Toll system: ಇನ್ಮುಂದೆ ಟೋಲ್‌ ಹಣ ಕಟ್ಟಬೇಕಾಗಿಲ್ಲ ನಿತಿನ್ ಗಡ್ಕರಿಯಿಂದ ಟೋಲ್ ವ್ಯವಸ್ಥೆ ರದ್ದು ಘೋಷಣೆ

Toll System: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ಸಿಸ್ಟಮ್ ಬಗ್ಗೆ ಮಹತ್ವ ನಿರ್ಧಾರವನ್ನ ತೆಗೆದುಕೊಂಡಿದ್ದು, ಇದೀಗ, ಅಸ್ತಿತ್ವದಲ್ಲಿರುವ ಟೋಲ್ ವ್ಯವಸ್ಥೆಯನ್ನ (Toll System)  ರದ್ದುಗೊಳಿಸಿದ್ದಾರೆ. ಇದರೊಂದಿಗೆ, ಉಪಗ್ರಹ ಟೋಲ್ ಸಂಗ್ರಹ ವ್ಯವಸ್ಥೆಯ ಉಡಾವಣೆಯನ್ನ ಘೋಷಿಸಲಾಗಿದೆ. ಹೌದು, ಇದೀಗ ಸರ್ಕಾರವು ಟೋಲ್‌ ರದ್ದುಗೊಳಿಸುತ್ತಿದೆ ಮತ್ತು ಇದರ ಬದಲಾಗಿ ಶೀಘ್ರದಲ್ಲೇ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಜಾರಿಗೆ ತರಲಿದೆ ಎಂದು ಹೇಳಿದರು. ಇದನ್ನು ಆಯ್ದ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಮಾಡಲಾಗುತ್ತದೆ.

ಇನ್ನು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ನಿತಿನ್ ಗಡ್ಕರಿ, ಈಗ ನಾವು ಟೋಲ್ ರದ್ದುಗೊಳಿಸುತ್ತಿದ್ದೇವೆ ಮತ್ತು ಇದರ ಬದಲಾಗಿ ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ತರಲಾಗುತ್ತೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನ ಕಡಿತಗೊಳಿಸಲಾಗುತ್ತದೆ ಮತ್ತು ನೀವು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ. ಇದು ಸಮಯ ಮತ್ತು ಹಣವನ್ನ ಉಳಿಸುತ್ತದೆ.

ಮುಖ್ಯವಾಗಿ ಈ ಹೊಸ ವ್ಯವಸ್ಥೆಯಿಂದ ಟೋಲ್ ಸಂಗ್ರಹವನ್ನ ಹೆಚ್ಚಿಸುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನ ಕಡಿಮೆ ಮಾಡುವುದು ಈ ವ್ಯವಸ್ಥೆಯನ್ನ ಜಾರಿಗೆ ತರುವ  ಉದ್ದೇಶವಾಗಿದೆ. ಉದಾಹರಣೆಗೆ ಈ ಮೊದಲು ಮುಂಬೈನಿಂದ ಪುಣೆಗೆ ಪ್ರಯಾಣಿಸಲು 9 ಗಂಟೆಗಳು ತೆಗೆದುಕೊಳ್ಳುತ್ತಿತ್ತು, ಈಗ ಕೇವಲ 2 ಗಂಟೆಗಳಲ್ಲಿ ಮುಂಬೈನಿಂದ ಪುಣೆಗೆ ಪ್ರಯಾಣ ನಡೆಸಬಹುದಾಗಿದೆ.

Leave A Reply

Your email address will not be published.