Bengaluru: ಖಾಲಿಯಾಗಿರೋ ಖಜಾನೆ ತುಂಬಿಸಲು ಸರ್ಕಾರ ಹೊಸ ಪ್ಲ್ಯಾನ್! ಇಂತಹ ಆಸ್ತಿಗಳ ಮೇಲೆ ಸರ್ಕಾರದ ಕಣ್ಣು!

Bengaluru: ಗ್ಯಾರಂಟಿ ಯೋಜನೆ ಎಫೆಕ್ಟ್ ನಲ್ಲಿ ಖಾಲಿ ಆಗಿರೋ ಸರ್ಕಾರದಖಜಾನೆ ತುಂಬಿಸಲು ಸರಕಾರ ಪಾಲಿಕೆ ( Bengaluru BBMP) ಆಸ್ತಿಗಳ ಮೇಲೆ ಕಣ್ಣು ಹಾಕಿದೆ. ಹೌದು, ಪಾಲಿಕೆ (BBMP) ಆಸ್ತಿಗಳನ್ನು ಹರಾಜಿಗಿಟ್ಟು ಸಾವಿರಾರು ಕೋಟಿ ರೂಪಾಯಿ ಮೂಲಕ ಖಜಾನೆ ತುಂಬಿಸಲು ಸರ್ಕಾರ ಹೊರಟಿದೆ.

ಬಿಬಿಎಂಪಿ ಅಧೀನದ ಆಸ್ತಿಗಳನ್ನು ಸರ್ಕಾರ ತನ್ನ ಅಧಿಕಾರ ಬಳಸಿ ಹರಾಜಿಗಿಡಲು ಮುಂದಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಸರ್ಕಾರ ಖಡಕ್​ ಸೂಚನೆ ಕೊಟ್ಟಿದ್ದು, ಶೀಘ್ರವೇ ಪಾಲಿಕೆಯ ಅಧಿಕಾರದಲ್ಲಿರುವ ಸ್ವತ್ತನ್ನು ಹರಾಜಿಗಿಟ್ಟು ಮಾರಾಟ ಮಾಡಲು ಮುಂದಾಗಿದೆ. ಬೆಂಗಳೂರಲ್ಲಿ ಬಿಬಿಎಂಪಿ ಕೋಟ್ಯಾಂತರ ಬೆಲೆಬಾಳುವ ಆಸ್ತಿಯನ್ನು ಕಡಿಮೆ ದರಕ್ಕೆ ನಿಗದಿ ಮಾಡಿ ಭೋಗ್ಯಕ್ಕೆ ನೀಡಿದೆ. ಇದರಿಂದ ಕಡಿಮೆ ಆದಾಯ ಪಾಲಿಕೆಗೆ ಹರಿದು ಬರುತ್ತಿದೆ. ಇದೀಗ ಇಂಥಾ ಆಸ್ತಿಗಳನ್ನು ಪಟ್ಟಿ ಮಾಡಿ ಹರಾಜು ಹಾಕಲು ಪ್ಲ್ಯಾನ್ ನಡೆದಿದೆ.

ಸದ್ಯ ಪಾಲಿಕೆ ಒಡೆತನದಲ್ಲಿರುವ 6,815 ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಇದರ ಒಟ್ಟು ಭೂ ವಿಸ್ತೀರ್ಣ ಅಂದಾಜು 50 ಎಕರೆ ಆಗಲಿದೆ. ಇಷ್ಟು ಸ್ವತ್ತನ್ನು ಹಾರಾಜಿಗೆ ಇಟ್ಟರೆ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸದ್ಯ ಬಿಬಿಎಂಪಿ ಶಾಲೆಗಳಿಗೆ, ಕ್ಲಬ್‌​​ಗಳಿಗೆ, ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೇರಿದಂತೆ ಇತರೆ ಕಟ್ಟಡ ಹಾಗೂ ಕೆಲಸಕ್ಕೆ ಎಕರೆಗಟ್ಟಲೆ ಭೂಮಿಯನ್ನು ವಾರ್ಷಿಕ 50 ರೂಪಾಯಿಂದ 100ರೂಪಾಯಿವರೆಗೆ ಭೋಗ್ಯಕ್ಕೆ ನೀಡಿದೆ. ಇದರ ಜೊತೆಗೆ ಕೆಲವು ಕಡೆಗಳಲ್ಲಿ ಬಾಡಿಗೆ ಹಾಗೂ ಗುತ್ತಿಗೆಗೆ ನೀಡಿದೆ. ಪಾಲಿಕೆಯೇ ನೇರ ಒಡೆತನದಲ್ಲಿ 200 ಎಕೆರೆಗೂ ಅಧಿಕ ವಿಸ್ತೀರ್ಣದ ಆಸ್ತಿಗಳಿವೆ. ಈ ಪೈಕಿಗೆ ಕೆಲವು ಸಾಲಕ್ಕಾಗಿ ವಿವಿಧ ಅಂತರಾರಷ್ಟ್ರೀಯ ಬ್ಯಾಂಕ್‌ಗಳಲ್ಲಿ ಅಡವಿಡಲಾಗಿದೆ. ಇದೀಗ ಈ ಪೈಕಿ ಅಂದಾಜು 50 ಎಕೆರೆಯಷ್ಟು ಸ್ವತ್ತನ್ನು ಹರಾಜಿಗಿಡಲು ನಿರ್ಧರಿಸಲಾಗಿದೆ.

ಮುಖ್ಯವಾಗಿ ಸರ್ಕಾರದ ಉದ್ದೇಶಿಸಿರುವ ಹರಾಜಿನಲ್ಲಿ ಪಾಲ್ಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಅವಕಾಶ ಇರಲಿದೆ. ಇದರಲ್ಲಿ ಖಾಸಗಿ ಕಂಪನಿಗಳು ಅಥವಾ ವ್ಯಕ್ತಿಗಳಿಗೆ ಭಾಗಿಯಾಗಲು ಅವಕಾಶ ಇರೋದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಈಗಾಗಲೇ ಜುಲೈ 20 ರಂದು ರಾಜ್ಯ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿತ್ತು. ಬಿಬಿಎಂಪಿ ಆಸ್ತಿತಗಳನ್ನು ಹರಾಜು ಹಾಕುವ ಬಗ್ಗೆ ಸಾರ್ವಜನಿಕರ ಆಕ್ಷೇಪಗಳಿದ್ದರೆ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ಉಲ್ಲೇಖಿಸಿತ್ತು. ಒಂದು ತಿಂಗಳ ಅವಧಿ ನೀಡಿ ಆಕ್ಷೇಪಣೆಗಳಿದ್ದರೆ ನೀಡುವಂತೆ ಹೇಳಿತ್ತು. ಒಟ್ಟಾರೆ ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತ ಆಗುತ್ತಿದೆ.

Leave A Reply

Your email address will not be published.