Actor Darshan: ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದೇನೆ ಎಂದು ಸುಳ್ಳಿನ ಕಥೆ ಕಟ್ಟಿದ ಸಿದ್ಧಾರೂಡ?

Share the Article

Actor Darshan: ಜುಲೈ 8ರಂದು ಸಿದ್ಧಾರೂಢ ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಜೈಲಿನಲ್ಲಿ  ಸಿದ್ಧರೂಢ ಇದ್ದಿದ್ದಾಗಿ ವರದಿಯಾಗಿದೆ. ಜು.9ರಂದು ಸನ್ನಡತೆಯ ಆಧಾರದ ಮೇಲೆ ರಿಲೀಸ್ ಆದರು. ಆದರೆ ಸಿದ್ಧಾರೂಡ ಜೈಲಿನಲ್ಲಿ ದರ್ಶನ್‌ರನ್ನು ( Actor Darshan) ಭೇಟಿಯಾಗಿದ್ದೇನೆ ಎಂದು ಸುಳ್ಳು ಕಥೆ ಕಟ್ಟಿದ್ರಾ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.

ಹಲವು ಮಾಧ್ಯಮಗಳಲ್ಲಿ ದರ್ಶನ್ ಕುರಿತು ಸಿದ್ಧಾರೂಢ ನೀಡಿರುವ ಹೇಳಿಕೆ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಪರಿಶೀಲಿಸಿ, ಜೈಲಿನಲ್ಲಿ ದರ್ಶನ್ ಮತ್ತು ಸಿದ್ಧಾರೂಢ ಭೇಟಿ ಮಾಡಿಯೇ ಇಲ್ಲ. ನಟ ಭದ್ರತಾ ಸೆಲ್‌ನಲ್ಲಿದ್ದು, ಭೇಟಿಗೆ ಯಾರಿಗೂ ಅವಕಾಶ ಕೊಡಲಿಲ್ಲ ಎಂದು ಜಿಲ್ಲಾಧಿಕಾರಿಗಳು ಕಾರಾಗೃಹ ಇಲಾಖೆಗೆ ರಿಪೋರ್ಟ್ ಕೊಟ್ಟಿದ್ದಾರೆ.

ಇತ್ತೀಚೆಗೆ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿರೋದಾಗಿ ಮಾಧ್ಯಮಕ್ಕೆ ಸಿದ್ಧಾರೂಢ ಹೇಳಿರುವ ಜೊತೆಗೆ, ಸುಳ್ಳಿನ ಕಂತೆಯನ್ನೇ ಹೇಳಿದ್ದಾರೆ. ದರ್ಶನ್ ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ. ದರ್ಶನ್‌ರನ್ನು ಅಲ್ಲಿ ನೋಡಿ ಬೇಜಾರಾಯಿತು. ಜುಲೈ 8ರಂದು ಅಧಿಕಾರಿಗಳ ಅನುಮತಿ ಪಡೆದು ದರ್ಶನ್‌ರನ್ನು ಭೇಟಿಯಾದೆ. ನಿಮ್ಮ ಅಭಿಮಾನಿ ಅಂತ ಭೇಟಿಯಾದಾಗ ತಬ್ಬಿಕೊಂಡರು. ಬಳಿಕ ಅವರಿಗೆ ನಾನು ಪಿರಮಿಡ್ ಧ್ಯಾನ ಹೇಳಿಕೊಟ್ಟೆ. 10 ನಿಮಿಷ ಮಾಡಿದ ನಂತರ ಇದು ಒಂದು ಥರ ಚೆನ್ನಾಗಿದೆ ಕಂಟಿನ್ಯೂ ಮಾಡಬಹುದು ಎಂದು ದರ್ಶನ್ ಹೇಳಿದ್ರು ಎಂದು ಸಿದ್ಧಾರೂಢ ಮಾತನಾಡಿದ್ದರು.

ದರ್ಶನ್ ಸರ್ ಮಾಡಿದ್ದು ತಪ್ಪೋ ಸರಿಯೋ ಅದನ್ನು ನಿರ್ಧಾರ ಮಾಡೋಕೆ ನ್ಯಾಯಾಲಯ ಇದೆ. ಕೊನೆಯವರೆಗೂ ನಮ್ಮ ಜೊತೆಗೆ ಇರೋದು ಹೆಂಡತಿ, ಮಕ್ಕಳು ಮಾತ್ರ. ದರ್ಶನ್ ಸರ್‌ಗೆ ಆದಷ್ಟು ಬೇಗ ಒಳ್ಳೆಯದಾಗಲಿ. ನನಗೆ ನಾನು ಜೈಲಿಗೆ ಹೋಗಿದ್ದು ಅಷ್ಟು ಬೇಜಾರು ಆಗಲಿಲ್ಲ. ಆದರೆ ದರ್ಶನ್ ಸರ್ ಜೈಲಿಗೆ ಬಂದಿದ್ದು ಬಹಳ ಬೇಸರ ಆಯ್ತು. ನಾನು ಯಾಕೆ ಜೈಲಿಗೆ ಬಂದೆ ಎಂದು ವಿಚಾರಿಸಿದರು. ಬಳಿಕ ಹೊಸ ಜೀವನ ಸಿಕ್ಕಿದೆ. ಒಳ್ಳೆಯದಾಗಲಿ ಎಂದು ಮಾತನಾಡಿದ್ದರು. ನೀನು ನನ್ನ ಸೆಲೆಬ್ರಿಟಿ. ಹಾಗೆಯೇ ನಾನು ನಿನ್ನ ಸೆಲೆಬ್ರಿಟಿ ಎಂದು ಹೇಳಿದ್ರು ಎಂದು ಸಿದ್ಧಾರೂಢ ಹೇಳಿದ್ದರು.

ನಾನು ಕಳೆದ 21 ವರ್ಷಗಳಿಂದ ಜೈಲಿನಲ್ಲಿ ಇದ್ದೇನೆ. ನನಗೆ ಗೊತ್ತು. ದರ್ಶನ್ ಸರ್ ನಿಜವಾಗಲೂ ನರಕ ಅನುಭವಿಸುತ್ತಿದ್ದಾರೆ. ನಾನು ಭೇಟಿಯಾದ ಅವರು ಡಲ್ ಆಗಿದ್ರೂ. ‘ಕಾಟೇರ’ (Kaatera) ಸಿನಿಮಾದಲ್ಲಿ ಇದ್ದ ಬಾಡಿಗೂ ಈಗ ಇರುವ ಬಾಡಿಗೂ ತುಂಬಾ ವ್ಯತ್ಯಾಸ ಇದೆ. ಆಗಿದೆ. ಅವರಿಗೆ ವಿಐಪಿ ಟ್ರೀಟ್ಮೆಂಟ್‌ ನಿಜವಾಗಲೂ ಕೊಟ್ಟೇ ಇಲ್ಲ. ಎಲ್ಲರ ಹಾಗೇ ಅವರನ್ನು ನೋಡ್ತಿಕೊಳ್ತಿದ್ದಾರೆ. ಅವರು ನೆಲದ ಮೇಲೆ ಮಲ್ಕೋತ್ತಾರೆ.  ಕುಡಿಯೋಕೆ ವಾಟರ್ ಕ್ಯಾನ್‌ನಲ್ಲಿ ನೀರಿದೆ ಅಷ್ಟೇ ಎಂದು ಸುಳ್ಳಿನ ಕಂತೆಯನ್ನೇ ಸಿದ್ದರೂಢ ಹೇಳಿದ್ದಾನೆ ಎಂದು ಅನುಮಾನ ಗಬ್ಬೆದ್ದಿದೆ.

Leave A Reply

Your email address will not be published.