Heart Attack: ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ವೈದ್ಯ, ಗಾಯಕ ಹೃದಯಾಘಾತಕ್ಕೆ ಬಲಿ

Share the Article

Udupi: ಉತ್ತಮ ಹಾಡುಗಾರ, ಫಿಟ್ನೆಸ್‌ ಫ್ರೀಕ್‌, ವೈದ್ಯರಾಗಿದ್ದ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕುಂದಾಪುರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಸತೀಶ ಪೂಜಾರಿ ಸಾಸ್ತಾನ (52) ಮೃತ ಹೊಂದಿದ್ದಾರೆ.

ಶ್ರೀಮಾತಾ ಆಸ್ಪತ್ರೆಯ ಮಾಲೀಕರಾಗಿದ್ದ ಡಾ.ಸತೀಶ್‌ ಪೂಜಾರಿ, ಫಿಟ್ನೆಸ್‌ ಕುರಿತು ಅತಿ ಹೆಚ್ಚಿನ ಒಲವು ಹೊಂದಿದ್ದಾರೆ. ಹಾಗಾಗಿ ವ್ಯಾಯಾಮ, ಜಿಮ್‌ ಮೂಲಕ ದೇಹವನ್ನು ಕಾಪಾಡಿಕೊಂಡಿದ್ದರು.

ಇಂದು ಮುಂಜಾನೆ ಕೋಟತಟ್ಟುವಿನ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಇವರು ಮೃತ ಹೊಂದಿದ್ದಾರೆ. ಇವರು ತಮ್ಮ ಹಾಡುಗಾರಿಕೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದು, ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ವ್ಯಕ್ತಿಯಾಗಿದ್ದರು. ಇವರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

Kiccha Sudeep: ‘ನಾನು ಇದುವರೆಗೂ ಬಾಸ್ ಎಂದು ಕರೆದದ್ದು ಅವರೊಬ್ಬರನ್ನು ಮಾತ್ರ’ ಎಂದ ಸುದೀಪ್- ಕಿಚ್ಚನ ಆ ಬಾಸ್ ಯಾರು ?

Leave A Reply