Mudhola : ಯಪ್ಪಾ ಏನಿದು ಭೀಕರ ಕೃತ್ಯ.. !! ನೋವು ವಾಸಿ ಮಾಡೋದಾಗಿ ಹೇಳಿ ಕೊಡಲಿಯಲ್ಲಿ ಹೊಡೆಯುತ್ತಾನೆ ಈ ಡೋಂಗಿ ಬಾಬಾ !!
Mudhola: ಕಾಲ ಬದಲಾದರೂ ಕೂಡ ಇಂದು ಜನ ಮರುಳೋ ಜಾತ್ರೆ ಮರುಳೋ ಎಂದು ಗೊತ್ತಾಗುವುದಿಲ್ಲ. ಯಾಕೆಂದರೆ ಇಂದಿಗೂ ಜನರ ಅಸಹಾಯಕತೆಯನ್ನ ಲಾಭ ಮಾಡಿಕೊಂಡು ಪೂಜೆ-ಪುನಸ್ಕಾರ ಅಂತೆಲ್ಲಾ ಹೇಳಿ, ಪೂಜೆಗಳನ್ನ (Worship) ಮಾಡಿಸಿದರೆ ಒಳ್ಳೆಯದಾಗುತ್ತೇ, ನಿಮ್ಮ ಕಷ್ಟಗಳು ಪರಿಹಾರ ಸಿಗಲಿವೆ ಎಂದೆಲ್ಲಾ ಹೇಳುತ್ತಾ ಮೋಸ ಮಾಡುವ, ದುಡ್ಡು ಪೀಕುವ ಬಾಬಾಗಳು, ಪವಾಡ ಪುರುಷರು, ದೇವ ಮಾನವರ ಬಗ್ಗೆ ನಾವು ಕೇಳಿರುತ್ತೇವೆ. ಅಂತೆಯೇ ಇಲ್ಲೊಬ್ಬ ಬಾಬ ದುಡ್ಡು ಪೀಕುವುದರೊಂದಿಗೆ ಬಂದ ಭಕ್ತರಿಗೆ ಏಟನ್ನೂ ಕೊಡುತ್ತಾನೆ. ಅದು ಕೂಡ ಕೊಡಲಿ ಏಟು!!
ಹೌದು, ಬಾಗಲಕೋಟೆಯಲ್ಲಿ ಮೂಡನಂಬಿಕೆಯಿಂದ (Superstition) ನಡೆದಿರುವ ಘಟನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ. ಪೂಜಾರಿಯೊಬ್ಬ (Priest) ದೇಹದ ಭಾಗಗಗಳು ನೋವು ಎಂದು ಬಂದವರಿಗೆ ಕೊಡಲಿಯಿಂದ ಏಟು ಕೊಡುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದವರಿಗೆ ಮೈ ನಡುಗೋದಂತು ಗ್ಯಾರಂಟಿ.
ಇದೀಗ ಈ ಡೋಂಗಿ ಬಾಬನಾದ ಮುಧೋಳ(Mudhola) ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿ ಜಕ್ಕಪ್ಪ ಗಡ್ಡದ್ ನ ಭಯಾನಕ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೋಲೀಸರು ಅವನನ್ನು ಬಂಧಿಸಿ ಅಂದರ್ ಮಾಡಿದ್ದಾರೆ.
ಅಂದಹಾಗೆ ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಅರ್ಚಕ ಜಕ್ಕಪ್ಪ ಗಡ್ಡದ್ ಅವರ ತೋಟದ ಮನೆಗೆ ಪ್ರತಿ ಭಾನುವಾರ ಹೊಟ್ಟೆ, ಬೆನ್ನು, ಕಾಲು ನೋವು ಎಂದು ಭಕ್ತರು ಬರುತ್ತಾರೆ. ಹೊಟ್ಟೆ ನೋವು ಇದ್ದಂತಹವನ್ನು ನೆಲದ ಮೇಲೆ ಮಲಗಿಸಿ ಹೊಟ್ಟೆಯ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾರೆ. ಬೆನ್ನು ನೋವು ಇದ್ದವರಿಗೆ ಬೆನ್ನಿನ ಮೇಲೆ ಭಂಡಾರ ಎರಚಿ ಕೊಡಲಿಯಿಂದ ಹೊಡೆಯುತ್ತಾನೆ. ಅವರು ಕೊಡಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಕುರಿತು ಪೋಲೀಸ್ ಅಧಿಕಾರಿ ಪ್ರತಿಕ್ರಿಯಿಸಿ ಅರ್ಚಕ ತನ್ನ ಸ್ವಂತ ಲಾಭಕ್ಕಾಗಿ ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಈ ರೀತಿ 12 ವರ್ಷಗಳಿಂದ ಮಾಡುತ್ತಿರುವುದಾಗಿ ಪೂಜಾರಿ ಹೇಳಿದ್ದಾರೆ. ಕೊಡಲಿಯಿಂದ ಗಾಯಗೊಂಡ ಯಾರಾದರೂ ಪ್ರಕರಣ ನೀಡಿದರೆ ದಾಖಲಿಸಿಕೊಳ್ಳುತ್ತೇವೆ. ಜನರು ಇಂತಹ ಮೂಢನಂಬಿಕೆಗೆ ಮಾರು ಹೋಗಬಾರದು ಎಂದು ಎಸ್ಪಿ ಮನವಿ ಮಾಡಿದರು.