Kukke Subramanya: ಕುಕ್ಕೆ ಭಕ್ತರಿಗೆ ಮಹತ್ವದ ಮಾಹಿತಿ, ದೇಗುಲದಿಂದ ಮಹತ್ವದ ಸೂಚನೆ

Share the Article

Kukke Subramanya; ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಕಾರಣ, ಇತ್ತ ಸುಬ್ರಹ್ಮಣ್ಯ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಈ ಕಾರಣದಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಭಕ್ತರಿಗೆ ಪ್ರಮುಖ ಮಾಹಿತಿಯನ್ನು ನೀಡಿದೆ.

ಕುಕ್ಕೆ ಸುಬ್ರಹ್ಮಣ್ಯ ಸ್ನಾಘಟ್ಟ ಮುಳುಗಡೆಯಾದ ಕಾರಣ ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ತೊಂದರೆ ಆಗಿದ್ದು, ಈ ಕಾರಣದಿಂದ ಕುಮಾರಧಾರಾ ನದಿ ಪಾತ್ರಕ್ಕೆ ಭಕ್ತಾಧಿಗಳು ತೆರಳದಂತೆ ಕ್ಷೇತ್ರದ ವತಿಯಿಂದ ಸೂಚನೆ ನೀಡಲಾಗಿದೆ.

ಕುಮಾರಧಾರಾ ನದಿ ನೀರನ್ನು ಡ್ರಮ್‌ ಮೂಲಕ ಸಂಗ್ರಹಣೆ ಮಾಡಿ, ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ಮಾಡಲಾಗಿದೆ. ಸ್ನಾನಘಟ್ಟದ ಬಳಿ ಹೋಮ್‌ ಗಾರ್ಡ್‌, ದೇವಸ್ಥಾನದ ಸೆಕ್ಯೂರಿಟಿಗಳ ನೇಮಕ ಮಾಡಲಾಗಿದ್ದು, ಭಕ್ತರಿಗೆ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Leave A Reply