Dengue Recovery Diet: ಡೆಂಘಿ ಜ್ವರ ಅಪಾಯ ತಪ್ಪಿಸಲು ತಪ್ಪದೇ ಈ ಆಹಾರ ಸೇವಿಸಿ! ಇದು ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಹೆಚ್ಚಿಸುತ್ತೆ!

Dengue Recovery Diet: ಡೆಂಘಿ ಜ್ವರ ಮುಖ್ಯವಾಗಿ ವೈರಸ್​ಗಳಿಂದ  ಹರಡುತ್ತದೆ. DENV1, DENV2, DENV3, DENV4 ಎಂಬ ನಾಲ್ಕು ವಿಧದ ವೈರಸ್‌ಗಳಿಂದ ಈ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನ ಜ್ವರ ಎಷ್ಟು ಅಪಾಯಕಾರಿ ಎಂದರೆ ಈ ಕಾಯಿಲೆ ಬಂದಾಗ  ವ್ಯಕ್ತಿಯ ರಕ್ತದಲ್ಲಿನ ಪ್ಲೇಟ್ಲೆಟ್​ಗಳು ಹಾಗೂ ಬಿಳಿರಕ್ತ ಕಣಗಳನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.

ಹೌದು, ಈ ರಕ್ತದ ಪ್ಲೇಟ್‌ಲೆಟ್‌ಗಳು ಅಥವಾ ಥ್ರಂಬೋಸೈಟ್‌ಗಳು ಅಂದರೆ, ಇದು ನಮ್ಮ ರಕ್ತದಲ್ಲಿನ ಸಣ್ಣ ಜೀವಕೋಶದ ತುಣುಕುಗಳಾಗಿವೆ, ಅದು ಹೆಪ್ಪುಗಟ್ಟುವಿಕೆಯನ್ನು ರೂಪಿಸುತ್ತದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಡೆಂಗ್ಯೂ ಸೋಂಕಿನ ಪ್ರಕರಣಗಳಲ್ಲಿ ಸಾಮಾನ್ಯ ಪ್ಲೇಟ್ಲೆಟ್ ಸಂಖ್ಯೆ 1.5 ಲಕ್ಷದಿಂದ 4 ಲಕ್ಷವಿರುವುದು 20,000 40,000 ಪ್ಲೇಟ್ಲೆಟ್ಗಳಿಗೆ ಇಳಿಯಬಹುದು. ರಕ್ತದಲ್ಲಿ ಪ್ಲೇಟ್‌ಲೆಟ್ ಎಣಿಕೆಯಲ್ಲಿ ಕಡಿಮೆ ಆದಂತೆ ರಕ್ತಸ್ರಾವದ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿ ದೇಶದಲ್ಲಿ ಡೆಂಘೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ರೋಗದಿಂದ ಚೇತರಿಸಿಕೊಳ್ಳಲು, ನಿಮ್ಮ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸುವುದು ಉತ್ತಮ.

ಪಪ್ಪಾಯಿ ಎಲೆಗಳು:

ಪಪ್ಪಾಯಿ ಎಲೆಗಳು ಡೆಂಘೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಅಪಾಯಕಾರಿ ಕಡಿಮೆ ಮಟ್ಟಕ್ಕೆ ಬೀಳುವ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಪಪ್ಪಾಯಿ ಎಲೆಗಳ ರಸ ತೆಗೆದು ಅದನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಸೇವಿಸಬಹುದು. ಅಥವಾ ಪಪ್ಪಾಯ ಹಣ್ಣಿನ ಬೀಜಗಳನ್ನು ಆಹಾರದಲ್ಲಿ ಬಳಸಿ ಸೇವಿಸಬಹುದು.

ಅರಿಶಿನ:

ಅರಿಶಿನ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಚಯಾಪಚಯ ವರ್ಧಕವಾಗಿದೆ. ಅದಕ್ಕಾಗಿ ಆಹಾರದಲ್ಲಿ ಅರಶಿನ ಸೇರಿಸಿ.

ಅಲೋವೆರಾ:

ಅಶ್ವಗಂಧ, ತುಳಸಿ ಮತ್ತು ಅಲೋವೆರಾ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಇವು ಕೂಡಾ ಚೇತರಿಕೆಯ ಪ್ರಕ್ರಿಯೆಯಲ್ಲಿ ನಿಮ್ಮ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.

ಕಿತ್ತಳೆ ಹಣ್ಣು:

ಹುಳಿ ಮಿಶ್ರಿತ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಹುಳಿ ಮಿಶ್ರಿತ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶಗಳು ಹೆಚ್ಚಾಗಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ಅಂದರೆ ವಿಟಮಿನ್ ಸಿ ಯ ಸಮೃದ್ಧ ಮಿಶ್ರಣವಾಗಿರುವ ಕಿತ್ತಳೆ, ಸ್ಟ್ರಾಬೆರಿ, ನಿಂಬೆಹಣ್ಣು, ಪಪ್ಪಾಯಿ ಇತ್ಯಾದಿಗಳನ್ನು ಹೆಚ್ಚು ಹೆಚ್ಚು ಸೇವಿಸಿ.

ಮಸಾಲೆ ಪದಾರ್ಥಗಳು:

ಶುಂಠಿ, ಬೆಳ್ಳುಳ್ಳಿ, ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿ ಮುಂತಾದ ಮಸಾಲೆಗಳನ್ನು ಚೇತರಿಕೆ ಸಮಯದಲ್ಲಿ ಆಹಾರದೊಂದಿಗೆ ಸೇವಿಸಿ.

ಹಸಿರು ತರಕಾರಿಗಳು:

ಹಸಿರು ತರಕಾರಿಗಳಲ್ಲಿ ವಿಟಮಿನ್ ಕೆ ಇರುವುದರಿಂದ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಸಾಲಾ ಟೀ:

ಗಿಡಮೂಲಿಕೆ ಚಹಾವು ಏಲಕ್ಕಿ, ಪುದೀನಾ, ದಾಲ್ಚಿನ್ನಿ, ಶುಂಠಿ ಮತ್ತು ನಿಂಬೆಯನ್ನು ಬಳಸಿ ತಯಾರಿಸುವುದಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಎಳನೀರು:

ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸಲು ಎಳನೀರನ್ನು ಸೇವಿಸಿ. ಇದು ದೇಹ ಡಿಹ್ರೈಡ್ರೇಟ್ ಆಗದಂತೆಯೂ ನೋಡಿಕೊಳ್ಳುತ್ತದೆ.

ಬೇವಿನ ಎಲೆ:

ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವುದರಿಂದ ಸಹ ಡೆಂಘಿ ಜ್ವರದ ತೀವ್ರತೆಯನ್ನು ಇಳಿಸಬಹುದು. ಆದರೆ ಬೇವಿನ ಎಲೆಯನ್ನು ಕುದಿಸಿ ಕುಡಿಯುವುದರಿಂದ ಪ್ಲೇಟ್ಲೆಟ್​ಗಳು ಹಾಗೂ ಬಿಳಿರಕ್ತ ಕಣಗಳು ಹೆಚ್ಚಾಗಿರುವುದು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ.

Bangalore: ಸುಲಿಗೆ, ಬೆದರಿಕೆ ಪ್ರಕರಣ; ನಿರೂಪಕಿ ದಿವ್ಯಾ ವಸಂತ ಕೇರಳದಲ್ಲಿ ಬಂಧನ

Leave A Reply

Your email address will not be published.