Kadri Shree Manjunatha Temple: ದೇವಸ್ಥಾನದೊಳಗೆ ಬೈಕ್‌ನಲ್ಲಿಯೇ ನುಗ್ಗಿದ ಯುವಕ; ಗುಡಿಯ ಬಾಗಿಲು ಒದ್ದು ಹುಚ್ಚಾಟ

Kadri Shree Manjunatha Temple: ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಯುವಕನೋರ್ವ ಹುಚ್ಚಾಟ ಮೆರೆದಿರುವ ಘಟನೆಯೊಂದು ನಡೆದಿದೆ. ಬೆಳಂಬೆಳಿಗ್ಗೆ ಬೈಕ್‌ ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣದ ಒಳಗೆಯೇ ಬಂದಿದ್ದು, ನಂತರ ದೇವಸ್ಥಾನದಲ್ಲಿ ರಂಪಾಟ ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಅರ್ಚಕರ ಮೇಲೂ ಹಲ್ಲೆ ಯತ್ನ ನಡೆದಿದೆ ಎಂದು ವರದಿಯಾಗಿದೆ.

ಈತನ ಆಟಾಟೋಪ ಇಲ್ಲಿಗೆ ನಿಲ್ಲದೆ, ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿದ್ದು, ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ನಂತರ ದೈವಸ್ಥಾನದ ಬಳಿ ಇದ್ದ ಕತ್ತಿಯನ್ನು ಕೈಗೆತ್ತಿಕೊಂಡಿದ್ದು, ಹುಚ್ಚನ ರೀತಿಯಲ್ಲಿ ವರ್ತನೆ ಮಾಡಿದ್ದಾನೆ. ಅಲ್ಲಿ ಸ್ಥಳದಲ್ಲಿ ಇದ್ದವರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಈ ಘಟನೆ ಕುರಿತು ಕದ್ರಿ ಠಾಣೆಗೆ ದೇವಸ್ಥಾನದ ಮುಖ್ಯಾಧಿಕಾರಿ ದೂರು ನೀಡಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.

ದೇವಸ್ಥಾನದಲ್ಲಿ ದಾಂಧಲೆ ಮಾಡಿದ ಯುವ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಕುರಿತು ಮಾಹಿತಿ ದೊರಕಿದೆ.

ಬೆಳಗ್ಗೆ 7.20 ಕ್ಕೆ ಯುವಕ ಗೇಟ್‌ ದೂಡಿಕೊಂಡು ಬೈಕ್‌ನಲ್ಲಿಯೇ ಗರ್ಭಗುಡಿಯ ಆವರಣದೊಳಗೆ ಬಂದಿದ್ದು, ಅದನ್ನು ನೋಡಿದ ಭದ್ರತಾ ಸಿಬ್ಬಂದಿ, ಸಾರ್ವಜನಿಕರು ಹಿಡಿದು ನಿಲ್ಲಿಸಿದ್ದಾರೆ. ನಂತರ ದೇವಸ್ಥಾನದ ಮೇಲೆ ಹೋಗಿದ್ದಾನೆ. ಅನಂತರ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ನಂತರ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದರು ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಹೇಳಿದ್ದಾರೆ.

ಮಾನಸಿಕ ಅಸ್ವಸ್ಥನ ರೀತಿ ಕಾಣ್ತಿದ್ದನಂತೆ. ಪೊಲೀಸರು ಈ ಕುರಿತು ವಿಚಾರಣೆ ಮಾಡಬೇಕು. ಕಳೆದ ಸಾರಿ ಇದ್ದ ಸೆಕ್ಯೂರಿಟಿ ಏಜೆನ್ಸಿ ಚೇಂಜ್‌ ಮಾಡಿದ್ದು, ಇದೀಗ ಬೇರೆಯವರನ್ನು ಹಾಕಿದ್ದೇವೆ. ದೇವಸ್ಥಾನ ಶುದ್ಧೀಕರಣ ಎಲ್ಲಾ ಮಾಡಿದ್ದೇವೆ ಎಂದು ಹೇಳಿದ್ದಾರೆ.

i Phone: ಈಕೆಗೆ 20 ಜನ ಲವ್ವರ್‌; ಪ್ರತಿಯೊಬ್ಬರಿಂದ ಪಡೆದ್ಳು ಒಂದೊಂದು ಐಫೋನ್‌; ನಂತರ ಫೋನ್ ಮಾರಿ ಮಾಡಿದ್ದೇನು?‌ ಗೊತ್ತೇ?

Leave A Reply

Your email address will not be published.