Tirupati: ಶಾಲೆಗೆ ಹೋಗೋ ಮಕ್ಕಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ ನಂತರ ಕೊಲೆ

Share the Article

Tirupati: ಶಾಲೆಗೆ ಹೋಗುತ್ತಿದ್ದ ಮೂವರು ಅಪ್ರಾಪ್ತ ಬಾಲಕರು ಮೂರನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ನಡೆದಿದೆ.

ಶಾಲೆಗೆ ರಜಾದಿನವಾಗಿದ್ದ ಭಾನುವಾರದಂದು ಬಾಲಕರು ಈ ಕೃತ್ಯವೆಸಗಿದ್ದು, ಬುಧವಾರ ಈ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿ ನಾಪತ್ತೆಯಾಗಿದ್ದಾಳೆಂದು ತಂದೆ ಭಾನುವಾರ ಪೊಲೀಸರಿಗೆ ದೂರು ನೀಡಿದ್ದು, ಮುಚ್‌ಮುರಿ ಪಾರ್ಕ್‌ನಲ್ಲಿ ನನ್ನ ಮಗಳು ಆಟವಾಡುತ್ತಿದ್ದು, ನಂತರ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಅನಂತರ ಪೊಲೀಸರು ಬಾಲಕಿಗಾಗಿ ಹುಡುಕಾಟ ಮಾಡಿದ್ದು, ಆಕೆ ಪತ್ತೆಯಾಗದೇ ಇದ್ದಾಗ, ಶ್ವಾನದಳವನ್ನು ಕರ್ತವ್ಯ ನಿಯೋಜಿಸಿದ್ದಾರೆ.

ನಂತರ ಸ್ನೀಫರ್‌ ಡಾಗ್‌ ನೀಡಿದ ಸುಳಿವು ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಸಹಾಯ ಮಾಡಿದೆ. ಇಷ್ಟೇ ಅಲ್ಲದೇ ಶ್ವಾನ, ಆರೋಪಿಗಳ ಮನೆ ಮುಂದೆ ಹೋಗಿ ನಿಂತಿತ್ತು. ನಂತರ ಬಾಲಕರನ್ನು ಪ್ರಾಥಮಿಕ ಹಂತದ ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಬಾಲಕರನ್ನು ಕಸ್ಟಡಿಗೆ ಪಡೆದಿದ್ದಾರೆ.

ವಿಚಾರಣೆಯಲ್ಲಿ ಬಾಲಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಈ ಬಾಲಕರು ಬಾಲಕಿ ಮುಚುಮರಿ ಪಾರ್ಕ್‌ನಲ್ಲಿ ಆಟವಾಡುತ್ತಿರುವುದನ್ನು ಗಮನಿಸಿದ್ದು, ಆಕೆಯನ್ನು ತಮ್ಮೊಂದಿಗೆ ಆಟವಾಡಲು ಬರಲು ಹೇಳಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು, ಆಕೆಯ ಬಾಯಿಯನ್ನು ಗಟ್ಟಿಯಾಗಿ ಕಟ್ಟಿ ಒಬ್ಬರಾದ ಮೇಲೆ ಒಬ್ಬರಂತೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ನಂತರ ಬಾಲಕರಿಗೆ ಆಕೆ ತನ್ನ ಪೋಷಕರಿಗೆ ತಮ್ಮ ಕುರಿತು ಹೇಳುತ್ತಾಳೆ ಎಂಬ ಭಯ ಶುರುವಾಗಿದ್ದು, ಅದಕ್ಕೆ ಆಕೆಯನ್ನು ಕೊಲೆ ಮಾಡಿ, ನಂತರ ದೇಹವನ್ನು ನೀರಿಗೆ ಎಸೆದು ಹೋಗಿರುವಾಗಿ ಹೇಳಿದ್ದಾರೆ.

Actor Darshan: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಫುಲ್ ಖುಷ್! ಕಾರಣ ಏನು ಗೊತ್ತಾ

Leave A Reply