Bagalkot Police: ಕಾಲೇಜು ಫೀಸ್ ನಲ್ಲಿ ದಂಡ ಕಟ್ಟಿದ್ದೇನೆ ಮೇಡಂ, ಮನೇಲಿ ಬೈತಾರೆ ಎಂದ ಬಾಲಕ – ಕರಗಿ ಕಣ್ಣೀರಾದ ಲೇಡಿ ಪಿಎಸ್ಐ !
ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದ ಕಾಲೇಜು ವಿದ್ಯಾರ್ಥಿಯೊಬ್ಬ ರಸ್ತೆಯಲ್ಲಿ ನಿಂತು ದಂಡ ವಿಧಿಸುತ್ತಿದ್ದ ಪಿಎಸ್‌ಐ ಅಧಿಕಾರಿ ಕಣ್ಣಿಗೆ ಸಿಕ್ಕಿಬಿದ್ದಿದ್ದು, ಫೈನ್ ಪಾವತಿಸಲು ತನ್ನ ಬಳಿ ಹಣವಿಲ್ಲ ಎಂದು ಕಣ್ಣೀರಿಟ್ಟಿದ್ದಾನೆ. ಕಡೆಗೆ ಕಾಲೇಜು ಶುಲ್ಕ ಕಟ್ಟಲು ಇಟ್ಟುಕೊಂಡಿದ್ದ ಹಣವನ್ನೇ ದಂಡವನ್ನಾಗಿ ಕೊಟ್ಟ ಮನಕಲಕುವ ಘಟನೆ ಬಾಗಲಕೋಟೆಯ ಇಲಕಳ್ ನಲ್ಲಿ ವರದಿಯಾಗಿದೆ. ಆತನ ನೋವಿಗೆ ಪೊಲೀಸ್ ಅಧಿಕಾರಿಣಿ ಮರುಗಿದ ಘಟನೆ ಇದೀಗ ವೈರಲ್ ಆಗಿದೆ.
ರಸ್ತೆ ಸಂಚಾರ ನಿಯಮ ಪಾಲಿಸದ ಬೈಕ್ ಸವಾರನಿಗೆ ಮಹಿಳಾ ಪೊಲೀಸ್ ಅಧಿಕಾರಿ ದಂಡ ವಿಧಿಸಿದ್ದರು. ಡ್ರೈವಿಂಗ್ ಲೈಸನ್ಸ್ ಇಲ್ಲದೆ ತ್ರಿಬಲ್ ರೈಡ್ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್. ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು. ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಬಿಕ್ಕಿ ಬಿಕ್ಕಿ ಅಳುತ್ತ ದುಡ್ಡು ಕೊಟ್ಟಿದ್ದಾನೆ.
ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಒಂದು ನಿಮಿಷ ಮೌನಕ್ಕೆ ಜಾರಿದ್ದು, ಆತನ ಸ್ಥಿತಿಗೆ ಕರಗಿದ್ದಾರೆ. ಬಾಲಕನನ್ನು ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.
ಹದಿನೆಂಟು ವರ್ಷ ಆಗದೆ ಲೈಸನ್ಸ್ ಇಲ್ಲದೆ ವಾಹನ ಒಬ್ಬರು ಚಲಾಯಿಸಿದರು ಆದರೆ ಈಗ ಶಾಲಾ ಮಕ್ಕಳಿಕೆ ಪೋಷಕರು ದ್ವಿಚಕ್ರ ವಾಹನ ಖರೀದಿಸಿ ಕೊಟ್ಟು ಪೋಷಕರೇ ತಪ್ಪು ಮಾಡುತ್ತಿದ್ದಾರೆ. ಶಾಲಾ ಕಾಲೇಜು ಮಕ್ಕಳು ನಿಯಮ ಪಾಲಿಸದೇ ತನ್ನ ಎಂಜಾಯ್ ಮೆಂಟ್ ಗಾಗಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಆಗುವ ಅನಾಹುತಗಳನ್ನು ಎಷ್ಟೋ ಜಾಲತಾಣಗಳಲ್ಲಿ ನೋಡಿದರೂ ಪೋಷಕರಿಕೆ ಮತ್ತು ಈಗಿನ ಮಕ್ಕಳಿಗೆ, ಜನರಿಗೆ ಗೊತ್ತಾಗದೆ ಇರುವುದು ವಿಪರ್ಯಾಸವಾಗಿದೆ. ಬಾಗಲಕೋಟ ಜಿಲ್ಲೆಯ ಈ ಘಟನೆಯ ದೃಶ್ಯಗಳು ಸದ್ಯ ಜಾಲತಾಣದಲ್ಲಿ ಚರ್ಚೆಗೆ ವಿಷಯವಾಗಿದೆ.