Bollywood Actor: ಅತ್ಯಂತ ದುಬಾರಿ ವಿಚ್ಛೇದನ ಬಗ್ಗೆ ಕೇಳಿದ್ದೀರಾ? ಪತ್ನಿಗೆ ನೀಡಿದ ಜೀವನಾಂಶ ಮೊತ್ತ ನೀವು ಊಹಿಸಲು ಕೂಡಾ ಸಾಧ್ಯವಿಲ್ಲ!

Share the Article

Bolluwood Actor: 17 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಈ ದಂಪತಿ 2014ರಲ್ಲಿ ಡಿವೋರ್ಸ್ ಪಡೆದಿದ್ದಾರೆ. ಆದ್ರೆ ಬಾಲಿವುಡ್ ನಲ್ಲಿ ಅತೀ ದುಬಾರಿ ವಿಚ್ಛೇದನೆಂದರೆ ಈ ನಟನದ್ದು, ನೀವು ಈ ಮೊತ್ತ ಊಹಿಸಲು ಕೂಡಾ ಸಾಧ್ಯ ಇಲ್ಲ. ಕಾರಣ ಜೀವನಾಂಶವಾಗಿ 400 ಕೋಟಿ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಅದು ಬೇರೆ ಯಾರು ಅಲ್ಲ ಬಾಲಿವುಡ್ ನಟ (Bolluwood Actor) ಹೃತಿಕ್ ರೋಷನ್ ಹಾಗೂ ಸುಸ್ಸಾನೆ ಖಾನ್. ಒಂದು ಸಮಯ ಇವರಿಬ್ಬರ ವಿಚ್ಛೇದನ ಹೆಚ್ಚು ಸುದ್ದಿಯಲ್ಲಿತ್ತು.

ವಿಶೇಷ ಅಂದ್ರೆ ವಿಚ್ಛೇದನದ ಪಡೆದು 6 ವರ್ಷ ಕಳೆದನಂತರವೂ ಕೂಡ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿ ತಮ್ಮ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅದಲ್ಲದೆ ಮಕ್ಕಳ ಜೊತೆ ಸಮಯ ಸಿಕ್ಕಾಗ ಶಾಪಿಂಗ್ ಹೋಗುವುದು, ವಿದೇಶಗಳಿಗೆ ಹೋಗುವುದು ಮಾಡುತ್ತಿರುತ್ತಾರೆ.

ಮಾಹಿತಿ ಪ್ರಕಾರ 2000ರಲ್ಲಿ ಬೆಂಗಳೂರಿನಲ್ಲಿ ಹೃತಿಕ್, ಸುಸಾನೆ ಮದುವೆಯಾಗಿದ್ದರು. ಹೃತಿಕ್ ಅವರು ಹಿಂದೂ, ಸುಸಾನೆ ಮುಸ್ಲಿಂ ಆದರೂ ಕೂಡ ಹೃತಿಕ್ ಪತ್ನಿಯ ಧರ್ಮವನ್ನು ಗೌರವಿಸುತ್ತಿದ್ದರು. ಸದ್ಯ ಸುದ್ದಿಯಲ್ಲಿರುವ ವಿಚ್ಛೇದನದ ಪ್ರಕರಣಗಳಲ್ಲಿ ಅತಿ ಹೆಚ್ಚು ಬಾರಿ ವಿಚ್ಛೇದನ ಎಂದರೆ ಹೃತಿಕ್ ರೋಷನ್ ಹಾಗೂ ಸುಸ್ಸೆನ್ ಖಾನ್ ಮತ್ತು ಹೃತಿಕ್ ವಿಚ್ಛೇದನದ ವೇಳೆ ಇವರಿಗೆ 400 ಕೋಟಿ ರೂಪಾಯಿ ಕೊಟ್ಟಿದ್ದರೆಂದು ವೈರಲ್ ಆಗಿದೆ.

ಆದರೆ 400 ಕೋಟಿ ರೂಪಾಯಿ ಜೀವನ ಅಂಶ ಕೊಟ್ಟಿದ್ದರೂ ಎಂಬ ಸುದ್ದಿಯ ಕುರಿತು ಹೃತಿಕ್ ರೋಷನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಇದಕ್ಕೆ ಪ್ರತಿಕ್ರಿಸಿದ್ದಾರೆ. ಈ ಕುರಿತು ರೋಷನ್ ಹೇಳುವ ಹಾಗೆ, ಸುಸಾನೆ ಯಾವುದೇ ರೀತಿಯ ಮೊತ್ತವನ್ನು ಜೀವನಾಂಶವಾಗಿ ತೆಗೆದುಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವ ಮಾಹಿತಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.