G T Mall: ಜಿ ಟಿ ಮಾಲ್ ವಿರುದ್ಧ ಪಿತೂರಿ ಹೂಡಲು ಹುಟ್ಟಿಕೊಂಡಿತೇ ಪಂಚೆ ಚರ್ಚೆ !! ಸಿ ಸಿ ಟಿವಿಯಲ್ಲಿ ಬಯಲಾಯ್ತು ಎಲ್ಲಾ ರಹಸ್ಯ

Share the Article

G T Mall: ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಪಂಚೆ ಉಟ್ಟ ರೈತನಿಗೆ G T ಮಾಲ್ ಒಳಗೆ ನೋ ಎಂಟ್ರಿ ಎನ್ನಲಾದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದು ನಾಡಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿ ಸಾಮಾನ್ಯವಾದ ಒಂದು ಪಂಚೆ ಮಾಲ್ ಅನ್ನು ಬಂದ್ ಮಾಡಿಸುವ ಮಟ್ಟಕ್ಕೆ ಪವರ್ ಪಡೆಯಿತು. ಈ ಮೂಲಕ ಪಂಚೆ ಎಷ್ಟು ಪವರ್ ಫುಲ್ ಅನ್ನೋದು ಇಡೀ ದೇಶಕ್ಕೆ ಗೊತ್ತಾಗಿತ್ತು. ಆದರೀಗ ಜಿ ಟಿ ಮಾಲ್ ಯಾಕೆ ಪಂಚೆ ಉಟ್ಟವರಿಗೆ ನೋ ಎಂಟ್ರಿ ಎಂದಿತು ಎಂಬ ಅಚ್ಚರಿ ಸತ್ಯವೊಂದು ಬಯಲಾಗಿದೆ.

ಪಂಚೆ ಉಟ್ಟ ರೈತನಿಗೆ ನೋ ಎಂಟ್ರಿ ಎಂದ ಕಾರಣಕ್ಕೆ ಬಂದ್ ಮಾಡಲಾಗಿದ್ದ, ಜಿಟಿ ಮಾಲ್ ಮತ್ತೆ ಓಪನ್ ಆಗಿದೆ. ಆದರೆ ಇದೀಗ CCTV ಕ್ಯಾಮೆರಾದಲ್ಲಿ ಪಂಚೆ ರಹಸ್ಯ ಸೆರೆಯಾಗಿದ್ದು, ಜಿಟಿ ಮಾಲ್​ ವಿರುದ್ಧ ಪಿತೂರಿ ನಡೆಸಲು ಈ ಚರ್ಚೆಯನ್ನು ಹುಟ್ಟುಹಾಕಲಾಯಿತೇ? ಎಂಬ ಅನುಮಾನಗಳು ಶುರುವಾಗಿವೆ.

ಹೌದು, ಫಕೀರಪ್ಪರನ್ನು(Pakeerappa) ಮಾಲ್​​ನವರು ಪರಿಶೀಲನೆ ಮಾಡಿದ್ದೇಕೆ ಎಂಬುದು ಇದೀಗ ಬಯಲಾಗಿದೆ. ಅದೇನೆಂದರೆ ಕೆಲ ದಿನಗಳ ಹಿಂದೆ ಪಂಚೆ ಧರಿಸಿದ್ದ ವ್ಯಕ್ತಿ ಮಾಲ್​ಗೆ ಬಂದಿದ್ರು. ಗ್ರೌಂಡ್​ಫ್ಲೋರ್​​ನಲ್ಲಿ ಈವೆಂಟ್​ ನಡೀತಿದ್ರೆ ಆ ವ್ಯಕ್ತಿ ಫಸ್ಟ್ ಫ್ಲೋರ್​ಗೆ ಹೋಗಿದ್ರು. ಒಳ ಉಡುಪು ಹಾಕ್ದೆ ವ್ಯಕ್ತಿ ನಿಂತಿದ್ದು ನೋಡಿ ಮಹಿಳೆಯೊಬ್ರು ಈ ಸಂಬಂಧ ದೂರು ನೀಡಿದ್ದರು. ಕೂಡ್ಲೇ ಮಾಲ್​​ ಮ್ಯಾನೇಜರ್​ ಆ ವ್ಯಕ್ತಿಯನ್ನು ಹೊರಗೆ ಕಳಿಸಿದ್ದರು. ಅವತ್ತಿನಿಂದ ಪಂಚೆ ಧರಿಸಿ ಯಾರೇ ಬಂದ್ರೂ ಸಿಬ್ಬಂದಿ ವಿಚಾರಿಸುತ್ತಿದ್ದರು. ಆದರೆ ಮಹಿಳೆಯರ ದೂರಿನ ಹಿನ್ನೆಲೆಯಲ್ಲಿ GT ಮಾಲ್​​ ಮುನ್ನೆಚ್ಚರಿಕೆ ವಹಿಸಿದ್ದೇ ತಪ್ಪಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.

 

Leave A Reply

Your email address will not be published.