Traffic Rules: ವಾಹನ ಸವಾರರಿಗೆ ಬ್ಯಾಡ್ ನ್ಯೂಸ್! ಹಳೆ ವಾಹನಗಳಿಗೆ RTO ನಿಂದ ಹೊಸ ರೂಲ್ಸ್ ಜಾರಿ!

Traffic Rules: ಸಂಚಾರಿ ನಿಯಮ (Traffic Rules) ಉಲ್ಲಂಘಿಸಿದರೆ ಕೇವಲ ದಂಡ ಹಾಕೋದು ಮಾತ್ರ ಅಲ್ಲ ಇನ್ಮುಂದೆ ವಾಹನವನ್ನು ಜಪ್ತಿ ಮಾಡುವಂತಹ ಕ್ರಮವನ್ನು ಕೂಡ ಕೈಗೊಳ್ಳಬಹುದಾಗಿದೆ. ಹೌದು, ಪಿಯುಸಿ ಸರ್ಟಿಫಿಕೇಷನ್ (PUC Certificate) ಪೊಲ್ಲ್ಯೂಷನ್ ಅಂಡರ್ ಕಂಟ್ರೋಲ್  ಅಂದ್ರೆ ವಾಹನದ ಹೊಗೆ ಚೆಕ್ ಮಾಡಿಸಿರುವಂತಹ ಸರ್ಟಿಫಿಕೇಟ್ ಕೂಡಾ ಪ್ರಸ್ತುತ ಬಹಳ ಮುಖ್ಯ.

 

ಮೊದಲೆಲ್ಲಾ ಕೇವಲ ಡ್ರೈವಿಂಗ್ ಲೈಸನ್ಸ್ (Driving License) ಹಾಗೂ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇದ್ರೆ ಮಾತ್ರ ಸಾಕಾಗ್ತಿತ್ತು. ಇನ್ಮೇಲೆ ವಾಲಿಡ್ ಆಗಿರುವಂತಹ ಪಿಯುಸಿ ಸರ್ಟಿಫಿಕೇಟ್ (PUC Certificate) ಇಲ್ಲದೆ ಹೋದಲ್ಲಿ ನೀವು 10000ಗಳ ವರೆಗೆ ಫೈನ್ ಕಟ್ಟಬೇಕಾಗುತ್ತದೆ. ಒಂದು ವೇಳೆ ಇದನ್ನು ನವೀಕರಣ ಮಾಡದ ಸಂದರ್ಭದಲ್ಲಿ ಕೂಡ ಫೈನ್ ಕಟ್ಟಬೇಕಾಗುತ್ತೆ. ಅಥವಾ ವಾಹನವನ್ನು ಬ್ಲಾಕ್ ಲಿಸ್ಟ್ ಮಾಡುವಂತಹ ಸಾಧ್ಯತೆ ಕೂಡ ಇರುತ್ತೆ.

ಮುಖ್ಯವಾಗಿ ವಾಹನಗಳಿಂದ ಆಗುವಂತಹ ವಾಯುಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ,  ಪೆಟ್ರೋಲ್ ಪಂಪ್ (Petrol Pump) ಗಳಲ್ಲಿ ಕ್ಯಾಮರವನ್ನು ಅಳವಡಿಸಲಾಗಿದ್ದು ನಿಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಿ ಅದರ ಪಿಯುಸಿ ಸರ್ಟಿಫಿಕೇಟ್ (PUC Certificate) ವ್ಯಾಲಿಡ್ ಆಗಿದೆಯೋ  ಅನ್ನೋದನ್ನ ಆಟೋಮೆಟಿಕ್ ಆಗಿ ಚೆಕ್ ಮಾಡುತ್ತದೆ. ಒಂದು ವೇಳೆ ಪಿಯುಸಿ ಸರ್ಟಿಫಿಕೇಟ್ ನವೀಕರಣ ಆಗದೆ ಇದ್ದಲ್ಲಿ ಆಟೋಮೆಟಿಕ್ ಆಗಿ ನಿಮ್ಮ ಮೊಬೈಲ್ಗೆ ಫೈನ್ ನೋಟಿಫಿಕೇಶನ್ ಬರುತ್ತೆ.

ನಿಮ್ಮ ಮೊಬೈಲ್ ಗೆ ನೋಟಿಫಿಕೇಶನ್ ಕಳುಹಿಸಿದ ಕೆಲ ಗಂಟೆಗಳಲ್ಲಿ ನೀವು ನವೀಕರಣ ಮಾಡದೆ ಹೋದಲ್ಲಿ 10,000ಗಳವರೆಗೂ ಕೂಡ ನೀವು ಫೈನ್ ಕಟ್ಟಬೇಕಾಗುತ್ತದೆ. ಒಟ್ಟಿನಲ್ಲಿ ಟ್ರಾಫಿಕ್ ನಿಯಮ ಪ್ರಕಾರ ಪಿಯುಸಿ ಸರ್ಟಿಫಿಕೇಟ್ ಅನ್ನು ಮಾಡಿಸಿಕೊಳ್ಳಬೇಕಾಗಿರುವುದು ಅತ್ಯಂತ ಕಡ್ಡಾಯವಾಗಿರುತ್ತದೆ.

RSS and Modi: ಮೋದಿ ಮತ್ತು ಆರೆಸ್ಸೆಸ್‌ ನಡುವಿನ ಸೀಕ್ರೆಟ್ ಏನದು?

Leave A Reply

Your email address will not be published.