Private Bus: ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತಾದಿಗಳಿಗೆ ಬಿಗ್ ಶಾಕ್ ಕೊಟ್ಟ ಖಾಸಗಿ ಬಸ್ಸುಗಳು !!

Private Bus: ಸಕಲೇಶಪುರ ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದು ಕರಾವಳಿ ಭಾಗಕ್ಕೆ ರೈಲು ಸಂಚಾರ ಬಂದ್ ಆಗಿರುವುದು ಖಾಸಗೀ ಬಸ್(Private Bus)ಗಳಿಗೆ ವರದಾನವಾದಂತಿದೆ. ಯಸ್, ರೈಲು ಸಂಚಾರ ಬಂದ್ ಆಗುತ್ತಿದ್ದಂತೆ, ಧರ್ಮಸ್ಥಳ, ಸುಬ್ರಹ್ಮಣ್ಯ ಭಕ್ತಾದಿಗಳು, ಪ್ರಯಾಣಿಕರು ಖಾಸಗಿ ಬಸ್ ಮೊರೆ ಹೋಗುತ್ತಿದ್ದಾರೆ. ಈ ಬೆನ್ನಲ್ಲೇ ಖಾಸಗಿ ಬಸ್ ಮಾಲಿಕರು ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ಇದೇ ತಕ್ಕ ಸಮಯವೆಂದುಕೊಂಡ ಖಾಸಗಿ ಬಸ್ಗಳು ಇದೀಗ ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ (Dharmasthala- Subramanya) ಟಿಕೆಟ್ ದರವನ್ನು ಎರಡ್ಮೂರು ಪಟ್ಟು ಹೆಚ್ಚಿಸಿವೆ. ಖಾಸಗಿ ಬಸ್ಗಳು ಬೇಕಾಬಿಟ್ಟಿಯಾಗಿ ಟಿಕೆಟ್ ದರ ನಿಗದಿಪಡಿಸುತ್ತಿದ್ದು, ಪರಿಣಾಮವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ದುಪ್ಪಟ್ಟು ಹಾಗೂ ಅದಕ್ಕಿಂತಲೂ ಹೆಚ್ಚಾಗಿರುವುದು ಗೊತ್ತಾಗಿದೆ. ಹಾಗಿದ್ರೆ ಈಗೆಷ್ಟಿದೆ ಬಸ್ ಟಿಕೆಟ್ ದರ ಎಂಬ ಮಾಹಿತಿ ಇಲ್ಲಿದೆ.
ಎಷ್ಟು ಹೆಚ್ಚಾಗಿದೆ ಟಿಕೆಟ್ ದರ ಎಷ್ಟಿದೆ?
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟಾಗಿದ್ದು, ಕೆಲವು ಬಸ್ಗಳಂತೂ ಎರಡ್ಮೂರು ಪಟ್ಟು ದರ ಏರಿಕೆ ಮಾಡಿವೆ. ಇದುವರೆಗೃ ಬೆಂಗಳೂರು-ಮಂಗಳೂರು ಮಧ್ಯೆ ಬಸ್ ಪ್ರಯಾಣಕ್ಕೆ 500-600 ರೂ. ಇದ್ದ ಟಿಕೆಟ್ ದರ ಈಗ 1000 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ. ಇದರಿಂದ ಪ್ರಯಾಣಿಕರು ಅಕ್ಷರಶಃ ಕಂಗಾಲಾಗಿದ್ದಾರೆ.