Rahul Gandhi: ಹಿಂದೂಗಳು, ಹಿಂಸಾಚಾರಿಗಳು ಹೇಳಿಕೆ ವಿಚಾರ- ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಬೆಂಬಲ

Rahul Gandhi: ಹಿಂದೂಗಳು, ಹಿಂಸಾಚಾರಿಗಳು ಹೇಳಿಕೆ ವಿಚಾರ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ(Shankaracharya Avimukteshwarananda Saraswathi) ಬೆಂಬಲ ನೀಡಿದ್ದಾರೆ.

ಹೌದು, ಲೋಕಸಭೆಯಲ್ಲಿ(lokasabhe) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವಾಗ ಬಳಸಿದ ಹಿಂದೂಗಳ ಹಿಂಸಾಚಾರ ಎಂಬ ಪದವು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ರಾಜಕಾರಣಿಗಳು, ಮಠ ಮಾನ್ಯದ ಸ್ವಾಮಿಗಳು ಸಿಡಿಮಿಡಿಗೊಂಡಿದ್ದರು. ಆದರೀಗ ಈ ಬೆನ್ನಲ್ಲೇ ಜ್ಯೋತಿರ್ ಮಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ರಾಹುಲ್ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ನಾವು ರಾಹುಲ್ ಗಾಂಧಿ ಅವರ ಇಡೀ ಭಾಷಣವನ್ನು ಗಮನವಿಟ್ಟು ಕೇಳಿದ್ದೇವೆ. ಹಿಂದೂ ಧರ್ಮವು ಹಿಂಸೆಯನ್ನು ತಿರಸ್ಕರಿಸುತ್ತದೆ ಎಂದು ಅವರು ನಿಸ್ಸಂದಿಗ್ಧವಾಗಿ ಒತ್ತಿಹೇಳುತ್ತಾರೆ, ”ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.


ರಾಹುಲ್ ಗಾಂಧಿ ಭಾಷಣದ ಆಯ್ದ ಪ್ರಸಾರವನ್ನಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿ ಪ್ರಚಾರ ಮಾಡುತ್ತಿರುವುದನ್ನು ಮಠಾಧೀಶರು ಟೀಕಿಸಿದ್ದಾರೆ. ಸತ್ಯಗಳನ್ನು ತಿರುಚುವವರಿಗೆ ಉತ್ತರದಾಯಿತ್ವವನ್ನು ಅವಿಮುಕ್ತೇಶ್ವರಾನಂದ ಸರಸ್ವತಿ ಒತ್ತಾಯಿಸಿದ್ದಾರೆ. “ಗಾಂಧಿ ಹೇಳಿಕೆಯ ಆಯ್ದ ತುಣುಕುಗಳನ್ನು ಮಾತ್ರ ಪ್ರಚಾರ ಮಾಡುವುದು ತಪ್ಪುದಾರಿಗೆಳೆಯುವ ಮತ್ತು ಅನೈತಿಕವಾಗಿದೆ” ಎಂದು ಅವರು ಟೀಕಿಸಿದ್ದಾರೆ. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದೂ ಆಗ್ರಹಿಸಿದ್ದಾರೆ.

ಏನಿದು ಘಟನೆ?
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತಾದ ಚರ್ಚೆ ವೇಳೆ, ಕೋಮು ಆಧಾರದಲ್ಲಿ ಬಿಜೆಪಿ ನಾಯಕರು ಜನರನ್ನು ವಿಭಜಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆಗ ಅವರು ‘ಹಿಂಸಾತ್ಮಕ ಹಿಂದೂಗಳು’ ಎಂಬ ಪದ ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಅವರು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.

Mangaluru Love Jihad: ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆ; ಕರಾವಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌?

Leave A Reply

Your email address will not be published.