PM Modi: ಕುಂದು ಕೊರತೆಗಳನ್ನು ಪ್ರಧಾನಿ ಮೋದಿ ಬಳಿ ಹೇಳಿಕೊಳ್ಳಬೇಕೆ? ಹಾಗಿದ್ರೆ ಸಂಪರ್ಕಿಸುವುದು ಹೇಗೆ ?!
PM Modi: ಒಂದು ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಪ್ರಧಾನಿ ದೇಶದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಿರ ಬೇಕಾಗುತ್ತದೆ. ಪ್ರಜಾ ಸೇವೆಗೆ ಅಂಕಿತವಾದ ಮೇಲೆ ಹಗಲು ರಾತ್ರಿ ಎನ್ನದೆ ದುಡಿಯಬೇಕಾಗುತ್ತದೆ. ಅಂದರೆ ಜನರಿಗಾಗಿ ತೆರೆದಿರಬೇಕಾಗುತ್ತದೆ. ಅಂತೆಯೇ ಇದೀಗ ಮೋದಿ(PM Modi) ಅವರು ಪ್ರಧಾನಿ ಆದ ಬಳಿಕ ಇದು ಹೆಚ್ಚು ರೀತಿಯಲ್ಲಿ ತೆರೆದುಕೊಂಡಿದೆ. ಜನರು ತಮ್ಮ ಸಮಸ್ಯೆಗಳನ್ನು ಹೇಳಿದಾಗ ಮೋದಿಗಳು ಪ್ರತಿಕ್ರಿಯಿಸಿ, ಬಗೆಹರಿಸಿದ ಹಲವು ಪ್ರಸಂಗಗಳು ಇವೆ. ಹೀಗಾಗಿ ಜನರು, ಸಾರ್ವಜನಿಕರು ಮೋದಿಯ ಸಂಪರ್ಕಕ್ಕಾಗಿ ಪ್ರಯತ್ನಿಸತ್ತಿದ್ದಾರೆ. ಹಾಗಿದ್ರೆ ನಮ್ಮ ಪ್ರಧಾನಿಯನ್ನು ಭೇಟಿ ಮಾಡೋದು, ಸಂಪರ್ಕಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಮೋದಿ ಸಂಪರ್ಕ ಹೇಗೆ?
ಪ್ರಧಾನಿ ಕಾರ್ಯಾಲವಯವನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ ನಾಗರೀಕನೂ ಪ್ರಧಾನ ಮಂತ್ರಿಗಳನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
1.ಪತ್ರ
ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸ ಬಯಸುವವರು ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ನಿವಾಸದ ವಿಳಾಸಕ್ಕೆ ಪತ್ರ ಬರೆಯಬಹುದಾಗಿದೆ. ಅಲ್ಲಿನ ಅಧಿಕಾರಿಗಳು ಪತ್ರದ ಪ್ರಾಮುಖ್ಯತೆಗೆ ಅನುಗುಣವಾಗಿ ಅವುಗಳನ್ನು ವಿಲೇವಾರಿ ಮಾಡುತ್ತಾರೆ. ತೀರಾ ಪ್ರಮುಖ ಮತ್ತು ವಿಶೇಷ ಪತ್ರವಾಗಿದ್ದರೆ ಖುದ್ದು ಪ್ರಧಾನ ಮಂತ್ರಿಗಳಿಗೆ ತಲುಪಿಸುತ್ತಾರೆ. ಇಲ್ಲವಾದರೇ ತಾವೇ ಪತ್ರದಲ್ಲಿ ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸುತ್ತಾರೆ.
• ಪ್ರಧಾನಿ ಕಚೇರಿ ವಿಳಾಸ
ಪ್ರಧಾನಿ ಕಾರ್ಯಾಲಯ
ಸೌತ್ ಬ್ಲಾಕ್, ರೈಸೀನಾ ಹಿಲ್
ನವದೆಹಲಿ-110011
ಭಾರತ
2. ಫೋನಿನ ಮೂಲಕ:
ಪಿಎಂಒ ನವದೆಹಲಿಯ ಸೌತ್ ಬ್ಲಾಕ್ನಲ್ಲಿದೆ-110011. ನೇರ ಸಂವಹನಕ್ಕಾಗಿ, ನೀವು 011-23386447 ಗೆ ಫೋನ್ ಮೂಲಕ ಸಂಪರ್ಕಿಸಬಹುದು. ಈ ಸಂಖ್ಯೆಯು ನಿಮ್ಮನ್ನು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಸಂವಹನಗಳನ್ನು ನಿರ್ವಹಿಸುವ ಜಂಟಿ ಕಾರ್ಯದರ್ಶಿ ಶ್ರೀ ರೋಹಿತ್ ಯಾದವ್ ಅವರೊಂದಿಗೆ ಸಂಪರ್ಕಿಸುತ್ತದೆ.
3. ವೆಬ್ ಸೈಟ್
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಮತ್ತು ವೈಯುಕ್ತಿಕ ವೆಬ್ ತಾಣಗಳೂ ಮುಖಾಂತರವಾಗಿಯೂ ಸಾರ್ವಜನಿಕರಿಗೆ ಲಭ್ಯವಿದ್ದು, ಸರ್ಕಾರೀ ಅಧಿಕೃತ ವೆಬ್ ತಾಣ http://pmindia.gov.in/en/interact-with-honble-pm/ ಮತ್ತು ವೈಯುಕ್ತಿ ವೆಬ್ ತಾಣ www.narendramodi.inಕ್ಕೆ ಭೇಟಿ ನೀಡುವ ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ ನೇರವಾಗಿ ಸರ್ಕಾರದ ವೆಬ್ ತಾಣ http://mygov.nic.in/signup ಕ್ಕೆ ಲಾಗಿನ್ ಆಗುವ ಮೂಲಕ ಅಲ್ಲಿ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
4. ಇ-ಮೇಲ್
ಇನ್ನು ಇ-ಮೇಲ್ ಮೂಲಕ ಪ್ರಧಾನಿಗಳನ್ನು ಸಂಪರ್ಕಿಸಿ ದೂರು ಹೇಳ ಬಯಸುವವರು ಅವರ ಜಿಮೇಲ್ ಖಾತೆ narendramodi1234@gmail.com ಮೂಲಕ ಸಂಪರ್ಕಿಸಬಹುದಾಗಿದೆ.
ಪ್ರಧಾನಿಗಳ ಇತರೆ ಸಾಮಾಜಿಕ ಜಾಲತಾಣಗಳ ವಿವರ:
* https://www.youtube.com/user/narendramodi/about
* http://weibo.com/u/5581682776
* https://in.linkedin.com/in/narendramodi
* https://instagram.com/narendramodi/