Online Liquor: ಆನ್‌ಲೈನ್‌ನಲ್ಲಿ ಮದ್ಯ ಮಾರಾಟದ ಕುರಿತು ಅಬಕಾರಿ ಸಚಿವರಿಂದ ಸ್ಪಷ್ಟನೆ

Share the Article

ಬೀದರ್‌ನಲ್ಲಿ ಅವರು ಮಾತನಾಡುತ್ತಾ, ” ಆನ್‌ಲೈನ್‌ ಮಾರಾಟ ಯಾವತ್ತೂ ಮಾಡುವುದಿಲ್ಲ. ಅದರ ಸಾಧ್ಯತೆ ಇಲ್ಲ. ಮುಂದೆ ಕೂಡಾ ಇಲ್ಲ. ನಮ್ಮ ಯೋಚನೆಯಲ್ಲಿ ಆನ್‌ಲೈನ್‌ನಲ್ಲಿ ಮಾರಾಟವಿಲ್ಲ. ನೋ ಸ್ವಿಗ್ಗಿ, ನೋ ಜೊಮ್ಯಾಟೋ ಯಾವುದೂ ಇಲ್ಲ” ಎಂದು ಹೇಳಿದರು.

ಶಾಲೆಯ ಸುತ್ತ, ಡಾಬಾ, ಅಂಗಡಿ ಸೇರಿದಂತೆ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಡಿಸಿ, ಎಸ್ಪಿ, ಅವರಿಗೆ ಸೂಚನೆ ನೀಡಿದ್ದೇನೆ. ಮದ್ಯ ಸೇವನೆ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಆದರೆ ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾಗಿದೆ, ಇದಕ್ಕಾಗಿ ಸಿಎಲ್-‌7 ಹೆಚ್ಚಿಗೆ  ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಹೊರಗಡೆ ಕುಡಿಯುವುದನ್ನು ನಿಯಂತ್ರಿಸುವುದಕ್ಕೆ ಪೊಲೀಸರಿಗೆ ಹೇಳಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Leave A Reply

Your email address will not be published.