Cleaning Tips: ಬಟ್ಟೆ ಮೇಲೆ ಯಾವುದೇ ಕಲೆ ಆದ್ರು ಟೆನ್ಶನ್ ಬೇಡ! ಈ ವಿಧಾನದಲ್ಲಿ ಸುಲಭವಾಗಿ ಕ್ಲೀನ್ ಮಾಡಿ!

Cleaning Tips: ಕೆಲವೊಮ್ಮೆ ಎಷ್ಟೇ ಜಾಗರುಕರೂಕರಾಗಿದ್ದರು ಸಹ ಬಟ್ಟೆಯ ಮೇಲೆ ಕಲೆ ಆಗಿಯೇ ಆಗುತ್ತೆ. ಆದ್ರೆ ಈ ಬಟ್ಟೆಯ ಕಲೆ ತೆಗೆಯಲು ನೀವು ಹರಸಾಹಸ ಪಡುವ ಅಗತ್ಯವಿಲ್ಲ. ಹೌದು, ಡಿಟರ್ಜೆಂಟ್‌ನಿಂದ ಸ್ಕ್ರಬ್ ಮಾಡಿದರೂ ಬಟ್ಟೆಯ ಕಲೆ ಹೋಗದೆ ಇದ್ದಲ್ಲಿ, ಬಟ್ಟೆಯ ಮೇಲಿನ ಜಿಡ್ಡು, ಕಲೆ ತೆಗೆಯಲು ಡ್ರೈವಾಶ್‌ಗೆ ಕೊಡಬೇಕು ಅಂತೇನಿಲ್ಲ, ಅದಕ್ಕಾಗಿ ಈ ಸರಳ ವಿಧಾನ (Cleaning Tips) ಅನುಸರಿಸಿ ಡ್ರೆಸ್‌ ಕ್ಲೀನ್ ಮಾಡಿ.

ಬಟ್ಟೆ ಮೇಲಿನ ಮೊಂಡುತನದ ಕಲೆಗಳನ್ನು ಸ್ವಚ್ಛಗೊಳಿಸಲು ಬಟ್ಟೆಯನ್ನು ಒದ್ದೆ ಮಾಡಿ ಮತ್ತು ಕಲೆಯಾದ ಪ್ರದೇಶಕ್ಕೆ  ಅಡಿಗೆ ಸೋಡಾವನ್ನು ಹಚ್ಚಿ. ಇದು ಬಟ್ಟೆಯ ಮೇಲಿನ ಕಠಿಣ ಕಲೆಗಳನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರ ನಂತರ, ಎಂದಿನಂತೆ ಡಿಟರ್ಜೆಂಟ್ ಬಳಸಿ ನೀರಿನಿಂದ ಬಟ್ಟೆಯನ್ನು ತೊಳೆಯಿರಿ.

ನಿಮ್ಮ ಬಟ್ಟೆಯ ಮೇಲೆ ಎಣ್ಣೆಯ ಕಲೆಗಳು ಬಂದಾಗ, ವಿನೆಗರ್ ಅಂತಹ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಅದಕ್ಕಾಗಿ ಕಲೆ ಇರುವ ಬಟ್ಟೆಯನ್ನು ಬೆಚ್ಚಗಿನ  ನೀರಿನಲ್ಲಿ ನೆನೆಸಿ. ಸ್ವಲ್ಪ ಸಮಯದ ನಂತರ ಕೈಯಿಂದ ಉಜ್ಜಿದರೆ ಬಟ್ಟೆಯ ಮೇಲಿನ ಕಲೆ ನಿವಾರಣೆಯಾಗುತ್ತದೆ.

ಇನ್ನು ಗ್ರೀಸ್ ಮತ್ತು ಕಲೆಗಳನ್ನು ತೆಗೆದುಹಾಕಲು ಒಂದು ಸಣ್ಣ ನಿಂಬೆ ತುಂಡನ್ನು ಕತ್ತರಿಸಿ ಅದರ ರಸವನ್ನು ಕಲೆಯ ಮೇಲೆ ಹಿಂಡಿ. ಕೈಗಳಿಂದ ಉಜ್ಜಿ. ಹೀಗೆ ಮಾಡಿದಲ್ಲಿ ಕಲೆಯ ಬಣ್ಣವು ಕ್ರಮೇಣ ಮಸುಕಾಗುತ್ತದೆ ಹಾಗೂ ಬಟ್ಟೆಗೆ ಹೊಸ ಹೊಳಪು ಸಿಗುತ್ತದೆ.

ಬಟ್ಟೆಯಲ್ಲಿನ ಎಣ್ಣೆಯ ಕಲೆಗಳನ್ನು ತೆಗೆದುಹಾಕಲು ಇದಕ್ಕಾಗಿ ಬಟ್ಟೆಗೆ ಎಣ್ಣೆ ಬಿದ್ದ ತಕ್ಷಣ ಟಾಲ್ಕಂ ಪೌಡರ್ ಅನ್ನು ಹಚ್ಚಬೇಕು. 30 ನಿಮಿಷಗಳ ಕಾಲ ಹಾಗೇ ಇಡಿ. ಟಾಲ್ಕಮ್ ಪೌಡರ್ ಬಟ್ಟೆಯ ಮೇಲಿನ ಎಣ್ಣೆಯನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಕನಿಷ್ಠ 30 ನಿಮಿಷಗಳ ನಂತರ, ಡಿಟರ್ಜೆಂಟ್ ಬಳಸಿ ಕೈಗಳಿಂದ ಉಜ್ಜುವ ಮೂಲಕ ಎಣ್ಣೆ ಕಲೆ ತೆಗೆದುಹಾಕಬಹುದು. ಹೀಗೆ ಮಾಡುವುದರಿಂದ ಕಲೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

Petrol Pump: ವಾಹನ ಸವಾರರೇ ಎಚ್ಚರ! ಪೆಟ್ರೋಲ್ ಬಂಕ್ ನಲ್ಲಿ ಹೀಗೂ ನಡೆಯುತ್ತೆ ಮಹಾ ಮೋಸ!

Leave A Reply

Your email address will not be published.