Mangaluru Love Jihad: ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆ; ಕರಾವಳಿಯಲ್ಲಿ ಮತ್ತೊಂದು ಲವ್‌ ಜಿಹಾದ್‌?

Mangaluru Love Jihad: ಹಿಂದೂ ಯುವತಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಕಾಣೆಯಾದ ಯುವತಿ ಮುಸ್ಲಿಂ ಯುವಕನ ಜೊತೆ ಇದ್ದಿದ್ದನ್ನು ಪಾಂಡೇಶ್ವರ ಠಾಣಾ ಪೊಲೀಸರು ಪತ್ತೆ ಹಚ್ಚಿರುವ ಕುರಿತು ವರದಿಯಾಗಿದೆ.

ಮಹಮ್ಮದ್‌ ಅಶ್ಫಕ್‌ ಎಂಬಾತನೇ ಆ ವ್ಯಕ್ತಿ. ಈತನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಈತನ ವಿರುದ್ಧ ಎಂಟು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಂಗಳೂರಿನ ಕಾಲೇಜಿನಲ್ಲಿ ನನ್ನ ಮಗಳು ಕಲಿಯುತ್ತಿದ್ದು, ಅವಳನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಯುವತಿಯ ತಂದೆ ಪೊಲೀಸ್‌ ಕಮೀಷನರ್‌ ಅವರಿಗೆ ದೂರು ನೀಡಿದ್ದರು.

ಯುವತಿಯನ್ನು ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಇರಿಸಲಾಗಿರುವ ಕುರಿತು ವರದಿಯಾಗಿದೆ. ಮಗಳು ಕಾಣೆಯಾಗಿರುವುದರ ಕುರಿತು ಯುವತಿ ತಂದೆ ದೂರು ನೀಡುವುದರ ಜೊತೆಗೆ ಮತಾಂತರ ಮಾಡಲಾಗಿದೆ ಎಂದು ಕೂಡಾ ದೂರನ್ನು ನೀಡಲಾಗಿದೆ. ಈ ಕುರಿತು ಪೊಲೀಸರ ಮುಂದಿನ ನಡೆಯನ್ನು ಕಾದು ನೋಡಬೇಕಿದೆ. ಯುವತಿ ತನ್ನ ಇಷ್ಟದಿಂದ ಮಹಮ್ಮದ್‌ ಅಶ್ಫಕ್‌ ಜೊತೆ ಹೋಗಿದ್ದಾಳೆಯೇ? ಅಥವಾ ಇದೊಂದು ಲವ್‌ ಜಿಹಾದ್‌ ಷಡ್ಯಂತ್ರವೇ? ಪೊಲೀಸ್‌ ತನಿಖೆ ಮೂಲಕ ಗೊತ್ತಾಗಲಿದೆ.

ಲವ್‌ ಜಿಹಾದ್‌ ಕರಾವಳಿಯಲ್ಲಿ ಇತ್ತೀಚೆಗೆ ಹೆಚ್ಚುತ್ತಿದ್ದು, ಇದರ ವಿರುದ್ಧ ಹಿಂದೂ ಸಮಾಜ ಜಾಗರೂಕರಾಗಿರಬೇಕು. ಹೆಣ್ಮಕ್ಕಳನ್ನು ಪ್ರೀತಿ, ಮದುವೆ ಎಂಬ ಹೆಸರಿನಲ್ಲಿ ಲವ್‌ ಜಿಹಾದ್‌ ಮಾಡಿ, ಮೋಸ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪ್ರಬಲ ಕಾನೂನೊಂದು ದೇಶದಲ್ಲಿ ಬರಬೇಕಿದೆ ಎಂದು ವಿಶ್ವಹಿಂದೂ ಪರಿಷದ್‌ ಶರಣ್‌ ಪಂಪ್‌ವೆಲ್‌ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Mudigere: ನಿಷೇಧಿತ ಜಲಪಾತದಲ್ಲಿ ಯುವಕರ ಮೋಜು, ಮಸ್ತಿ; ಪೊಲೀಸರ ಎಂಟ್ರಿ, ಚಡ್ಡಿಯಲ್ಲೇ ಓಡಿದ ಪ್ರವಾಸಿ ಯುವಕರು

Leave A Reply

Your email address will not be published.