Karnataka Airports: ರಾಜ್ಯದ ಈ 4 ವಿಮಾನ ನಿಲ್ದಾಣಗಳ ಹೆಸರು ಬದಲಾವಣೆ – ಯಾವ ವಿಮಾನ ನಿಲ್ದಾಣ, ಸರ್ಕಾರ ಪ್ರಸ್ತಾಪಿಸಿದ ಹೆಸರುಗಳೇನು?

Karnataka Airports: ರಾಜ್ಯದಲ್ಲಿ ರಾಮನಗರ ಹೆಸರು ಬದಲಾವಣೆ ಚರ್ಚೆ ಜೋರಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಕರ್ನಾಟಕದಲ್ಲಿರುವ ನಾಲ್ಕು ವಿಮಾನ ನಿಲ್ದಾಣಗಳ(Karnataka Airports) ಹೆಸರನ್ನು ಬದಲಾವಣೆ ಮಾಡಲು ಮುಂದಾಗಿದೆ

ಹೌದು, ಕರ್ನಾಟಕದಲ್ಲಿರುವ ನಾಲ್ಕು ವಿಮಾನ ನಿಲ್ದಾಣಗಳಿಗೆ ಗಣ್ಯ ವ್ಯಕ್ತಿಗಳ ಹೆಸರನ್ನು ಇಡುವಂತೆ ರಾಜ್ಯ ಸರ್ಕಾರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದ್ದು ರಾಜ್ಯದ ವಿಜಯಪುರ ವಿಮಾನ ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣ, ಬೆಳಗಾವಿ ವಿಮಾನ ನಿಲ್ದಾಣ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳ ಹೆಸರುಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಯಾವೆಲ್ಲಾ ವಿಮಾನ ನಿಲ್ದಾಣಗಳ ಹೆಸರು ಬದಲಾವಣೆ?
ರಾಜ್ಯದ ವಿಜಯಪುರ ವಿಮಾನ(Vijayapura Airport) ನಿಲ್ದಾಣ, ಹುಬ್ಬಳ್ಳಿ ವಿಮಾನ ನಿಲ್ದಾಣ(Hubballi Airport) , ಬೆಳಗಾವಿ ವಿಮಾನ ನಿಲ್ದಾಣ(Belagavi Airport) ಮತ್ತು ಶಿವಮೊಗ್ಗ ವಿಮಾನ(Shivmogga Airport)ನಿಲ್ದಾಣಗಳ ಹೆಸರುಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣ, ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ, ಮತ್ತು ರಾಷ್ಟ್ರಕವಿ ಡಾ.ಕೆ.ವಿ. ಪುಟ್ಟಪ್ಪ (ಕುವೆಂಪು) ವಿಮಾನ ನಿಲ್ದಾಣ ಎಂದು ಹೆಸರಿಡಲಾಗುವುದು ಎಂದು ರಾಜ್ಯ ಸರ್ಕಾರದ ಪ್ರಸ್ತಾಪಿಸಿದೆ.

ಅಂದಹಾಗೆ ಸಂಸತ್ತಿನ ನಡೆಯುತ್ತಿರುವ ಅಧಿವೇಶನದಲ್ಲಿ ಲೋಕಸಭೆಯಲ್ಲಿ ವಿಮಾನ ನಿಲ್ದಾಣಗಳ ಉದ್ದೇಶಿತ ನಾಮಕರಣದ ಕುರಿತು ನಕ್ಷತ್ರ ಹಾಕದ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ವಿಮಾನ ನಿಲ್ದಾಣಗಳಿಗೆ ಹೆಸರುಗಳನ್ನು ಪ್ರಸ್ತಾಪಿಸಿದ 10 ರಾಜ್ಯಗಳ ವಿವರಗಳನ್ನು ನೀಡಿದರು.

Leave A Reply

Your email address will not be published.