Dr G Parameshwar: ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವೋ ಇಲ್ಲ ಮೇಕೆ ಮಾಂಸವೋ?! ಇಲ್ಲಿದೆ ನೋಡಿ ಗೃಹ ಸಚಿವರ ಸ್ಪಷ್ಟನೆ
Dr G Parameshwar: ಬೆಂಗಳೂರು ರೈಲು ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾಂಸ ಸಾಗಾಟ ಪತ್ತೆಯಾಗಿದ್ದು, ಅದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಸುದ್ದಿ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆಹ. ಈ ವಿಚಾರವಾಗಿ ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ಅವರನ್ನೂ ಬಂಧಿಸಲಾಗಿದೆ. ಈ ಬೆನ್ನಲ್ಲೇ ಮಾಂಸದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್(Dr G Parameshwar) ಸ್ಪಷ್ಟೀಕರಣ ನೀಡಿದ್ದಾರೆ.
ಹೌದು, ಜೈಪುರದಿಂದ(Jaipura) ಬಂದಿದ್ದ ಲೋಡ್ಗಟ್ಟಲೇ ಬಾಕ್ಸ್ಗಳು ಶುಕ್ರವಾರ ಮೆಜೆಸ್ಟಿಕ್ನಲ್ಲಿ ಅನ್ಲೋಡ್ ಆಗುತ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಬಾಕ್ಸ್ಗಳಲ್ಲಿ ಇರೋದು ನಾಯಿ ಮಾಂಸ (Dog Meat). ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದ್ದು, ಇದು ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಸದ್ಯ ನಾಯಿ ಅಥವಾ ಕುರಿ ಮಾಂಸ ಎಂದು ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಹಾರ ಇಲಾಖೆ ಮಾಂಸವನ್ನು ಪರಿಕ್ಷೆಗೆ ಕೂಡ ಕಳುಹಿಸಿದೆ. ಇದರ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅದು ಕುರಿ ಮಾಂಸ ಎಂದು ವರದಿ ಬರುವ ಮೊದಲೇ ಸರ್ಟೀಫಿಕೆಟ್ ಕೊಟ್ಟಿದ್ದಾರೆ.
ಅಲ್ಲದೆ ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಾಂಸದ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್ ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷೆಯ ವರದಿ ಬಂದಿದೆ. ಅದರಲ್ಲಿ ಮೇಕೆ ಮಾಂಸ ಎಂಬುದಾಗಿ ತಿಳಿದು ಬಂದಿದೆ. ಆದರೇ ನಾಯಿ ಮಾಂಸ ಎಂಬುದಾಗಿ ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ. ರಾಜಸ್ಥಾನದಿಂದ ವಾರಕ್ಕೊಮ್ಮೆ, 15 ದಿನಗಳಿಗೊಮ್ಮೆ ಈ ರೀತಿಯಾಗಿ ರೈಲಿನ ಮೂಲಕ ಮಾಂಸವನ್ನು ತರುತ್ತಾರೆ. ಹೀಗೆ ತಂದಂತ ಮಾಂಸವನ್ನು ಮಾರಾಟ ಮಾಡುವುದೇ ಅವರ ಪ್ರವೃತ್ತಿಯಾಗಿದೆ. ಆದರೇ ತಂದಿರೋದು ನಾಯಿಯ ಮಾಂಸವಲ್ಲ. ಅದು ಮೇಕೆಯದ್ದು ಎಂಬುದಾಗಿ ಲ್ಯಾಬ್ ರಿಪೋರ್ಟ್ ನಿಂದ ದೃಢಪಟ್ಟಿದೆ ಎಂದು ಸ್ಪಷ್ಟ ಪಡಿಸಿದರು.