಂದು ಬಿಸಿಲೇ ?
ಭಾರತದ ಭೌಗೋಳಿಕ ಲಕ್ಷಣವೇ ಹಾಗೆ. 40ರಿಂದ 60 ಕಿ ಮೀ ವ್ಯಾಪ್ತಿಯ ಒಳಗೆ ಒಂದೊಂದು ರೀತಿಯ ರಚನೆಯನ್ನು ನೋಡಬಹುದು. ನಮ್ಮ ದಕ್ಷಿಣ ಭಾರತದಲ್ಲಿ ಮಳೆ ಬಂದು ಎಲ್ಲಾ ಕೊಚ್ಚಿಕೊಂಡು ಹೋಗುತ್ತಿದ್ರೆ, ಚುಮು ಚುಮು ಚಳಿಯ ನಾಡು, ಪ್ರಕೃತಿ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಬಿಸಿಲ ಬೇಗೆ ತಡೆಯಲಾಗುತ್ತಿಲ್ಲವಂತೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಗರಿಷ್ಠ 24.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆಯಂತೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಭಾರಿ ಬಿಸಿಲು ಹಾಗೂ ಬಿಸಿಗಾಳಿಗೆ ತತ್ತರಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚಾಗುತ್ತಿರುವ ಹಿನ್ನೆಲೆ 2 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಮಧ್ಯರಾತ್ರಿ ಶ್ರೀನಗರಲ್ಲಿ ಕನಿಷ್ಠ 24.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಋತುಮಾನದ ಸರಾಸರಿಗಿಂತ ಸುಮಾರು 6.0 ಡಿಗ್ರಿ ಡಿಗ್ರಿಗಳಷ್ಟು ಹೆಚ್ಚಾಗಿದೆ. ಜುಲೈ 21, 1988ರ ಅತ್ಯಧಿಕ ಕನಿಷ್ಠ ತಾಪಮಾನವು 25.2 ಡಿಗ್ರಿ ಸೆಲ್ಸಿಯಸ್ ದಾಖಲಿಸಲಾಗಿತ್ತು. ತಂಪಾದ ಜಮ್ಮು ಕಾಶ್ಮೀರದದಲ್ಲಿ ಸೂರ್ಯನ ಶಾಖಕ್ಕೆ ನಾಗರೀಕರು ಹೈರಾಣಾಗಿದ್ದಾರೆ. ಕಾಶ್ಮೀರ ಜನತೆ ಈ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಫ್ಯಾನ್, ಏರ್ ಕೂಲರ್ ಮೊರೆ ಹೋಗುತ್ತಿರುವ ಹಿನ್ನೆಲೆ ಹವಾನಿಯಂತ್ರಿತ (ಎಸಿ) ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.
ತಾಪಮಾನ ಇಳಿಕೆ ಸಾಧ್ಯತೆ
ಕಳೆದ ಸೋಮವಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಭಾನುವಾರದಂದು ಅತಿ ಹೆಚ್ಚು ಮತ್ತು ಮೂರನೇ ಸಾರ್ವಕಾಲಿಕ ಗರಿಷ್ಠ 36.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಜುಲೈ 10, 1946 ರಂದು ಶ್ರೀನಗರದಲ್ಲಿ ಸಾರ್ವಕಾಲಿಕ ಗರಿಷ್ಠ 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಜುಲೈ 9, 1999 ರಂದು 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಜನರು, ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಕಾಶ್ಮೀರದ ಕೆಲವು ಭಾಗಗಳಲ್ಲಿ ಸೋಮವಾರ ಮಳೆ ಸುರಿದಿದ್ದು, ಬಿಸಿಲು ಬೇಗೆಯಿಂದ ತತ್ತರಿಸಿದ್ದ ಜನರು ಕೊಂಚ ನಿರಾಳರಾಗಿದ್ದಾರೆ.