Kerala: ಕೇರಳದಲ್ಲಿ 14 ರ ಬಾಲಕನಿಗೆ ನಿಫಾ ವೈರಸ್ ದೃಢ; ಕರ್ನಾಟಕದಲ್ಲಿ ಡೆಂಗ್ಯೂ ಜೊತೆ ನಿಫಾ ಅಪಾಯ?
Kerala: ಕೇರಳದ ಮಲಪ್ಪುರಂನಲ್ಲಿ ಬಾಲಕನೋರ್ವನಲ್ಲಿ ನಿಫಾ ವೈರಪ್ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. 14 ರ ಹರೆಯದ ಬಾಲಕನಲ್ಲಿ ಈ ಸೋಂಕು ದೃಢಪಟ್ಟಿದೆ.
ರಾಜ್ಯವು ಈ ಸಂಭವನೀಯ ವೈರಸ್ ಹರಡುವಿಕೆಯ ಬಗ್ಗೆ ಜಾಗರೂಕವಾಗಿರಬೇಕಾಗಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನಿಪಾ ವೈರಪ್ ತಡೆಯಲು ಬೇಕಾಗುವ ಕ್ರಮದ ಕುರಿತು ಚರ್ಚೆ ಮಾಡಲು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ನಿಫಾ ಸೋಂಕಿತ ಬಾಲಕನನ್ನು ಕೋಯಿಕ್ಕೋಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆನೇ ಬಾಲಕನ ಮನೆಯವರು ಮಾಸ್ಕ್ ಧರಿಸಲು ನಿರ್ದೇಶನ ನೀಡಲಾಗಿದೆ. ಬಾಲಕ ಭೇಟಿಗೆ ಯಾರಿಗೂ ಅವಕಾಶ ನೀಡಲಾಗಿಲ್ಲ, ಹಾಗೂ ಚಿಕಿತ್ಸೆ ಮುಂದುವರಿದಿದೆ.
ನಿಫಾ ವೈರಸ್ ಕುರಿತು ಇಲ್ಲಿದೆ ಮಾಹಿತಿ;
ಬಾವಲಿ ಮತ್ತು ಹಂದಿಗಳ ದೈಹಿಕ ದ್ರವದ ಮೂಲಕ ನಿಫಾ ವೈರಸ್ ಹರಡುತ್ತದೆ. ಈ ವೈರಸ್ ಮನುಷ್ಯರಿಂದ ಮನುಷ್ಯರಿಗೂ ಈ ವೈರಸ್ ಹರಿಡಿರುವ ಉದಾಹರಣೆ ಇದೆ. ನಿಫಾ ವೈರಸ್ ಸೋಂಕಿಗೆ ಯಾವುದೇ ಚಿಕಿತ್ಸೆ ಸದ್ಯಕ್ಕೆ ಇಲ್ಲ. ಹಾಗಾಗಿ ಇದರ ಮರಣ ಪ್ರಮಾಣ ಶೇ.70 ರಷ್ಟಿದೆ ಎನ್ನಲಾಗಿದೆ.
ನಿಫಾ ವೈರಸ್ ಮೊದಲಿಗೆ ಮನುಷ್ಯನಲ್ಲಿ ಬಂದಾಗ ಜ್ವರ ಕಾಣಿಸಿಕೊಳ್ಳಲಿದ್ದು, ನಂತರ ಉಸಿರಾಟದ ತೊಂದರೆ, ತಲೆನೋವು, ವಾಂತಿ ಉಂಟಾಗಿ ನಂತರ ಮೆದುಳಿನ ಉರಿಯೂತ, ದೇಹದಲ್ಲಿ ಸೆಳೆತ ಉಂಟಾಗಬಹುದು. ಈ ವೈರಸ್ ತೀವ್ರತೆ ಎಷ್ಟಿರುತ್ತೆಂದರೆ ವ್ಯಕ್ತಿ ಕೋಮಾ ಸ್ಥಿತಿಗೆ ಕೂಡಾ ಜಾರಿ ಮೃತ ಹೊಂದಬಹುದು.