Rama: UPSC ಬೋಧಕಿಯಿಂದ ಶಾಕಿಂಗ್ ಸ್ಟೇಟ್ ಮೆಂಟ್; ರಾಮನಿಗಿಂತ ಅಕ್ಬರ್ ಬೆಸ್ಟ್ ಎಂದ ಟೀಚರ್

Share the Article

Ram: ಖ್ಯಾತ ನಾಗರಿಕ ಸೇವೆಗಳ ಪರೀಕ್ಷಾ ಶಿಕ್ಷಕಿ ಶುಭ್ರಾ ರಂಜನ್ ರಾಮ ದೇವರನ್ನು  ಮೊಘಲ್ ಚಕ್ರವರ್ತಿ ಅಕ್ಟರ್‌ನೊಂದಿಗೆ ಹೋಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಭಾರೀ ಟೀಕೆ ವ್ಯಕ್ಯವಾಗಿದೆ.  ಯುಪಿಎಸ್‌ಸಿ ಸಿಎಸ್‌ಇ ಕೋಚಿಂಗ್ ಕೋಚ್ ಶುಭ್ರಾ ರಂಜನ್‌ ಅವರು ಮೊಘಲ್ ಚಕ್ರವರ್ತಿ ಅಕ್ಟರ್ ಶ್ರೀರಾಮನಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಪ್ರತಿಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ರೀತಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

https://twitter.com/i/status/1817120523572138230

ತೀವ್ರ ಆಕ್ಷೇಪ ವ್ಯಕ್ತವಾದ ನಂತರ, ಯಾರ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಉದ್ದೇಶವಲ್ಲ, ಈ ರೀತಿ ನಡೆದಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಶುಭ್ರಾ ರಂಜನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಗವಾನ್ ಶ್ರೀರಾಮನ ರಾಜ್ಯವು ಆದರ್ಶ ರಾಜ್ಯವಾಗಿದೆ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.

ಈ ರೀತಿಯ ಹೇಳಿಕೆ ಕುರಿತು ಸೈಬರ್ ಪೋಲಿಸ್ ಪೋರ್ಟಲ್‌ನಲ್ಲಿ ದೂರು ದಾಖಲಾಗಿರುವ ಕುರಿತು ಹೇಳಿಕೆ ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಚರ್ಚೆ ಶುರುವಾಯಿತು. ಇದರಲ್ಲಿ ಶುಭ್ರ ರಂಜನ್‌ ಅವರು ಧರ್ಮನಿಂದನೆ ಮತ್ತು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. 

 

Leave A Reply

Your email address will not be published.