Ahmedabad: IAS ಗಂಡನನ್ನು ಬಿಟ್ಟು ರೌಡಿ ಜೊತೆ ಓಡಿದ ಪತ್ನಿ; 9 ತಿಂಗಳ ನಂತರ ವಾಪಸು ಬಂದು ಮಾಡಿದ್ದೇನು ಗೊತ್ತೇ?

Ahmedabad: ಐಎಎಸ್‌ ಗಂಡನನ್ನು ಬಿಟ್ಟು ತನ್ನೂರಿನ ಗ್ಯಾಂಗ್‌ಸ್ಟಾರ್‌ ಜೊತೆ ಓಡಿ ಹೋಗಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಸಾವಿಗೆ ಶರಣಾಗಿರುವ ಕುರಿತು ವರದಿಯಾಗಿದೆ. ಗುಜರಾತ್‌ನ ಐಎಎಸ್‌ ಅಧಿಕಾರಿಯೊಬ್ಬರ ಮನೆ ಇರುವ ಗಾಂಧಿನಗರದಲ್ಲಿ ಮನೆಯ ಮುಂದೆಯೇ ವಿಷ ಸೇವಿಸಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆ.

 

ಮಕ್ಕಳ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ , ಕ್ರಿಮಿನಲ್‌ ಜೊತೆ ಈಕೆ ಕೆಲ ತಿಂಗಳ ಹಿಂದೆ ಓಡಿ ಹೋಗಿದ್ದಳು. ಆದರೆ ಈಕೆ ಇದೀಗ ವಿಷ ಸೇವಿಸಿದ್ದು, ಮೃತ ಹೊಂದಿದ್ದಾಳೆ. ಮಹಿಳೆಯನ್ನು 45 ವರ್ಷ ಪ್ರಾಯದ ಸೂರ್ಯ ಜೆ ಎಂದು ಗುರುತಿಸಲಾಗಿದೆ.

ಗುಜರಾತ್‌ನ ಇಲೆಕ್ಟ್ರಸಿಟಿ ರೆಗ್ಯುಲೇಟರ್‌ ಕಮೀಷನ್‌ ಕಾರ್ಯದರ್ಶಿ ಆಗಿರುವ ಐಎಎಸ್‌ ಅಧಿಕಾರಿಯ ರಜನೀತ್‌ ಕುಮಾರ್‌ ಅವರ ಪತ್ನಿ ಸೂರ್ಯ ಜೆಯನ್ನು ಒಳಗೆ ಬಿಡದಂತೆ ಅಲ್ಲಿದ್ದ ಸಹಾಯಕರಿಗೆ ಹೇಳಿದ್ದಾರೆ. ಇದಾದ ನಂತರ ಆಕೆ ಮನೆ ಮುಂದೆಯೇ ವಿಷ ಸೇವನೆ ಮಾಡಿದ್ದಾಳೆ.

ವಿಷ ಸೇವಿಸಿದ ಈಕೆ ನಂತರ ಅವಳೇ 108 ಕ್ಕೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ತಮಿಳು ಭಾಷೆಯಲ್ಲಿ ಬರೆದಿದ್ದ ಡೆತ್‌ನೋಟ್‌ ದೊರಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಈಕೆ 9 ತಿಂಗಳ ಹಿಂದೆ ಐಎಎಸ್‌ ಅಧಿಕಾರಿ ರಜನೀತ್‌ ಕುಮಾರ್‌ ಅವರನ್ನು ಬಿಟ್ಟು ರೌಡಿ ಜೊತೆ ಓಡಿ ಹೋಗಿದ್ದಳು. ಈತ 14 ವರ್ಷದ ಬಾಲಕನ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇದರಲ್ಲಿ ಸೂರ್ಯ ಹೆಸರು ಕೂಡಾ ಕೇಳಿ ಬಂದಿದ್ದು, ಈ ಕಾರಣಕ್ಕೆ ತಮಿಳುನಾಡಿನಿಂದ ಗುಜರಾತ್‌ಗೆ ಬಂದ ಈಕೆ ಇಲ್ಲಿ ಗಂಡ ಮನೆ ಒಳಗೆ ಹೋಗಲು ನಿರಾಕರಿಸಿದಾಗ ಎಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವೆನು ಎಂಬ ಭಯದಲ್ಲಿ ಸಾವಿನ ದಾರಿ ಹಿಡಿದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಐಎಎಸ್‌ ಅಧಿಕಾರಿಗೆ ಇರುವ ಗೌರವ ಕಂಡರೆ ಅನೇಕರು ಮದುವೆಯಾಗಲು ಇಷ್ಟಪಡುವ ಈ ಕಾಲದಲ್ಲಿ ಈಕೆ ಮಾತ್ರ ತನ್ನ ಪಾಲಿಗೆ ದಕ್ಕಿದ ಐಎಎಸ್‌ ಗಂಡನನ್ನು ಬಿಟ್ಟು ರೌಡಿಯೊಂದಿಗೆ ಓಡಿ ಹೋಗಿ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡರೆ ನಿಜಕ್ಕೂ ಇದೊಂದು ವಿಪರ್ಯಾಸ.

Leave A Reply

Your email address will not be published.