Animals: ಭಾರತದಲ್ಲಿ ಈ 7 ಪ್ರಾಣಿಗಳು ಇನ್ನಿಲ್ಲ; ಮಿಸ್ ಮಾಡ್ದೆ ಇವುಗಳನ್ನು ಕಣ್ತುಂಬಿಕೊಳ್ಳಿ!

Animals: ಹಿಂದಿನ ಕಾಲದಲ್ಲಿ ಆಹಾರಕ್ಕಾಗಿ ಅನಿವಾರ್ಯವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದುದ್ದು ಬಿಟ್ಟರೆ ಅವುಗಳಿಗೆ ಹೆಚ್ಚಿನ ತೊಂದರೆ ನೀಡಲಿಲ್ಲ. ಆದ್ರೆ ಯಾವಾಗ ಮನುಷ್ಯ ಸ್ವಾರ್ಥ ಬದುಕಿನ ಚಿಂತನೆ ನಡೆಸುತ್ತ ಹೋದನೋ ಅಂದಿನಿಂದ ಪ್ರಾಣಿಗಳ ಅಳಿವು ಆರಂಭವಾಯಿತು. ಬೇಟೆ ಮನುಷ್ಯರ ಅಗತ್ಯಕ್ಕಿಂತ ಹೆಚ್ಚಾಗಿ ಆಸಕ್ತಿಯಾಯಿತು. ಕಾಡಿನಲ್ಲಿದ್ದ ಮರಗಳು ನಾಶವಾಗತೊಡಗುತ್ತ ಹೋದಂತೆ ಪ್ರಾಣಿ (Animals) , ಪಕ್ಷಿಗಳ ಸಂತತಿ ಇಳಿಮುಖವಾಗತೊಡಗಿತು. ಒಂದು ಕಾಲದಲ್ಲಿ ಹೇರಳವಾಗಿದ್ದ ಪ್ರಾಣಿಗಳು ಇಂದು ಕೇವಲ ಬೆರಳೆಣಿಕೆಯಲ್ಲಿವೆ. ಇದು ನಿಜಕ್ಕೂ ಚಿಂತಾಜನಕ ವಿಷಯ. ಆದ್ದರಿಂದ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಈ ಏಳು ಪ್ರಾಣಿಗಳು (Seven animals) ಪೂರ್ತಿಯಾಗಿ ಕಣ್ಮರೆಯಾಗುವ ಮೊದಲು ನೀವು ಅವುಗಳನ್ನು ನೋಡಿ.

ಗ್ರೇಟ್ ಇಂಡಿಯನ್ ಬಸ್ಟರ್ಡ್:

ಇದು 1.2 ಮೀಟರ್ ಎತ್ತರ ಹಾರುವ ಮತ್ತು 15 ಕೆಜಿ ತೂಕವಿರುವ ದೊಡ್ಡ ಪಕ್ಷಿಯಾಗಿದೆ. ಐಯುಸಿಎನ್ ರೆಡ್ ಲಿಸ್ಟ್‌ ಇದು ಅಳಿವಿನಂಚಿನಲ್ಲಿದೆ ಅಂತ ಪಟ್ಟಿ ಮಾಡಿದ್ದಾರೆ, 250 ಕ್ಕಿಂತ ಕಡಿಮೆ ಪಕ್ಷಿಗಳು ಉಳಿದಿವೆಯಂತೆ.ಗ್ರೇಟ್ ಇಂಡಿಯನ್  ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದ ಹುಲ್ಲುಗಾವಲುಗಳು ಮತ್ತು ಕುರುಚಲು ಕಾಡುಗಳಲ್ಲಿ ಕಂಡು ಬರುವ ಈ ಪಕ್ಷಿ ಕೀಟಗಳು, ಹಲ್ಲಿಗಳು ಮತ್ತು ಸಣ್ಣ ಸಸ್ತನಿಗಳನ್ನು ತಿಂದು ಬದುಕುತ್ತವೆ. ಬೇಟೆಯಾಡುವುದು ಮತ್ತು ವಿದ್ಯುತ್ ತಂತಿಗಳೊಂದಿಗೆ ಘರ್ಷಣೆಗಳ ಕಾರಣಕ್ಕೆ ಇದರ ಅಳಿವು ಆಗುತ್ತಿದೆ.

ಸಿಂಹ ಬಾಲದ ಸಿಂಗಳಿಕ:

ಇದು ವಿಶ್ವದ ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿದೆ, ಅಂದಾಜು 2,500 ಸಿಂಹ ಬಾಲದ ಸಿಂಗಳಿಕ ಮಾತ್ರವೇ ಉಳಿದಿವೆ. ಈ ಮಧ್ಯಮ ಗಾತ್ರದ ಕೋತಿಗಳು ಉದ್ದವಾದ ಕಪ್ಪು ಕೂದಲು ಮತ್ತು ಟಫ್ಟೆಡ್ ಬಾಲದಿಂದ ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊಂದಿವೆ. ಸರ್ವಭಕ್ಷಕ ಪ್ರಾಣಿ ಹಣ್ಣುಗಳು, ಕೀಟಗಳು ಮತ್ತು ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ. ಸಿಂಹ ಬಾಲದ ಸಿಂಗಳಿಕ ಅರಣ್ಯ ನಾಶ ಮತ್ತು ಕೃಷಿ ವಿಸ್ತರಣೆಯಿಂದ ಇದರ ಅಳಿವಿಗೆ ಕಾರಣ ಆಗಿದೆ.

ಕೆಂಪು ಪಾಂಡಾ:

ಕೆಂಪು ಪಾಂಡಾ ಪೂರ್ವ ಹಿಮಾಲಯ ಮತ್ತು ನೈಋತ್ಯ ಚೀನಾದಲ್ಲಿ ಕಂಡು ಬರುವ ಸಸ್ತನಿಯಾಗಿದೆ. ಭಾರತದ ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಇದು ಕಂಡು ಬರುತ್ತದೆ. ಕೆಂಪು ಪಾಂಡಾಗಳು 2,200 ರಿಂದ 4,800 ಮೀಟರ್ ಎತ್ತರದ ಸಮಶೀತೋಷ್ಣ ಕಾಡುಗಳಲ್ಲಿ ವಾಸಿಸುತ್ತವೆ ಮತ್ತು ಶೀತದಿಂದ ರಕ್ಷಿಸಿಕೊಳ್ಳಲು ದಪ್ಪ ತುಪ್ಪಳವನ್ನು ಹೊಂದಿರುತ್ತದೆ. ಕೆಂಪು ಪಾಂಡಾ ಬಿದಿರು, ಹಣ್ಣುಗಳು ಮತ್ತು ಕೀಟಗಳನ್ನು ತಿಂದು ಬದುಕುತ್ತವೆ. ಬೇಟೆಯಾಡುವಿಕೆಯಿಂದ ಇದು ಅಳಿವಿನ ಅಂಚಿನಲ್ಲಿದೆ.

ನೀಲಗಿರಿ ತಹರ್:

ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳಲ್ಲಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ನೀಲಗಿರಿ ತಹರ್ ವಾಸವಾಗಿರುತ್ತದೆ. ಈ ಪ್ರಾಣಿಗಳು ಬೆನ್ನಿನ ಉದ್ದಕ್ಕೂ ವಿಶಿಷ್ಟವಾದ ಕಪ್ಪು ಪಟ್ಟಿಯನ್ನು ಮತ್ತು ಉದ್ದವಾದ, ಬಾಗಿದ ಕೊಂಬುಗಳನ್ನು ಹೊಂದಿರುತ್ತದೆ. ನೀಲಗಿರಿ ಕಲ್ಲಿನ ಭೂಪ್ರದೇಶಕ್ಕೆ ಹೊಂದಿಕೊಳ್ಳುವ ಈ ಪ್ರಾಣಿ  ಬೇಟೆಯಾಡುವಿಕೆಯಿಂದ ಅಳಿವಿನಂಚಿಗೆ ತಲುಪಿದೆ.

ಇಂಡಿಯನ್ ರೈನೋಸೇರಸ್:

ಒಂದು ಕೊಂಬಿನ ಘೇಂಡಾಮೃಗ ಇದು ತೀವ್ರವಾಗಿ ಅಳಿವಿನಂಚಿನಲ್ಲಿದೆ ಮತ್ತು ಪ್ರಾಥಮಿಕವಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಕಂಡು ಬರುತ್ತದೆ. ಇದರ ಏಕೈಕ ಕೊಂಬು ಮತ್ತು ಶಸ್ತ್ರಸಜ್ಜಿತ ಚರ್ಮಕ್ಕೆ ಹೆಸರುವಾಸಿಯಾಗಿದೆ, ಇದು ಆವಾಸಸ್ಥಾನದ ನಷ್ಟ, ಬೇಟೆಯಾಡುವುದು ಮತ್ತು ಮಾನವ ಸಂಘರ್ಷದಿಂದ ಬೆದರಿಕೆಗಳನ್ನು ಎದುರಿಸುತ್ತಿದೆ. ಇಂಡಿಯನ್ ರೈನೋಸೇರಸ್

ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿದೆ, ಸಂರಕ್ಷಣಾ ಪ್ರಯತ್ನಗಳು ಸಂರಕ್ಷಿತ ಪ್ರದೇಶಗಳನ್ನು ವಿಸ್ತರಿಸಲು, ಸಹಬಾಳ್ವೆಯನ್ನು ಉತ್ತೇಜಿಸಲು ಮತ್ತು ಬೇಟೆಯಾಡುವಿಕೆಯನ್ನು ಎದುರಿಸಲು ಕೇಂದ್ರೀಕರಿಸುತ್ತವೆ.

ಸ್ನೋ ಲೆಪರ್ಡ್ (ಹಿಮ ಚಿರತೆ):

ಹಿಮ ಚಿರತೆ ಭಾರತ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತದೆ. ಅದು ಅದರ ಕಠಿಣ, ಶೀತ ವಾತಾವರಣದಲ್ಲಿ ಬದುಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಬೇಟೆಯಾಡುವಿಕೆ ಮತ್ತು ಆವಾಸಸ್ಥಾನದ ನಷ್ಟದಿಂದ ಇದರ ಅಳಿವು ಆಗುತ್ತಿದೆ.

ಬ್ಲ್ಯಾಕ್‌‌ಬಕ್ (ಕೃಷ್ಣಮೃಗ):

ಬ್ಲ್ಯಾಕ್‌ಬಕ್ ಬೇಟೆಯಾಡುವಿಕೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಅದರ ಸಂಖ್ಯೆಯು 80,000 ದಿಂದ ಎರಡು ದಶಕಗಳಲ್ಲಿಯೇ 8 ಸಾವಿರಕ್ಕೆ ಕುಸಿದಿದೆ. ಬೀದಿ ನಾಯಿಗಳು, ಕೀಟನಾಶಕಗಳು ಮತ್ತು ವಾಹನ ದಟ್ಟಣೆಯಿಂದ ಇದು ಅಳಿವಿನ ಮಟ್ಟಕ್ಕೆ ತಲುಪಿದೆ. ಮತ್ತು ಹುಲ್ಲುಗಾವಲಿನಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ಕೃಷ್ಣಮೃಗಗಳು ಮನುಷ್ಯರ ದುರಾಸೆಗೆ ಬಲಿಯಾಗುತ್ತಿದೆ.

Karnataka Assembly: ನಯನಾ ಮೋಟಮ್ಮಗೆ ಟಾಂಗ್- ‘ಏನಿಲ್ಲಾ ಏನಿಲ್ಲಾ ಮೂಡಿಗೆರೆಗೇ ಏನಿಲ್ಲಾ… ಏನೇನಿಲ್ಲಾ’ ಎಂದು ಸದನಲ್ಲಿ ಹಾಡು ಹೇಳಿದ ಬಿಜೆಪಿ ಶಾಸಕರು !!

Leave A Reply

Your email address will not be published.