Reservation issue for Kannadigas: ಏನು ಈ ಉದ್ಯಮಿಗಳ ದರ್ಪ? ಮೀಸಲಾತಿ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದ ಕಂಪೆನಿ ಒಡೆಯರು
Reservation issue for Kannadigas: ರಾಜ್ಯದಲ್ಲಿ ನೆನ್ನೆಯಿಂದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕೊಡಮಾಡುವ ಮೀಸಲಾತಿ(Reservation issue for Kannadigas) ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡದೆ ಕಂಪೆನಿ ಒಡೆಯರ ಮಾತಿಗೇ ಮಣೆ ಹಾಕುತ್ತಿದೆ. ನಮ್ಮ ನೆಲದಲ್ಲಿ ನೀವಿರೋದು, ನಮ್ಮ ಸಂಪನ್ಮೂಲ, ನಮ್ಮ ನೀರು ಉಪಯೋಗಿಸೋದು ಹೀಗಾಗಿ ನಮ್ಮ ಕನ್ನಡಿಗರಿಗೇ ಮೊದಲ ಪ್ರಾಶಸ್ತ್ಯ ನೀಡಿ ಎಂದು ತಾಕೀತು ಮಾಡುವ ಬದಲು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತ ಕನ್ನಡಿಗರ ಸ್ವಾಭಿಮಾನಕ್ಕೆ, ಆಸೆ ಆಕಾಕಂಕ್ಷೆಗಳಿಗೆ ಚ್ಯುತಿ ತರುವ ಕೆಲಸ ಮಾಡುತ್ತಿದೆ ಈ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್(Congress)ಅಲ್ಲ ಯಾವ ಸರ್ಕಾರ ಬಂದರೂ ಇದೇ ಹಣೆಬರಹ. ಯಾಕೆಂದರೆ ಒಳ ಒಪ್ಪಂದ, ಚುನಾವಣೆ ಸಂದರ್ಭದಲ್ಲಿ ಸಹಕಾರ ಅನ್ನೋ ಸಂಪ್ರದಾಯ ಇರುತ್ತದೆಯಲ್ಲಾ.
ಒಂದ ರೀತಿಯಲ್ಲಿ ಸಿದ್ದರಾಮಯ್ಯ(CM Siddaramaiah) ಸರ್ಕಾರದ ಕೆಲಸ ಶ್ಲಾಘನೀಯವಾಗಿತ್ತು. ಯಾಕೆಂದರೆ ಮೊದಲು ಅವರು ಸಂಪುಟ ಸಭೆಯಲ್ಲಿ(Cabinet Meeting)ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳಲ್ಲೂ ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವುದು, ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ಸೇರಿದಂತೆ ಏಳು ವಿಧೇಯಕಗಳನ್ನು ಮಂಡಿಸಲು ನಿರ್ಧರಿಸಿತ್ತು. ಇದೇ ನಿಲುವು ಈಗಲೂ ಇರಬೇಕಿತ್ತು. ಹಣ ಇರುವವರ ಕೂಗಿಗೆ, ಬೆದರಿಕೆಗೆ ಮಣಿಯಬಾರದಿತ್ತು. ಇದು ಜಾರಿಯಾಗಿದ್ದರೆ ಕನ್ನಡಿಗರು ತಮ್ಮ ಹೃದಯದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಜಾಗ ನೀಡುತ್ತಿದ್ದರು. ಈ ವಿಧೇಯಕಗಳ ಜಾರಿ ಮುಂದೆ ಗ್ಯಾರಂಟಿಗಳ ಯಾವ ಲೆಕ್ಕಕ್ಕೂ ಬರುತ್ತಿರಲಿಲ್ಲ. ಆದರೆ ಸರ್ಕಾರ ತಾನು ಕೈಲಾಗದವನು ಎಂಬುದನ್ನು ತೋರಿಸಿತು. ತನ್ನ ನೆಲದಲ್ಲಿ ಬೇರೆಯವರದ್ದೇ ಪ್ರಾಬಲ್ಯ, ತಾನು ಕೈಲಾಡುವ ಗೊಂಬೆ ಎಂಬುದನ್ನು ತೋರಿಸಿತು.
ಇನ್ನು ಈ ಪ್ರತಿಪಕ್ಷಗಳದ್ದು(Opposition Partys)ರಾಜಕೀಯ ಬೇಳೆ ಬೇಯಿಸಲು ಹೋರಾಟ, ಪ್ರತಿಭಟನೆ. ಹಗರಣಗಳ ವಿಚಾರವಾಗಿ ರಾಜ್ಯಾದ್ಯಂತ ರಂಪ ರಾಡಿ ಮಾಡಿದ ಈ ಪ್ರತಿಪಕ್ಷಗಳು ಇಂದು ಇದೇ ವಿಚಾರ ಹಿಡಿದು ಬೀದಿಗಿಳಿದು ನಾಟಕ ಮಾಡಬಹುದಲ್ಲೇ? ಆಗಲ್ಲ, ಯಾಕೆಂದರೆ ಅವುಗಳ ಅಸ್ತಿತ್ವವೂ ಈ ಕಂಪೆನಿ, ಕೈಗಾರಿಕೆಗಳ ಮೇಲೆಯೇ ನಿಂತಿದೆ. ಇದು ನಮ್ಮ ಜನರಿಗೆ ಅರ್ಥ ಆಗಲ್ಲ. ಕರೆದಾಗ ಹೋಗೋದು, ಬೀದಿಗಿಳಿದು ಅರಚುವುದು, ದುಡ್ಡು ಕೊಟ್ಟವನಿಗೆ ಜೈ ಅನ್ನುವುದು ಅಷ್ಟೇ. ತಮ್ಮ ಭವಿಷ್ಯ, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಕನ್ನಡಿಗರಿಗೆ ಮೀಸಲಾತಿ ವಿಚಾರ ನಮ್ಮ ಮಕ್ಕಳ ಭವಿಷ್ಯ ರೂಪಿಸುತ್ತೆ ಅನ್ನೋದು ಅವರಿಗೆ ತಿಳಿದೇ ಇಲ್ಲ. ತಿಳಿದವರೂ ಬಾಯಿ ಬಿಚ್ಚುವುದಿಲ್ಲ. ಯಾಕೆಂದರೆ ನಾನೊಬ್ಬ ಬೊಬ್ಬೆ ಹೊಡೆದರೆ ಏನೂ ಪ್ರಯೋಜನ ಇಲ್ಲ ಎಂದು ಅವರು ಮೊದಲೇ ಗೊತ್ತು.
ಈ ಸರ್ಕಾರ, ವಿಪಕ್ಷಗಳ ಕಥೆ ಬಿಡಿ. ಇವುಗಳ ಬುದ್ಧಿಯೇ ಹೀಗೆ. ನುಡಿದಂತೆ ನಡೆಯಲ್ಲ, ನಡೆದಂತೆ ನುಡಿಯಲ್ಲ. ಹೇಳಿದ್ದನ್ನಂತೂ ಒಂದೂ ಮಾಡಲ್ಲ. ಸದನದಲ್ಲಿ ಬರೀ ಕಿತ್ತಾಟ. ಆದರೆ ನಮ್ಮ ನೆಲದಲ್ಲೆ ಇದ್ದುಕೊಂಡು, ನಮ್ಮ ಎಲ್ಲಾ ಸಂಪನ್ಮೂಲ, ನೆಲ-ಜಲ ಎಲ್ಲವನ್ನೂ ಬಳಸಿಕೊಂಡು ಕನ್ನಡಿಗರ ಸಾಮರ್ಥ್ಯ, ಪ್ರತಿಭೆ ಬಗ್ಗೆ ಮಾತನಾಡುವ ಈ ಕೈಗಾರಿಕೋದ್ಯಮಿಗಳ ದರ್ಪಕ್ಕೆ ಏನೆನ್ನಬೇಕು. ಇಂದು ಇವರು ಕನ್ನಡಿಗರಿಗೆ ನೀಡೋ ಮೀಸಲಾತಿ ಬಗ್ಗೆ, ಕನ್ನಡಿಗರ ಪ್ರತಿಭೆ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ನೀವೆ ನೋಡಿ.
Hibiscus Oil: ಮನೆಯಲ್ಲೇ ದಾಸವಾಳದ ಎಣ್ಣೆ ತಯಾರಿಸಿ: ಕೂದಲನ್ನು ಪುನರ್ಯೌವನಗೊಳಿಸಿ!
ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ:
ಇದು ತಾರತಮ್ಯದಿಂದ ಕೂಡಿದ ಮತ್ತು ಪ್ರತಿಗಾಮಿ ಸ್ವರೂಪದ ಮಸೂದೆ. ಇದರ ಬದಲಿಗೆ ಕನ್ನಡಿಗರ ಉದ್ಯೋಗಾರ್ಹತೆ ಹೆಚ್ಚಿಸಲು ಅವರಿಗೆ ಅಗತ್ಯ ವೃತ್ತಿಪರ ತರಬೇತಿ ನೀಡಿ ಮೋಹನದಾಸ್ ಪೈ
ಆರ್.ಕೆ.ಮಿಶ್ರಾ ಅಸೋಚಾಮ್ ಸಹ-ಅಧ್ಯಕ್ಷ:
ಸ್ಥಳೀಯರಿಗೆ ಮೀಸಲಾತಿಯ ಮೇಲ್ವಿಚಾರಣೆಗೆ ಕಂಪನಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಿಬಿಡಿ. ದೂರದೃಷ್ಟಿಯಿಲ್ಲದ ಈ ನಡೆ, ಉದ್ಯಮಗಳಿಗೆ ಮಾರಕ
ಕಿರಣ್ ಮಜುಂದಾರ್ ಶಾ ಬಯೋಕಾನ್ ಮುಖ್ಯಸ್ಥೆ:
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು, ಐಟಿ ಸೇವೆಯಲ್ಲಿ ನಮ್ಮ ಅಗ್ರಸ್ಥಾನಕ್ಕೆ ಧಕ್ಕೆ ಮಾಡಿಕೊಳ್ಳಲಾಗದು. ಪ್ರತಿಭಾನ್ವಿತರ ಆಯ್ಕೆಗೆ ಅವಕಾಶವಿರಬೇಕು
ರಮೇಶ್ ಚಂದ್ರ ಲಹೋಟಿ ಅಧ್ಯಕ್ಷರು, ಎಫ್‌ಕೆಸಿಸಿಐ:
ಈ ನಡೆಯನ್ನು ಸ್ವಾಗತಿಸುತ್ತೇವೆ. ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಪ್ರತಿಭಾನ್ವಿತರ ಅಗತ್ಯವಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ 25ಕ್ಕೆ ಇಳಿಸಬೇಕು
ಒಬ್ಬೊಬ್ಬರ ಒಂದೊಂದು ಸ್ಟೇಟ್ಮೆಂಟ್ ಕೂಡ ನೇರವಾಗಿ ಕನ್ನಡಿಗರ ಹೃದಯಕ್ಕೆ ಇರಿದಂತಿದೆ. ಇದು ನಮಗಾರಿಗೂ ಏನೂ ಅನಿಸವುದೇ ಇಲ್ಲ ಅಲ್ಲವೇ? ಹೆಚ್ಚು ತರಬೇತಿ ನೀಡಿ ಅಂದರೆ ಏನು? ಕನ್ನಡಿಗರು ಪ್ರತಿಭೆ ಇಲ್ದವರೆ? ಹಾಗಂತ ಹೊರಗಿನವರನ್ನು ನಾವು ದೂರ ಇಡಿ ಎನ್ನುತ್ತಿಲ್ಲ, ಅವರೂ ನಮ್ಮವರೇ, ಆದರೆ ಮೊದಲ ಪ್ರಾಮುಖ್ಯತೆ ನಮಗೇ ಇರಲಿ. ಕಾವೇರಿ ವಿಚಾರ ಬಂದಾಗ ಮಾತ್ರ ರೊಚ್ಚಿಗೇಳುವ ಕನ್ನಡಪರ ಸಂಗಟನೆಗಳ ಇಂದು ಎಲ್ಲಿವೆ. ಚಳಿ ಎಂದು ಹೊದ್ದು ಮಲಗಿವೆಯೇ? ಕಾವೇರಿ(Kaveri)ಕೂಡ ಕನ್ನಡಿಗರ ವಿಚಾರವೇ. ಅದರ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಬೇಕು. ಆದರದು ಎಲ್ಲೋ ಒಂದು ಭಾಗಕ್ಕೆ ಉಪಕಾರ ಗುವಂತದ್ದು, ಆದರೆ ಈ ಮೀಸಲಾತಿ ವಿಚಾರ ಇಡೀ ರಾಜ್ಯಕ್ಕೆ, ನಾಡಿನ ಜನತೆಗೆ ಭವಿಷ್ಯ ರೂಪಿಸುವ ವಿಚಾರ. ಈಗ ಬೀದಿಗಿಳಿಯಿರಿ, ಹೋರಾಡಿ. ನಿಮ್ಮ ನಿಮ್ಮ ಮಕ್ಕಳ ಹಾಗೂ ನಾಡಿನ ಜನರ ಭವಿಷ್ಯಕ್ಕೆ ಒಳಿತಾಗುವುದನ್ನು ಮಾಡಿ.