Murder: ಶ್ರೀ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ಹತ್ಯೆ ಆರೋಪಿಯ ಬಂಧನ: ಹತ್ಯೆಗೆ ವಿಚಿತ್ರ ಕಾರಣ ನೀಡಿದ ಆರೋಪಿ! ಏನಿದೆ ಟ್ವಿಸ್ಟ್ ?
Murder: ಹುಬ್ಬಳ್ಳಿಯಲ್ಲಿರುವ ಈಶ್ವರನಗರದ ಶ್ರೀ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೆಂದ್ರಪ್ಪ ಮಹಾದೇವಪ್ಪ ವನಹಳ್ಳಿ (ಈತನ ವಯಸ್ಸು 63 ) ಎಂಬ ಆತ ಭೀಕರವಾಗಿ ಕೊಲೆ ಯಾಗಿದ್ದಾನೆ. ಕೊಲೆ ಮಾಡಿದ್ದ ಹಂತಕನನ್ನು ಪೊಲೀಸರು ಈ ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಮತ್ತು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ
ಹುಬ್ಬಳ್ಳಿ ಜಿಲ್ಲೆಯ ಕಮರಿಪೇಟೆ ಜಿ. ಅಡ್ಡಾ ನಿವಾಸಿ, ಆಟೋ ರಿಕ್ಷಾ ಚಾಲಕ ಸಂತೋಷ ಬೋಜಗಾರ ಎಂಬಾತ ಬಂಧಿತ ಆರೋಪಿ ಎಂದು ಈಗ ಪೊಲೀಸರು ತನಿಖೆಯ ನಂತರ ಗುರುತಿಸಿದ್ದಾರೆ. ದೇವೇದ್ರಪ್ಪ ಮಹದೇವಪ್ಪ ವನಹಳ್ಳಿ ಸ್ವಾಮೀಜಿಯ ಪೂಜಾ–ವಿಧಾನಗಳಿಂದಲೇ ಆರೋಪಿಯ ಕುಟುಂಬ ಆರ್ಥಿಕವಾಗಿ ಹಾಳಾಗಲು, ಮಾನಸಿಕವಾಗಿ ತೊಂದರೆ ಅನುಭವಿಸಲು ಪ್ರಮುಖ ಕಾರಣ ಎಂದು ಹೇಳಿ ಆರೋಪಿ ಹತ್ಯೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ತನ್ನ ಬೇಸರ ವ್ಯಕ್ತಪಡಿಸಿ ತನಿಖೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ.
ಶ್ರೀ ವೈಷ್ಣೋದೇವಿ ಮಂದಿರದ ಹಿಂಬದಿ ಗೇಟ್ ನಲ್ಲಿ ದೇವೇಂದ್ರಪ್ಪ ಮಹದೇವಪ್ಪ ವನಹಳ್ಳಿ ಸ್ವಾಮೀಜಿ ಯನ್ನು ಚಾಕು ಇರಿದು ಕೊಲೆ ಮಾಡಿ ಆರೋಪಿ ಸಂತೋಷ್ ಭೋಜಗಾರಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಈ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸೋಮವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಎರಡೂವರೆ ವರ್ಷಗಳಿಂದ ಹತ್ಯೆಗೆ ಸಂಚು ಹಾಕುತ್ತಿದ್ದಾನೆಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ. ಆ ನಿಟ್ಟಿನಲ್ಲಿ ಸಂತೋಷ್ ಭೋಜಗಾರ್ ದೇವೇಂದ್ರಪ್ಪ ಮಹಾದೇವಪ್ಪ ವನಹಳ್ಳಿ ಸ್ವಾಮೀಜಿ ಯನ್ನು ಹಿಂಬಾಲಿಸುತ್ತಿದ್ದ ಎಂದು ತನಿಖೆಯ ಮೂಲಕ ತಿಳಿದುಬಂದಿದೆ. ಈ ಹಿಂದೆ 2022ರ ಮಾರ್ಚ್‌ನಲ್ಲಿ ದೇವಪ್ಪಜ್ಜನ್ನನ್ನು ವಿದ್ಯಾನಗರದ ನಿವಾಸದಲ್ಲೂ ಹತ್ಯೆ ಮಾಡಲು ಆರೋಪಿ ಪ್ರಯತ್ನಿಸಿದ್ದ ಎನ್ನಲಾಗಿದೆ.