Tragedy: ರೈಲಿನಲ್ಲಿ ಯುವಕನ ಸಾಹಸ: ಅಪಾಯಕಾರಿ ಸಾಹಸ ಮಾಡಲು ಹೋದ ಯುವಕನಿಗೇನಾಯ್ತು?

Tragedy: ರೈಲಿನಲ್ಲಿ ತರಹೇವಾರಿ ಕಸರತ್ತು ಮಾಡಿ ತಮ್ಮ ಸ್ಟಂಟ್ ಪ್ರದರ್ಶನ ಮಾಡುವ ಅನೇಕರ ವೀಡಿಯೋ ನೀವು ನೋಡಿರಬಹುದು. ಸಾಹಸ ಮಾಡಲು ಹೋಗುವ ಯುವಕರು ಇದರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎನ್ನುವುದರ ಕುರಿತು ಯೋಚನೆ ಮಾಡದೇ ಹುಂಬು ಸಾಹಸ ತೋರುತ್ತಾರೆ. 

 

ಅಂತಹ ಒಂದು ಅಪಾಯಕಾರಿ ಸಾಹಸ ರೈಲಿ‌ನಲ್ಲಿ ಮಾಡಲು ಹೋದ ಯುವಕನೋರ್ವ ತನ್ನ ಕಾಲು ಮತ್ತು ಕೈಯನ್ನು ಕಳೆದುಕೊಂಡಿದ್ದಾನೆ

 

ಈ ಘಟನೆ ನಡೆದಿರುವುದು ಮುಂಬೈನಲ್ಲಿ.  ಕಳೆದ ತಿಂಗಳು ಫರ್ಹತ್ ಅಜಮ್ ಶೇಖ್ ಎಂಬ ಯುವಕ ಚಲಿಸುತ್ತಿರುವ ರೈಲನ್ನು ಹಿಡಿದು ಒಂದು ವಿಡಿಯೋ ಮಾಡಿ ಅದನ್ನು ತನ್ನ  ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಇದೆಲ್ಲ ಪೊಲೀಸರ ಗಮನಕ್ಕೂ ಬಂದಿದೆ.

ಇದಾದ ನಂತರ ಆತ ಇದನ್ನು ಮಾಡುವುದನ್ನು ನಿಲ್ಲಿಸಬಹುದಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ರೈಲು ಹಿಡಿದು ಸ್ಟಂಟ್ ಮಾಡುವ ವೇಳೆ ಆ ಯುವಕನಿಗೆ ತೀವ್ರ ಪೆಟ್ಟಾಗಿದ್ದು, ಆಜಂ ಶೇಖ್ ತನ್ನ ಕಾಲು ಮತ್ತು ಕೈಯನ್ನು ಕಳೆದುಕೊಂಡಿದ್ದಾನೆ.

ಬಾಳಿ ಬದುಕಿ ತನ್ನ ತಂದೆ ತಾಯಿಗೆ ಆಸರೆಯಾಗಬೇಕಾಗಿದ್ದ ಯುವಕ ಇದೀಗ ಕೈ ಕಾಲು ಕಳೆದುಕೊಂಡು ಅಸಾಹಯಕ ಪರಿಸ್ಥಿತಿ ತಲುಪಿದ್ದಾನೆ.

Leave A Reply

Your email address will not be published.