Rudraksha: ರುದ್ರಾಕ್ಷಿ ಮಣಿ ನಿಮ್ಮ ಬದುಕು ಬದಲಿಸುತ್ತೆ! ಯಾವ ರಾಶಿಗೆ ಯಾವ ರುದ್ರಾಕ್ಷಿ ಹೊಂದುತ್ತೆ ಇಲ್ಲಿದೆ ನೋಡಿ!

Rudraksha: ರುದ್ರಾಕ್ಷಿ ಅಂದರೆ ಒಂದು ರೀತಿಯ ಪಾಸಿಟಿವ್ ಎನರ್ಜಿ. ಅದಕ್ಕಾಗಿ ಹಿಂದೂ ಧರ್ಮದಲ್ಲಿ ರುದ್ರಾಕ್ಷಿ ಮಣಿಗಳಿಗೆ(Rudraksha) ಮಹತ್ವದ ಸ್ಥಾನಮಾನವಿದೆ. ರುದ್ರಾಕ್ಷಿ ಯನ್ನು ಪ್ರಾರ್ಥನಾ ಮಣಿಗಳಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ಬಳಸಲಾಗುತ್ತೆ. ಅಂದಹಾಗೆ ರುದ್ರಾಕ್ಷಿ ಮಣಿಗಳಲ್ಲೂ ವಿವಿಧತೆಯಿದ್ದು, ಇದು ವಿವಿಧ ರೀತಿಯ ವಿಭಿನ್ನ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಅದು ಅಲ್ಲದೇ  ಶಿವನ ಪ್ರಿಯ ವಸ್ತು ರುದ್ರಾಕ್ಷಿಯಾಗಿದ್ದು, ಇದನ್ನು ಧರಿಸೋದರಿಂದ ಶಿವನ ಕೃಪೆಗೂ ಪಾತ್ರರಾಗಬಹುದು.

 

ಇದರ ಪ್ರಯೋಜನಗಳನ್ನು ಪಡೆಯಲು ಪ್ರತಿಯೊಬ್ಬರು ಇದನ್ನು ಧರಿಸಬಹುದು ಇಲ್ಲಾ ತಮ್ಮೊಟ್ಟಿಗೆ ಇರಿಸಿಕೊಳ್ಳಬಹುದು. ಆದರೆ ನೆನಪಿರಲಿ ನೀವು ನಿಮ್ಮ ರಾಶಿಗೆ ತಕ್ಕನಾದ ರುದ್ರಾಕ್ಷಿ ಮಣಿಗಳನ್ನು ಧರಿಸಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು.

ನಿಮ್ಮ ರಾಶಿಚಕ್ರದ ಚಿಹ್ನೆಗಳ ಪ್ರಕಾರ ನಿಮಗೆ ಸರಿಹೊಂದುವ ರುದ್ರಾಕ್ಷ ಮಣಿಯನ್ನು ಇಲ್ಲಿ ತಿಳಿಸಲಾಗಿದೆ.  ಶ್ರಾವಣ ಮಾಸದಲ್ಲಿ ಅವುಗಳನ್ನು ಧರಿಸೋದರಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಏಕ್ ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಈ ರೀತಿಯ ಮಣಿಗಳು ಇವರಿಗೆ ಗುರಿಗಳನ್ನು ಸಾಧಿಸಲು ಮತ್ತು ಜೀವನದಲ್ಲಿ ಸಂತೋಷವನ್ನು ತರಲು ಸಹಾಯ ಮಾಡುತ್ತವೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ 7 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು.  ಇದು ಸಮೃದ್ಧಿಯನ್ನು ತರುತ್ತದೆ ಮತ್ತು ನಿಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಗೌರಿ ಶಂಕರ ರುದ್ರಾಕ್ಷವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಪ್ರತಿ ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು 5 ಮುಖಿ ರುದ್ರಾಕ್ಷವನ್ನು ಧರಿಸಬೇಕು. ಒತ್ತಡವನ್ನು ಕಡಿಮೆ ಮಾಡಲು ಮತ್ತು ಜೀವನದಲ್ಲಿ ಶಾಂತತೆಯನ್ನು ಈ 5 ಮುಖಿ ರುದ್ರಾಕ್ಷಿ ಮಣಿ ಈ ರಾಶಿಯವರಿಗೆ ನೀಡುತ್ತದೆ

ಸಿಂಹ

ಸಿಂಹ ರಾಶಿಯವರು 1 ಮುಖಿ ರುದ್ರಾಕ್ಷವನ್ನು ಧರಿಸಬೇಕು. ಸಿಂಹ ರಾಶಿಯವರ ಅವರ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಜೊತೆಗೆ ಅವರ ವರ್ಚಸ್ಸನ್ನು ಹೆಚ್ಚಿಸುತ್ತದೆ ಮತ್ತು ಎಲ್ಲಾ ವಿಲಕ್ಷಣಗಳ ವಿರುದ್ಧ ಹೋರಾಡಲು ಅವರಿಗೆ ಶಕ್ತಿಯನ್ನು ನೀಡುತ್ತದೆ.

ಕನ್ಯಾರಾಶಿ

ಕನ್ಯಾ ರಾಶಿಯವರು 2 ಮುಖಿ ರುದ್ರಾಕ್ಷವನ್ನು ಧರಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸ್ಪಷ್ಟತೆಯನ್ನು ಹೊಂದಲು ಸಾಧ್ಯ. ಈ ರೀತಿಯ ಮಣಿಗಳನ್ನು ಧರಿಸೋದು ಸಂಪತ್ತು, ಸಮೃದ್ಧಿ ಜೊತೆಗೆ ಪಾಸಿಟಿವ್ ಆಗಿರಲು ಸಹಕರಿಸುತ್ತದೆ.

ತುಲಾ ರಾಶಿ

ತುಲಾ ರಾಶಿಯವರು 6 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಇದು ಅವರ ಶಿಕ್ಷಣದಲ್ಲಿ, ಕೆಲಸದ ಸ್ಥಳದಲ್ಲಿ ಉತ್ತಮ ಸಾಧನೆ ಮಾಡಲು ಮತ್ತು ಜೀವನದಲ್ಲಿ ಹೆಚ್ಚು ಆರ್ಥಿಕ ಸ್ಥಿರತೆಯನ್ನು ತರಲು ಸಹಾಯ ಮಾಡಿಕೊಡುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ 8 ಮುಖಿ ರುದ್ರಾಕ್ಷಿಯನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಇದು ಅವರ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಅವರು ಬಯಸುವುದನ್ನು ಜೀವನದಲ್ಲಿ ಒದಗಿಸಲು ಸಹಾಯ ಮಾಡುತ್ತದೆ.

ಧನು ರಾಶಿ

ಧನು ರಾಶಿಯ ವ್ಯಕ್ತಿಗಳು 3 ಮುಖಿ ರುದ್ರಾಕ್ಷಿಯನ್ನು ಧರಿಸೋದು ತುಂಬಾನೇ ಒಳ್ಳೆಯದು. ಇದು ಆತ್ಮವಿಶ್ವಾಸವನ್ನು ತರುತ್ತದೆ ಮತ್ತು ಅವರಲ್ಲಿ ಬೌದ್ಧಿಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

Leave A Reply

Your email address will not be published.