Indian Railways: ರೈಲು ಪ್ರಯಾಣಿಕರಿಗೆ ಗುಡ್​ ನ್ಯೂಸ್! ಈ ರೈಲಿನಲ್ಲಿ ಉಚಿತ ಪ್ರಯಾಣ ಖಚಿತ!

Indian Railways: ಇನ್ನುಮುಂದೆ ರೈಲು ಪ್ರಯಾಣ ಕೂಡ ಉಚಿತ. ಹೌದು, ಭಾರತದ ಈ ರೈಲಿನಲ್ಲಿ (Indian Railways) ಸಂಚಾರ ಸಂಪೂರ್ಣ ಫ್ರೀ. ಈ ರೈಲಿನಲ್ಲಿ ಟಿಕೆಟ್​ ಪಡೆಯದೆಯೇ ನೀವು ಉಚಿತವಾಗಿ ಪ್ರಯಾಣಿಸಬಹುದು.

ಮುಖ್ಯವಾಗಿ ಭಾಕ್ರಾ ರೈಲ್ವೆ ವಿಭಾಗದಲ್ಲಿ ಪ್ರಯಾಣಿಕರು ಈ ಅವಕಾಶವನ್ನು ಪಡೆಯಬಹುದು. ಈ ರೀತಿಯ ಯೋಜನೆ ದೇಶದ ಬೇರೆಲ್ಲೂ ಇಲ್ಲವೆಂಬುದೇ ವಿಶೇಷ. ಈ ರೈಲು ಹತ್ತಿದ್ರೆ ಸಾಕು, ಆರಾಮವಾಗಿ ರೈಲು ಪ್ರಯಾಣ ಮಾಡಬಹುದು.

ಕಳೆದ 73 ವರ್ಷಗಳಿಂದ ಆ ಮಾರ್ಗದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಈ ರೈಲನ್ನು ಭಾಕ್ರಾ-ನಂಗಲ್ ರೈಲು ಎಂದು ಸಹ ಕರೆಯಲಾಗುತ್ತದೆ. ಈ ರೈಲಿನಲ್ಲಿ ನೀವು ಹಿಮಾಚಲ ಪ್ರದೇಶದಿಂದ ಪಂಜಾಬ್ ಗಡಿಗೆ ಟಿಕೆಟ್ ಇಲ್ಲದೆಯೇ ಉಚಿತವಾಗಿ ಪ್ರಯಾಣಿಸಬಹುದು.

ವಿಶೇಷವಾಗಿ ಈ ರೈಲಿನ ಬೋಗಿಗಳನ್ನು ಮರದಿಂದ ಮಾಡಲಾಗಿದೆ. ಒಟ್ಟು 3 ಬೋಗಿಗಳಿರುತ್ತವೆ. 3 ಬೋಗಿಗಳಲ್ಲಿ ಎರಡು ಪ್ರವಾಸಿಗರಿಗೆ ಮತ್ತು 1 ಬೋಗಿ ಮಹಿಳೆಯರಿಗಾಗಿರುತ್ತದೆ. ಈ ರೈಲು ಡೀಸೆಲ್ ಎಂಜಿನ್ ಹೊಂದಿದೆ. ಈ ರೈಲನ್ನು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ ನಿರ್ವಹಿಸುತ್ತದೆ. ಈ ರೈಲಿಗೆ ಪ್ರತಿದಿನ 50 ಲೀಟರ್ ಡೀಸೆಲ್ ತುಂಬಿದ್ರೆ, ಒಟ್ಟು 13 ಕಿಲೋಮೀಟರ್ ಪ್ರಯಾಣಿಸಬಹುದು.

ಈಗಾಗಲೇ ನಿಮಗೆ ಭಾಕ್ರಾನಂಗಲ್ ಅಣೆಕಟ್ಟು ನೆನಪಿರಬಹುದು. ಇದು ದೇಶದ ಅತಿ ಉದ್ದದ ನೇರ ಗುರುತ್ವಾಕರ್ಷಣೆಯ ಅಣೆಕಟ್ಟು . ಸಾಕಷ್ಟು ಪ್ರವಾಸಿಗರು ಈ ಅಣೆಕಟ್ಟಿನಲ್ಲೇ ರೈಲು ಪ್ರಯಾಣ ಮಾಡುತ್ತಾರೆ. ಈ ರೈಲು ರಸ್ತೆಯ ಬದಲು ಸಟ್ಲೆಜ್ ನದಿಯಲ್ಲಿ ಸಾಗಿ, ನಂತರ ಪರ್ವತಗಳ ಮಧ್ಯೆ ಸಾಗುತ್ತದೆ. ಇದೇ ಕಾರಣಕ್ಕೆ ಈ ರೈಲಿನಲ್ಲಿ ಹೆಚ್ಚಿನವರು ಪ್ರಯಾಣಿಸಲು ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ.

Leave A Reply

Your email address will not be published.